AUSಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ – ಕೂಸಿನೆದುರು ಗೆದ್ದೇ ಇಲ್ಲ ಕಾಂಗರೂ
ಕ್ರಿಕೆಟ್ ಜಗತ್ತಿನ ಮತ್ತೊಂದು UPSET

AUSಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ – ಕೂಸಿನೆದುರು ಗೆದ್ದೇ ಇಲ್ಲ ಕಾಂಗರೂಕ್ರಿಕೆಟ್ ಜಗತ್ತಿನ ಮತ್ತೊಂದು UPSET

ಟಿ-20 ವಿಶ್ವಕಪ್​ನಲ್ಲಿ ಒಂದೊಂದು ಪಂದ್ಯಗಳೂ ರಣರೋಚಕವಾಗಿದೆ. ಇಲ್ಲಿ ಬಲಿಷ್ಠರು-ಬಲಹೀನರು ಅನ್ಕೊಂಡಿದ್ದ ಲೆಕ್ಕಾಚಾರಗಳೆಲ್ಲಾ ಉಲ್ಟಾ ಹೊಡ್ದಿವೆ. ಚೊಚ್ಚಲ ಬಾರಿಗೆ ವಿಶ್ವಕಪ್ ಆಡ್ತಿರೋರು ಚಾಂಪಿಯನ್ ತಂಡಿಗಳಿಗೇ ನಡುಕ ಹುಟ್ಟಿಸಿದ್ದಾರೆ. ಈಗ ಐಸಿಸಿ ಟೂರ್ನಿಗಳಲ್ಲೇ ದಿ ಮೋಸ್ಟ್ ಸಕ್ಸಸ್​ಫುಲ್ ಟೀಂ ಆಗಿ ಹೈಯೆಸ್ಟ್ ಟ್ರೋಫಿಗಳನ್ನ ಗೆದ್ದಿರೋ ಆಸ್ಟ್ರೇಲಿಯಾ ತಂಡ ಜಿಂಬಾಂಬ್ವೆ ವಿರುದ್ಧ ಪಲ್ಟಿ ಹೊಡೆದಿದೆ. ಎಲ್ಲಿಯ ಆಸ್ಟ್ರೇಲಿಯಾ.. ಎಲ್ಲಿಯ ಜಿಂಬಾಂಬ್ವೆ ಅನ್ನಿಸ್ಬೋದು. ಹಾಗಂತ ಜಿಂಬಾಂಬ್ವೆ ವಿರುದ್ಧ ಕಾಂಗರೂಗಳು ಸರೆಂಡರ್ ಆಗ್ತಿರೋದು ಮೊದ್ಲೇನು ಅಲ್ಲ.

ಇದನ್ನೂ ಓದಿ : ಶಾಸಕ ಬೈರತಿ ಬಸವರಾಜ್‌ಗೆ ಆರೋಗ್ಯ ಸಮಸ್ಯೆ! – ಅರೆಸ್ಟ್‌ ಆಗ್ತಿದ್ದಂತೆ ಏನಾಯ್ತು?

10ನೇ ಆವೃತ್ತಿಯ ಟಿ-20 ವಿಶ್ವಕಪ್​ನಲ್ಲಿ ಫಾರ್ ದಿ ಫಸ್ಟ್ ಟೈಂ 20 ತಂಡಗಳು ಅಖಾಡಕ್ಕಿಳಿದಿವೆ. ಇಂಟ್ರೆಸ್ಟಿಂಗ್ ಅಂದ್ರೆ ಗ್ರೂಪ್ ಸ್ಟೇಜ್​ನ ಪಂದ್ಯಗಳಲ್ಲೇ ನೆಕ್ ಟು ನೆಕ್ ಫೈಟ್ ನಡೀತಿದೆ. ನೇಪಾಳ, ಯುಎಸ್​ಎ, ನೆದರ್​ಲ್ಯಾಂಡ್ ಕೆನಡಾ ತಂಡಗಳೂ ಕೂಡ ಟಫ್ ಫೈಟ್ ಕೊಡ್ತಿವೆ. ಈಗ ಜಿಂಬಾಂಬ್ವೆ ಆಟಗಾರರು ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೇ ನೀರು ಕುಡ್ಸಿದ್ದಾರೆ. ಶುಕ್ರವಾರ ನಡೆದ ಈ ಪಂದ್ಯ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದೆ. ಒಂದ್ಕಡೆ ಜಿಂಬಾಂಬ್ವೆ ತಂಡ ಸೂಪರ್ 8ನತ್ತ ಮುನ್ನುಗ್ತಿದ್ರೆ ಆಸೀಸ್ ತಂಡ ಕ್ರಿಟಿಕಲ್ ಕಂಡೀಷನ್​ನಲ್ಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 67 ರನ್ ಗಳ ಸುಲಭ ಗೆಲುವು ಸಾಧಿಸಿದ್ದ ಆಸೀಸ್ ಈಗ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿದೆ. ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿದ ಖುಷಿಯಲ್ಲಿ ಜಿಂಬಾಬ್ವೆ ಆಟಗಾರರು ಮೈದಾನದಲ್ಲೇ ಕುಣಿದು ಕುಪ್ಪಳಿಸಿದರು.

ಶುಕ್ರವಾರ ಕೊಲಂಬೋದ ಆರ್​.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಆಸೀಸ್ ವರ್ಸಸ್ ಜಿಂಬಾಬ್ವೆ ನಡುವಿನ ಪಂದ್ಯ ಯಾವ ಥ್ರಿಲ್ಲರ್ ಸಿನಿಮಾಗೂ ಕಮ್ಮಿ ಇರ್ಲಿಲ್ಲ. ಗ್ರೂಪ್ ಬಿ-ನಲ್ಲಿ ಆಸ್ಟ್ರೇಲಿಯಾವನ್ನು ಜಿಂಬಾಂಬ್ವೆ ಪಡೆ 23 ರನ್‌ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡು 169 ರನ್ ಗಳನ್ನು ಗಳಿಸಿತು. 170 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆಸೀಸ್ ತಂಡ 19.3 ಓವರ್ ಗಳಲ್ಲಿ 146 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಗಿದೆ. ಈ ಮೂಲಕ 23 ರನ್​ಗಳಿಂದ ಸೋಲೊಪ್ಪಿಕೊಳ್ತು. ಜಿಂಬಾಂಬ್ವೆ ಪರ ಬ್ಲೆಸ್ಸಿಂಗ್ ಮುಝರಬಾನಿ 4 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಒಟ್ಟು 4 ಓವರ್‌ಗಳಲ್ಲಿ 17 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟ ಬ್ಲೆಸ್ಸಿಂಗ್‌ 4 ವಿಕೆಟ್‌ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಌಕ್ಚುಲಿ ಈ ಮುಜರಾಬಾನಿ 2025ರ ಐಪಿಎಲ್​ನಲ್ಲಿ ಆರ್​ಸಿಬಿ ಈತನನ್ನ ಪ್ಲೇಆಫ್ ಪಂದ್ಯಗಳ ವೇಳೆ ಬದಲಿ ಆಟಗಾರನಾಗಿ ಖರೀದಿ ಮಾಡಿತ್ತು. ಬಟ್ ಪ್ಲೇಯಿಂಗ್ 11ನಲ್ಲಿ ಆಡಿರಲಿಲ್ಲ. ಆ ನಂತ್ರ ತಂಡದಿಂದ ರಿಲೀಸ್ ಮಾಡಿದ್ರು. ಇನ್ನು ಜಿಂಬಾಂಬ್ವೆ ವಿರುದ್ಧದ ಆಸೀಸ್ ಸೋಲಿಗೆ ಓವರ್ ಕಾನ್ಫಿಡೆನ್ಸ್ ಮುಳುವಾಗಿದೆ.

ಜಿಂಬಾಬ್ವೆ ಎದುರು ಮತ್ತೆ ಮುಗ್ಗರಿಸಿದ ಆಸ್ಟ್ರೇಲಿಯಾ!

ಜಿಂಬಾಂಬ್ವೆಯನ್ನ ವೀಕ್ ಅಂತಾ ಕರೆದ್ರೂ ಆಸೀಸ್ ಮಾತ್ರ ಪದೇಪದೆ ಮುಗ್ಗರಿಸ್ತಾನೇ ಇದೆ. 2007ರ ಚೊಚ್ಚಲ ‌ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನ ಮಣಿಸಿತ್ತು. ಇದೀಗ 19 ವರ್ಷಗಳ ಬಳಿಕ ಅದ್ಭುತ ಜಯ ಸಾಧಿಸಿ ಮೆರೆದಿದೆ. ಈ ಮೂಲಕ ಟಿ-20 ವಿಶ್ವಕಪ್ ನಲ್ಲಿ ಆಸೀಸ್ ವಿರುದ್ಧ 100 ಪರ್ಸೆಂಟ್ ಗೆಲುವಿನ ರೆಕಾರ್ಡ್ಸ್ ಹೊಂದಿರೋ ಏಕೈಕ ತಂಡವಾಗಿದೆ. ಜಿಂಬಾಬ್ವೆ ನೀಡಿರೋ ಸೋಲಿನ ಆಘಾತಕ್ಕೆ ಆಸೀಸ್ ತಂಡ ಸೂಪರ್ 8ನಿಂದಲೇ ಹೊರಬೀಳೋ ಆತಂಕದಲ್ಲಿದೆ. ಬಿ-ಗುಂಪಿನಲ್ಲಿ ಶ್ರೀಲಂಕಾ ಮೊದಲ 2 ಪಂದ್ಯಗಳನ್ನ ಗೆದ್ದು ಅಗ್ರಸ್ಥಾನದಲ್ಲಿದೆ. ಜಿಂಬಾಬ್ವೆ ಕೂಡ 2 ಪಂದ್ಯ ಗೆದ್ದಿದ್ದರೂ ರನ್‌ರೇಟ್‌ ಕಾರಣದಿಂದ 2ನೇ ಸ್ಥಾನದಲ್ಲಿದೆ. ಫೆ.16 ರಂದು ಶ್ರೀಲಂಕಾ vs ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಒಂದು ವೇಳೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ, ಜಿಂಬಾಬ್ವೆ ಸೂಪರ್‌-8 ಹಂತಕ್ಕೆ ಜಿಗಿಯಲಿದೆ. ಆಸ್ಟ್ರೇಲಿಯಾ ಟೂರ್ನಿಗೆ ಟಾಟಾ ಬೈಬೈ ಹೇಳ್ಬೇಕಾಗುತ್ತೆ.

Shantha Kumari