ಇನ್‌ಸ್ಟಾಗ್ರಾಮ್‌  ಪ್ರೀತಿ, ದ್ರೋಹ, ಬ್ಲ್ಯಾಕ್‌ಮೇಲ್  – ಕೊ*ದು ಸೆಪ್ಟಿಕ್ ಟ್ಯಾಂಕ್‌ ಶ*ವ ಹಾಕಿದ ಪಾಪಿ

 ಇನ್‌ಸ್ಟಾಗ್ರಾಮ್‌  ಪ್ರೀತಿ, ದ್ರೋಹ, ಬ್ಲ್ಯಾಕ್‌ಮೇಲ್  – ಕೊ*ದು ಸೆಪ್ಟಿಕ್ ಟ್ಯಾಂಕ್‌ ಶ*ವ ಹಾಕಿದ ಪಾಪಿ

ಮಧ್ಯಪ್ರೇದಶದಲ್ಲಿ ಪ್ರೇಮಿಯನ್ನ ಬಿಕರವಾಗಿ ಮರ್ಡರ್ ಮಾಡಲಾಗಿದೆ. ಮಧ್ಯಪ್ರದೇಶದ ಭೋಪಾಲ್‌ನ ನಿಶಾತ್‌ಪುರ ಪ್ರದೇಶದ ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಗುರುವಾರ  ಸಂಜೆ 33 ವರ್ಷದ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಾರಂಭವಾಗಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಕೊನೆಗೊಂಡ ಪ್ರೀತಿ, ದ್ರೋಹ, ಬ್ಲ್ಯಾಕ್‌ಮೇಲ್ ಮತ್ತು ಕೊಲೆಯಲ್ಲಿ ಅಂತ್ಯವಾದ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ.

ಕೊಲೆಯಾದ ದುರ್ದೈವಿಯನ್ನು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಸೋಮವಾರ (ಫೆ.9) ಸಿಯಾಳನ್ನು ಈಕೆಯ  ಪ್ರಿಯಕರ ಸಮೀರ್ ತನ್ನ ಕುಟುಂಬ ಸದಸ್ಯರ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಈಕೆಯ ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ, ಕಮಲಾ ನಗರದ ಅವರ ಮನೆಯ ಬಳಿಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾನೆ.

ಇದನ್ನೂ ಓದಿ: ಎಣ್ಣೆ ಪಾರ್ಟಿ ವೇಳೆ ಕಿರಿಕ್ – ಕಿಕ್‌ನಲ್ಲಿ ಸ್ನೇಹಿತನ ಕಥೆ ಮುಗಿಸಿದ ಕಿರಾತಕರು

ಸುಮಾರು ಒಂದು ವರ್ಷದ ಹಿಂದೆ, ಸಿಯಾ ಮತ್ತು ಸಮೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಆಗಿದ್ರು. ಹಾಯ್ ಎಂದು ಶುರುವಾದ ಚಾಟ್ ನಂತರ ಪ್ರೀತಿಯಾಗಿ ಬದಲಾಗಿತ್ತು. ಪ್ರೀತಿಯಿಂದ ಕುರುಡಾಗಿ, ಸಿಯಾ ಮಹಾರಾಷ್ಟ್ರದಲ್ಲಿರುವ ತನ್ನ ಮನೆಯನ್ನು ತೊರೆದು ಸಮೀರ್ ಜೊತೆ ವಾಸಿಸಲು ಸುಮಾರು ಮೂರು ತಿಂಗಳ ಹಿಂದೆ ಭೋಪಾಲ್‌ಗೆ ತೆರಳಿದ್ದಳು.   ಆದರೆ, ಸಮೀರ್ ಈಗಾಗಲೇ ವಿವಾಹಿತನಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದನು. ಸಿಯಾಳು ಕಮಲಾ ನಗರದ ತನ್ನ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಿದ್ದಂತೆ, ದಿನನಿತ್ಯ ಜಗಳಗಳು ಭುಗಿಲೆದ್ದವು. ಪೊಲೀಸ್ ಮೂಲಗಳ ಪ್ರಕಾರ, ಸಿಯಾ ಮತ್ತು ಸಮೀರ್‌ನ ಪತ್ನಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಮನೆಯಲ್ಲಿ ಜೋರಾದ ಜಗಳ ನಡೆಯುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.

ನಂತ್ರ ಸಿಯಾಳು ಸಮೀರ್ ಮೇಲೆ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಅವನು ನಿರಾಕರಿಸಿದರೆ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಳು ಹಾಗೂ ಕಾನೂನು ಕ್ರಮ ಜರುಗಿಸುವಂತೆ ಬೆದರಿಕೆ ಹಾಕಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪರಿಸ್ಥಿತಿ ಉದ್ವಿಗ್ನವಾಯಿತು. ಉದ್ವಿಗ್ನತೆಯನ್ನು ಸಹಿಸಲಾಗದೆ ಸಮೀರ್ ಪತ್ನಿ ಜಬಲ್ಪುರದಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದಾಳೆ.

 

Kishor KV