ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್‌ ವಿಧಿವಶ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್‌ ವಿಧಿವಶ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್‌ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಜೋ ಸೈಮನ್‌ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಏರ್ಪಡಿಸಲಾಗಿತ್ತು. ತುರ್ತು ಸಭೆಯಲ್ಲಿ ಹಿರಿಯ ನಿರ್ದೇಶಕ ಜೋ ಸೈಮನ್‌ ಭಾಗವಹಿಸಿದ್ದರು. ಸಭೆ ವೇಳೆ ಜೋ ಸೈಮನ್ ಅವರಿಗೆ ಹೃದಯಾಘಾತ ಸಂಭವಿಸಿತು. ಜೋ ಸೈಮನ್ ಕುಸಿದು ಬಿದ್ದರು. ತಕ್ಷಣ ಅವರನ್ನ ಹತ್ತಿರದಲ್ಲೇ ಇದ್ದ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಿ ಜೋ ಸೈಮನ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಇದನ್ನೂ ಓದಿ: PAK ಬೌಲರ್ ಗೆ ಕಿಶನ್ ವಾರ್ನಿಂಗ್ – ಕಾಂಟ್ರವರ್ಸಿ ತಾರಿಕ್ ಗೆ ಬ್ಯಾಕ್ ಫೈರ್

ಕನ್ನಡ ಚಿತ್ರರಂಗಕ್ಕೆ ಜೋ ಸೈಮನ್‌ ಅಪಾರ ಕೊಡುಗೆ ನೀಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ಗೀತ ಸಾಹಿತಿಯಾಗಿ, ಬರಹಗಾರರಾಗಿ ಜೋ ಸೈಮನ್‌ ಜನಪ್ರಿಯತೆ ಪಡೆದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ಜೋ ಸೈಮನ್‌ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಫಿಲ್ಮ್ ಡೈರೆಕ್ಟರ್ಸ್ ಅಸೋಸಿಯೇಷನ್‌ನಲ್ಲಿ ಜೋ ಸೈಮನ್‌ ವೈಸ್ ಪ್ರೆಸಿಡೆಂಟ್ ಆಗಿದ್ದರು.
ಸಾಹಸ ಸಿಂಹ ಡಾ ವಿಷ್ಣುವರ್ಧನ್ ಜೊತೆ ಹಲವು ಸಿನಿಮಾಗಳಲ್ಲಿ ಜೋ ಸೈಮನ್ ಕೆಲಸ ಮಾಡಿದ್ದರು. ಡಾ ವಿಷ್ಣುವರ್ಧನ್ – ಜೋ ಸೈಮನ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ಹಾಗ್ನೋಡಿದ್ರೆ, ಡಾ ವಿಷ್ಣುವರ್ಧನ್ ಅವರಿಗೆ ‘ಸಾಹಸ ಸಿಂಹ’ ಎಂಬ ಬಿರುದು ಬರಲು ಕಾರಣ ಜೋ ಸೈಮನ್ ನಿರ್ದೇಶನದ ಚಿತ್ರ ‘ಸಾಹಸ ಸಿಂಹ’. ಈ ಚಿತ್ರ 1982ರಲ್ಲಿ ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸಖತ್ ಯಶಸ್ಸು ಕಂಡಿತ್ತು.

Kishor KV