PAK ಸಂಹಾರಕ್ಕಾಗಿ ಲಂಕೆಗೆ ಭಾರತ – ಕುತಂತ್ರಿಗಳ ಸವಾಲ್ ಗೆಲ್ತಾರಾ ಸೂರ್ಯ?
ಸ್ಪಿನ್ ಅಸ್ತ್ರ ವರವೋ.. ಶಾಪವೋ?

PAK ಸಂಹಾರಕ್ಕಾಗಿ ಲಂಕೆಗೆ ಭಾರತ – ಕುತಂತ್ರಿಗಳ ಸವಾಲ್ ಗೆಲ್ತಾರಾ ಸೂರ್ಯ?ಸ್ಪಿನ್ ಅಸ್ತ್ರ ವರವೋ.. ಶಾಪವೋ?

ಟಿ-20 ವಿಶ್ವಕಪ್​ನಲ್ಲಿ ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿರೋ ಮೋಸ್ಟ್ ಅವೇಟೆಡ್ ಮ್ಯಾಚ್ ಅಂದ್ರೆ ಅದು ಇಂಡೋಪಾಕ್ ಫೈಟ್. ಫೆಬ್ರವರಿ 15ಕ್ಕೆ ಶ್ರೀಲಂಕಾದ ಕೊಲೊಂಬೋದಲ್ಲಿ ಪಂದ್ಯ ಫಿಕ್ಸ್ ಆಗಿದೆ. ಆಲ್ರೆಡಿ ಎರಡೆರಡು ಪಂದ್ಯಗಳನ್ನ ಗೆದ್ದು ಗ್ರೂಪ್ ಎನಲ್ಲಿ ಟೇಬಲ್ ಟಾಪರ್ಸ್ ಆಗಿರೋ ಎರಡೂ ತಂಡಗಳು ಪ್ರತಿಷ್ಠೆಯಿಂದಲೇ ಮೈದಾನಕ್ಕಿಳೀತಾರೆ. ಈ ಪಂದ್ಯದಲ್ಲಿ ಭಾರತವೇ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದ್ರೂ ಪಾಕ್ ಕೂಡ ಠಕ್ಕರ್ ಕೊಡೋಕೆ ಕಾಯ್ತಿದೆ.

ಇದನ್ನೂ ಓದಿ : ಮಹಿಳೆಯರಿಗೆ ಮತ್ತೆ ಬಂಪರ್‌ – 1.31 ಕೋಟಿ ಮಹಿಳೆಯರ ಖಾತೆಗೆ 5000 ರೂ ಹಣ

ಭಾರತ-ಪಾಕ್ ಪಂದ್ಯ ಅಂದ್ರೆ ಅದು ಜಸ್ಟ್ ಗೇಮ್ ಅಲ್ಲ. ಅಲ್ಲಿ ಎಮೋಷನ್ಸ್ ಇರುತ್ತೆ.. ಅಗ್ರೆಶನ್ ಇರುತ್ತೆ.. ಪ್ರೆಸ್ಟೀಜ್ ಪ್ರಶ್ನೆಯಾಗಿರುತ್ತೆ. ಮೈದಾನದ ಒಳಗೂ ಹೊರಗೂ ಡಾಮಿನೇಷನ್​ ಮೈಂಡ್​ಸೆಟ್ ಇರುತ್ತೆ. ಹೀಗಾಗಿ ಎರಡೂ ತಂಡಗಳ ಆಟಗಾರರೂ ಜಿದ್ದಿನಿಂದ್ಲೇ ಕಣಕ್ಕಿಳೀತಾರೆ. ಆಲ್ರೆಡಿ ಪಂದ್ಯದ ಆರಂಭಕ್ಕೂ ಮುನ್ನವೇ ಪಾಕಿಸ್ತಾನದ ಕೆಲ ಪ್ಲೇಯರ್​ಗಳು ಭಾರತಕ್ಕೆ ನೇರಾನೇರ ಸವಾಲ್ ಹಾಕಿದ್ದಾರೆ. ಉಸ್ಮಾನ್ ತಾರಿಕ್, ಸಲ್ಮಾನ್ ಅಲಿ ಅಘಾ, ಸಾಹಿಬ್​ಜಾದಾ ಫರ್ಹಾನ್ ನಾವೇ ಗೆಲ್ಲೋದು ಅನ್ನೋ ಥರ ಸ್ಟೇಟ್​ಮೆಂಟ್ಸ್ ಕೊಟ್ಟಿದ್ದಾರೆ.

ಸೂಪರ್ 8 ಟಿಕೆಟ್ ಗಾಗಿ ಇಂಡೋ-ಪಾಕ್ ಫೈಟ್!

ಆಲ್ರೆಡಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಫೀವರ್ ಸ್ಟಾರ್ಟ್ ಆಗಿದ್ದು ಮತ್ತೊಂದು ಸೂಪರ್ ಸಂಡೇಗಾಗಿ ಕೋಟ್ಯಂತರ ಭಾರತೀಯರು ಕಾಯ್ತಿದ್ದಾರೆ. ಗ್ರೂಪ್ ಎನಲ್ಲಿ ಭಾರತ ಹಾಗೂ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಟಾಪ್​ನಲ್ಲಿದ್ದು ಭಾನುವಾರದ ಪಂದ್ಯ ಗೆದ್ದ ತಂಡಕ್ಕೆ ಸೂಪರ್ 8 ರ ಟಿಕೆಟ್ ಫಿಕ್ಸ್ ಆಗುತ್ತೆ. ಹೀಗಾಗಿ ಈ ಬಾರಿಯ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ವಿಕ್ಟರಿಗಾಗಿ ಎರಡೂ ತಂಡಗಳು ಅಖಾಡಕ್ಕಿಳಿಯಲಿವೆ.

ಭಾರತಕ್ಕಿರೋ ಪ್ಲಸ್ & ಮೈನಸ್!

  1. ಚುಟುಕು ಮಾದರಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತವೇ ಬಾಸ್
  2. ಕಳೆದ ಟಿ-20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಗೆಲುವು
  3. ಭಾರತದ ಬ್ಯಾಟಿಂಗ್ & ಬೌಲಿಂಗ್ ಎರಡೂ ಮೋಸ್ಟ್ ಡೇಂಜರಸ್
  4. ಸತತ 2 ಪಂದ್ಯ ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ ನಂಬರ್ 1 ಸ್ಥಾನ
  5. ಭಾರತದ ವೀಕ್ ನೆಸ್ ಅಂದ್ರೆ ಸ್ಪಿನ್ ಬೌಲರ್ಸ್ ಎದುರು ಸ್ವಲ್ಪ ಸ್ಲೋ
  6. ಶುಕ್ರವಾರ ಲಂಕಾಗೆ ಟ್ರಾವೆಲ್ ಮಾಡಿ ಭಾನುವಾರ ಪಂದ್ಯಕ್ಕೆ ತಯಾರಿ
  7. ಅಭಿಷೇಕ್ ಶರ್ಮಾ ಪಾಕಿಸ್ತಾನದ ವಿರುದ್ಧ ಆಡೋದು ಅನುಮಾನ

ಸದ್ಯಕ್ಕಂತೂ ಭಾರತೀಯ ಆಟಗಾರರ ಫಾರ್ಮ್ ಸೂಪರ್ ಡೂಪರ್ ಆಗಿದೆ. ಹೀಗಾಗಿ ಈ ಪಂದ್ಯವನ್ನೂ ಭಾರತವೇ ಗೆಲ್ಲೋದು ಪಕ್ಕಾ. ಹಾಗಂತ ಪಾಕಿಸ್ತಾನವನ್ನ ಡಮ್ಮಿ ಟೀಂ ಅಂತಾ ಹೇಳೋಕಾಗಲ್ಲ. ಅವ್ರೂ ಕೂಡ ಫೈಟ್ ಕೊಡೋಕೆ ರೆಡಿ ಇದ್ದಾರೆ. ಯಾಕಂದ್ರೆ ಭಾರತದ ಎದುರು ಸೋತು ಸೋತು ಸುಣ್ಣವಾಗಿರೋ ಪಾಕಿಗಳಿಗೆ ಒಂದು ಸಲ ಆದ್ರೂ ಗೆಲ್ಬೇಕು ಮರ್ಯಾದೆ ಉಳಿಸಿಕೊಳ್ಬೇಕು ಎಷ್ಟಂತ ಅವಮಾನ ಅನುಭವಿಸೋದು ಅನ್ನೋ ಟಾರ್ಗೆಟ್​ನಲ್ಲಿರ್ತಾರೆ.

ಪಾಕಿಸ್ತಾನದ ಪ್ಲಸ್ & ಮೈನಸ್!

  1. ಮೊದಲ ಎರಡು ಪಂದ್ಯಗಳನ್ನ ಗೆದ್ದಿರೋದು ಪಾಸಿಟಿವ್ ಮೈಂಡ್ ಸೆಟ್
  2. ಶ್ರೀಲಂಕಾದಲ್ಲೇ ಪಾಕಿಸ್ತಾನ ಎಲ್ಲಾ ಪಂದ್ಯ, ಟ್ರಾವೆಲ್ ಮಾಡುವಂತಿಲ್ಲ
  3. ಪಾಕಿಸ್ತಾನ ತಂಡದಲ್ಲಿ ಸ್ಪಿನ್ ಬೌಲಿಂಗ್ ವಿಭಾಗ ಮತ್ತಷ್ಟು ಸ್ಟ್ರಾಂಗ್
  4. ಪಾಕ್ ಎಷ್ಟೇ ಸ್ಟ್ರಾಂಗ್ ಅನ್ಸಿದ್ರೂ ಭಾರತದ ಎದುರು ಸಾಕಷ್ಟು ಸೋಲು

Shantha Kumari