‘ಧುರಂಧರ್ 2’ ಹಿಂದಿಕ್ಕಿ ನಂಬರ್-1 ಪಟ್ಟ ಅಲಂಕರಿಸಿದ ಟಾಕ್ಸಿಕ್

ಟಾಕ್ಸಿಕ್ ಸಖತ್ ಸೌಂಡ್ ಮಾಡ್ತಿದ್ದು, ನಂಬರ್ 1 ಪಟ್ಟ ಅಲಂಕರಿಸಿದೆ. ಟಾಕ್ಸಿಕ್’ ಬಿಡುಗಡೆ ಆಗುವ ದಿನವೇ ಹಿಂದಿಯ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ಎರಡೂ ಸಿನಿಮಾಗಳ ಬಗ್ಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ‘ಧುರಂಧರ್ 2’ ಸಿನಿಮಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.
ಜನಪ್ರಿಯ ಮತ್ತು ವಿಶ್ವಾಸಾರ್ಹ ಸಿನಿಮಾ ಡೇಟಾಬೇಸ್ (ಮಾಹಿತಿ ಸಂಗ್ರಹ) ಜಾಲತಾಣವಾದ ಐಎಂಬಿಡಿ (IMDb) ಬಿಡುಗಡೆ ಮಾಡಿರುವ 2026ರ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅವರ ‘ಟಾಕ್ಸಿಕ್’ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ‘ಟಾಕ್ಸಿಕ್’ ಎದುರಾಳಿ ಎಂದು ಬಿಂಬಿತವಾಗುತ್ತಿರುವ ಬಾಲಿವುಡ್ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವನ್ನು ಹಿಂದಿಕ್ಕಿ ‘ಟಾಕ್ಸಿಕ್’ ಈ ಸಾಧನೆ ಮಾಡಿರುವುದು ವಿಶೇಷ. ವರದಿಗಳ ಪ್ರಕಾರ, ಐಎಂಡಿಬಿ ಬಳಕೆದಾರರ ಶೇ. 35 ರಷ್ಟು ಆಸಕ್ತಿಯೊಂದಿಗೆ ಯಶ್ ಸಿನಿಮಾ ಅಗ್ರಸ್ಥಾನದಲ್ಲಿದ್ದರೆ, ‘ಧುರಂಧರ್ 2’ ಶೇ. 26.6 ರಷ್ಟು ವೀಕ್ಷಕರ ಆಸಕ್ತಿಯೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ನಲ್ಲಿ ಆಸೀಸ್ಗೆ ಮುಖಭಂಗ – ಜಿಂಬಾಬ್ವೆ ವಿರುದ್ಧ ಸೋತ ಆಸ್ಟ್ರೇಲಿಯಾ
ಗೀತು ಮೋಹನ್ದಾಸ್ ನಿರ್ದೇಶನದ ಈ ಗ್ಯಾಂಗ್ಸ್ಟರ್ ಆಕ್ಷನ್ ಚಿತ್ರದಲ್ಲಿ ಯಶ್ ಅವರ ಸ್ಟೈಲಿಶ್ ಲುಕ್ ಮತ್ತು ಟೀಸರ್ ಈಗಾಗಲೇ ಭರ್ಜರಿ ವೈರಲ್ ಆಗಿದೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಬೃಹತ್ ತಾರಾಗಣವಿದೆ. ಸಿನಿಮಾನಲ್ಲಿ ದೇಶದ ಮತ್ತು ಹಾಲಿವುಡ್ನ ಕೆಲವು ಪ್ರಮುಖ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.
‘ಧುರಂಧರ್ 2’ ಸಿನಿಮಾ ‘ಟಾಕ್ಸಿಕ್’ಗೆ ಭರ್ಜರಿ ಎದುರಾಳಿ ಆಗುವ ಎಲ್ಲ ಲಕ್ಷಣಗಳನ್ನು ತೋರಿಸಿದೆ. ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ‘ಪುಷ್ಪ 2’ ಸಿನಿಮಾದ ದಾಖಲೆಯನ್ನು ಸಹ ಹಿಂದಿಕ್ಕಿದೆ. ‘ಧುರಂಧರ್’ ದೇಶ ಪ್ರೇಮವನ್ನು ಜಾಗೃತಗೊಳಿಸುವ ಸಿನಿಮಾ ಎಂಬ ಅಂಶವೂ ಸಿನಿಮಾದ ಬೆನ್ನಿಗಿದೆ. ಹೀಗಾಗಿ ಸಿನಿಮಾದ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರು ಹೆಚ್ಚು ಉತ್ಸುಕರಾಗಿದ್ದಾರೆ. ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿದ್ದು, ಯಾವುದು ಹೆಚ್ಚು ಯಶಸ್ಸು ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನೋಡಿರಿ

