ಗೆದ್ದಿದ್ದು ಭಾರತ.. ಬಿದ್ದಿದ್ದು ಪಾಕ್ – ಕಿಶನ್ ಕಿಚ್ಚಿಗೆ ನಡುಗಿದ ನಮೀಬಿಯಾ
T-20 ವಿಶ್ವಕಪ್ ನಲ್ಲಿ ಭಾರತವೇ ಬಾಸ್

ಗೆದ್ದಿದ್ದು ಭಾರತ.. ಬಿದ್ದಿದ್ದು ಪಾಕ್ – ಕಿಶನ್ ಕಿಚ್ಚಿಗೆ ನಡುಗಿದ ನಮೀಬಿಯಾT-20 ವಿಶ್ವಕಪ್ ನಲ್ಲಿ ಭಾರತವೇ ಬಾಸ್

ಟಿ-20 ವಿಶ್ವಕಪ್​ ಟೂರ್ನಿಯ ಮೋಸ್ಟ್ ಡೇಂಜರಸ್ ಟೀಂ ಆಗಿರೋ ಭಾರತ ಸತತ ಎರಡನೇ ಪಂದ್ಯ ಗೆದ್ದಿದೆ. ಫಸ್ಟ್ ಮ್ಯಾಚಲ್ಲಿ ಚೂರು ವೇರಿಯೇಷನ್ಸ್ ಆದ್ರೂ ಸೆಕೆಂಡ್ ಮ್ಯಾಚಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಕಂಪ್ಲೀಟ್ ಡಾಮಿನೇಟ್ ಮಾಡಿ ಗೆದ್ದಿದೆ. ಹಾಗೇ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್​ನಲ್ಲಿದ್ದೇವೆ ಅಂತಾ ಮೆರೀತಿದ್ದ ಪಾಕಿಸ್ತಾನಕ್ಕೆ ಗುದ್ದು ಕೊಟ್ಟು ಭಾರತ ನಂಬರ್ 1 ಸ್ಥಾನಕ್ಕೇರಿದೆ.

ಇದನ್ನೂ ಓದಿ  : ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಮೂಲಕ ಇತಿಹಾಸ ಬರೆದ ಇಟಲಿ – ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ

ಭಾರತ ಮತ್ತು ನಮೀಬಿಯಾ ಮ್ಯಾಚ್ ಅಂದಾಗ ಆಬಿಯಸ್ಲಿ ಭಾರತವೇ ಗೆಲ್ಲೋದು ಅನ್ನೋದು ಇಡೀ ಜಗತ್ತಿಗೇ ಗೊತ್ತಿತ್ತು. ಅದ್ರಂತೆ ಭಾರತವೂ ಗೆಲ್ತು. ಇನ್ನು ನಮೀಬಿಯಾ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ 2 ಚೇಂಜಸ್ ಇತ್ತು. ಅಭಿಷೇಕ್ ಶರ್ಮಾ ಹೆಲ್ತ್ ಇಶ್ಯೂನಿಂದ ಹೊರಗುಳಿದ್ರೆ ಸಂಜು ಸ್ಯಾಮ್ಸನ್ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆದಿದ್ರು. ಹಾಗೇ ಸಿರಾಜ್ ಬದಲಿಗೆ ಬುಮ್ರಾ ಟೀಂ ಸೇರ್ಕೊಂಡಿಡ್ರು. ಅಂತಿಮವಾಗಿ ಭಾರತ ಧಮಾಕೇಧಾರ್ ಪರ್ಪಾಮೆನ್ಸ್ ನೀಡಿ ವಿನ್ ಆಗಿದೆ.

ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಮಿಂಚಿದ ಟೀಂ ಇಂಡಿಯಾ!
ಪಂದ್ಯಕ್ಕೂ ಮುನ್ನ ಟಾಸ್ ಸೋತ ಭಾರತ ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾಯ್ತು. ಸಂಜು ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದ್ರು. ಸಂಜು 8 ಬಾಲಲ್ಲೇ 22 ರನ್ ಸಿಡಿಸಿ ವಿಕೆಟ್ ಕೊಟ್ರು. ಮತ್ತೊಂದೆಡೆ ಕಿಶನ್ ಮತ್ತು ತಿಲಕ್ ಇಬ್ರೂ ಸ್ಫೋಟಕ ಇನ್ನಿಂಗ್ಸ್ ಆಡಿದ್ರು. ಕಿಶನ್ ಅಂತೂ ಸಿಕ್ಸ್ ಫೋರ್​ಗಳನ್ನೇ ಬೌಲರ್​ಗಳ ಬೆವರಿಳಿಸಿದರು. 24 ಬಾಲಲ್ಲೇ 61 ರನ್ಸ್ ಬಂತು. ತಿಲಕ್, ಸೂರ್ಯ ಬೇಗ ಔಟ್ ಆದ್ರೂ ಹಾರ್ದಿಕ್ ಪಾಂಡ್ಯ ಅರ್ಧಶತಕ ಬಾರಿಸಿದ್ರು. ದುಬೆ 23 ರನ್ ಕಲೆ ಹಾಕಿದ್ರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 209 ರನ್ ಕಲೆಹಾಕಿತು. ಇನ್ನು ನಮೀಬಿಯಾ ಪರ ನಾಯಕ ಜೆರಾಲ್ಡ್ ಎರಾಸ್ಮಸ್ 4 ವಿಕೆಟ್ ತೆಗೆದಿದ್ದು ವಿಶೇಷವಾಗಿತ್ತು. ಇನ್ನು ಭಾರತದ ನೀಡಿದ ಗುರಿ ಬೆನ್ನಟ್ಟಿದ ನಮೀಬಿಯಾ 116 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ವಿಕೆಟ್ ಕಾಲಂನಲ್ಲಿ ಬಾಲ್ ಹಾಕಿದವ್ರೆಲ್ಲಾ ವಿಕೆಟ್ ಪಡೆದ್ರು. ವರುಣ್ 3 ವಿಕೆಟ್ ಪಡೆದು ಶೈನ್ ಆದ್ರು. ಇನ್ನು ಈ ಪಂದ್ಯದ ಮೂಲಕ ಭಾರತ ಹಲವು ದಾಖಲೆಗಳನ್ನೂ ಬರೆದಿದೆ.

ಭಾರತ ಬರೆದ ದಾಖಲೆಗಳು!

ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ 100ರನ್​ ಕಲೆಹಾಕಿದ ತಂಡ

ಭಾರತವು ನೆದರ್ಲ್ಯಾಂಡ್ಸ್‌ನ 12 ವರ್ಷಗಳ ಹಳೆಯ ದಾಖಲೆ ಬ್ರೇಕ್

ಒಂದು ಪಂದ್ಯವನ್ನು ಸೋಲದೆ ಸತತ 10 ಟಿ20 ವಿಶ್ವಕಪ್ ಪಂದ್ಯ ಗೆಲುವು

ಐಸಿಸಿ ಇವೆಂಟ್​ಗಳಲ್ಲಿ 27 ಪಂದ್ಯಗಳಲ್ಲಿ 25ರಲ್ಲಿ ಗೆಲುವು ಸಾಧಿಸಿದೆ

2023ರ ಏಕದಿನ ವಿಶ್ವಕಪ್‌ ನಲ್ಲಿ ಭಾರತ ಅಜೇಯವಾಗಿ ಫೈನಲ್ ಸೋಲು

ಭಾರತವು 2024ರ ಟಿ 20 ವಿಶ್ವಕಪ್‌ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಪ್ರಶಸ್ತಿ

ಚಾಂಪಿಯನ್ಸ್ ಟ್ರೋಫಿಯಲ್ಲೂ ಒಂದೇ ಒಂದು ಪಂದ್ಯವನ್ನು ಸೋಲದೆ ಟ್ರೋಫಿ

Shantha Kumari