ಇಂಡೋ ಪಾಕ್ ಕದನ ನೋಡಲು ಫ್ಯಾನ್ಸ್ ಕುತೂಹಲ – ಕೊಲಂಬೋ ವಿಮಾನ ರೇಟ್ ಕೇಳಿ ಫ್ಯಾನ್ಸ್ ಶಾಕ್

ಇಂಡೋ ಪಾಕ್ ಕದನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇನ್ನು ಎರಡು ಟೀಮ್ ಕೂಡಾ ಸ್ಟ್ರಾಂಗ್ ಆಗಿವೆ. ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಡಿರುವ ಎರಡೂ ಪಂದ್ಯಗಳಲ್ಲೂ ಗೆಲುವು ದಾಖಲಿಸಿದೆ. ಟಿ20 ವಿಶ್ವಕಪ್ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿದೆ. ಭಾನುವಾರ ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಯಾರು ಗೆಲ್ತಾರೋ ಆ ತಂಡ ಸೂಪರ್ 8 ಹಂತಕ್ಕೆ ಎಂಟ್ರಿಯಾಗಲಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ನಲ್ಲಿ ಚೊಚ್ಚಲ ಗೆಲುವು ಮೂಲಕ ಇತಿಹಾಸ ಬರೆದ ಇಟಲಿ – ನೇಪಾಳ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ
ಇಂಡೋ ಪಾಕ್ ಹೈವೋಲ್ಟೇಜ್ ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ಶ್ರೀಲಂಕಾದತ್ತ ಪಯಣ ಬೆಳಿಸಿದ್ದಾರೆ. ಫೆಬ್ರವರಿ 15 ರಂದು ನಡೆಯಲಿರುವ ಈ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಆದರೆ, ಕೊಲಂಬೊದತ್ತ ಪ್ರಯಾಣ ಮಾಡುವ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಯಾಕೆಂದರೆ, ವಿಮಾನ ಪ್ರಯಾಣ ದುಬಾರಿಯಾಗಿದೆ. ವಿಮಾನ ಟಿಕೆಟ್ ದಿಢೀರ್ ಏರಿಕೆಯಾಗಿದ್ದು, ಅಭಿಮಾನಿಗಳು ಕಂಗಾಲಾಗಿದ್ದಾರೆ. ಬೆಂಗಳೂರಿನಿಂದ ಕೊಲಂಬೊಗೆ 15 ರಿಂದ 20 ಸಾವಿರ ರೂಪಾಯಿ ಇರುತ್ತಿತ್ತು. ಈಗ ಈ ಪಂದ್ಯ ಫಿಕ್ಸ್ ಆಗುತ್ತಿದ್ದಂತೆ ವಿಮಾನದ ಬೆಲೆಗಳು ದುಬಾರಿಯಾಗಿವೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುವ ಎರಡು ದಿನ ಹಿಂದೆ ಮುಂದೆ ಟಿಕೆಟ್ ದರ ಹೆಚ್ಚಾಗಿವೆ. ಬೆಂಗಳೂರಿನಿಂದ ಕೊಲಂಬೊಗೆ ದರ 86 ಸಾವಿರ ರೂಪಾಯಿಗಳು ಎಂದು ತಿಳಿದು ಬಂದಿದೆ. ವಿಮಾನ ದರ ದಿಢೀರ್ ದುಪ್ಪಟ್ಟು ಆಗಿರುವುದು ನೋಡಿ ಅಭಿಮಾನಿಗಳು ಜೇಬು ಗಟ್ಟಿಯಾಗಿದೆಯಾ ಅಂತಾ ಮುಟ್ಟಿನೋಡಿಕೊಳ್ಳುವಂತಾಗಿದೆ.

ನೋಡಿರಿ

