ಕಿಶನ್, ಪಾಂಡ್ಯ ಮ್ಯಾಜಿಕ್ – ನಮೀಬಿಯಾ ವಿರುದ್ಧ‌ ಭಾರತಕ್ಕೆ 93 ರನ್‌ಗಳ ಜಯ!

ಕಿಶನ್, ಪಾಂಡ್ಯ ಮ್ಯಾಜಿಕ್ – ನಮೀಬಿಯಾ ವಿರುದ್ಧ‌ ಭಾರತಕ್ಕೆ 93 ರನ್‌ಗಳ ಜಯ!

ಭಾರತ ಹಾಗೂ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಟೀಂ ಇಂಡಿಯಾ ನಮೀಬಿಯಾ ವಿರುದ್ಧ 93 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಅಂತ ಗರ್ಲ್‌ಫ್ರೆಂಡ್‌ ಜೊತೆ ಮಾಲ್‌ಗೆ ಬಂದ! – ಹೆಂಡ್ತಿ ಎಂಟ್ರಿ.. ಆಮೇಲೆ ಏನಾಯ್ತು?

ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿತ್ತು. ಅಭಿಷೇಕ್‌ ಶರ್ಮಾ ಬದಲು ಬ್ಯಾಟಿಂಗ್‌ಗೆ ಇಳಿದ ಸಂಜು ಸ್ಯಾಮ್ಸನ್‌ ಮೂರು ಸಿಕ್ಸ್‌ ಸಿಡಿಸಿ 22 ರನ್‌ ಗಳಿಸಿ ಔಟಾದರು. ಸ್ಯಾಮ್ಸನ್‌ ಔಟಾದ ಬೆನ್ನಲ್ಲೇ ಇಶನ್‌ ಕಿಶನ್‌ ಸಿಕ್ಸರ್‌ ಬೌಂಡರಿಗಳ ಸುರಿಮಳೆ ಸುರಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕಿಶನ್‌ 61 ರನ್‌(24 ಎಸೆತ, 6 ಬೌಂಡರಿ, 5 ಸಿಕ್ಸ್) ಹೊಡೆದು ಔಟಾದರು. 20 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.  ತಿಲಕ್‌ ವರ್ಮಾ 25 ರನ್‌, ಶಿವಂ ದುಬೆ 23 ರನ್‌ ಹೊಡೆದರೆ ಹಾರ್ದಿಕ್‌ ಪಾಂಡ್ಯ 52 ರನ್‌ (28 ಎಸೆತ, 4 ಬೌಂಡರಿ, 4 ಸಿಕ್ಸ್‌) ಹೊಡೆದು ಔಟಾದರು.

ಎರಡನೇ ವಿಕೆಟಿಗೆ ಇಶನ್‌ ಕಿಶನ್‌ ಮತ್ತು ತಿಲಕ್‌ ವರ್ಮಾ 31 ಎಸೆತಗಳಲ್ಲಿ 79 ರನ್‌, ಹಾರ್ದಿಕ್‌ ಪಾಂಡ್ಯ ಮತ್ತು ಶಿವಂ ದುಬೆ 5ನೇ ವಿಕೆಟಿಗೆ 39 ಎಸೆತಗಳಲ್ಲಿ 81 ರನ್‌ ಜೊತೆಯಾಟವಾಡಿದ್ದು ರನ್‌ ಏರಿಕೆಗೆ ಕಾರಣವಾಯಿತು.

ಸ್ಮಿತ್‌ ಅವರು ಎಸೆದ ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಇಶನ್‌ ಕಿಶನ್‌ 4 ಸಿಕ್ಸ್‌, 1 ಬೌಂಡರಿ ಹೊಡೆಯುವ ಮೂಲಕ 28 ರನ್‌ ಚಚ್ಚಿದ್ದರು. ಭಾರತ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 120 ರನ್‌ ಚಚ್ಚಿದ್ದರೆ ಕೊನೆಯ 10 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 89 ರನ್‌ ಗಳಿಸಿತ್ತು.

ಇನ್ನು ಭಾರತದ 210 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಉತ್ತಮ ಆರಂಭ ಪಡೆದಿತ್ತು. 2 ವಿಕೆಟ್‌ ನಷ್ಟಕ್ಕೆ 86 ರನ್‌ಗಳಿಸಿತ್ತು. ಆದರೆ ಮುಂದಿನ 8 ರನ್‌ ಗಳಿಸುಷ್ಟರಲ್ಲಿ 4 ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಅಂತಿಮವಾಗಿ 116 ರನ್‌ಗಳಿಗೆ ಪತನಗೊಂಡಿತು.

ವರುಣ್‌ ಚಕ್ರವರ್ತಿ 3 ವಿಕೆಟ್‌, ಹಾರ್ದಿಕ್‌ ಪಾಂಡ್ಯ ಮತ್ತು ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌, ಆರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ, ಬುಮ್ರಾ ತಲಾ ಒಂದೊಂದು ವಿಕೆಟ್‌ ಪಡೆದರು.

Shwetha M