ನಿಮ್ಮ ಜೊತೆ ನಾನೂ ಕುಣಿತೀನಿ! – ಯಕ್ಷಗಾನದ ವೇಳೆ ರಂಗಸ್ಥಳಕ್ಕೆ ಬಂದ ಬೆಕ್ಕಿನ ಮರಿ!

ನಿಮ್ಮ ಜೊತೆ ನಾನೂ ಕುಣಿತೀನಿ! – ಯಕ್ಷಗಾನದ ವೇಳೆ ರಂಗಸ್ಥಳಕ್ಕೆ ಬಂದ ಬೆಕ್ಕಿನ ಮರಿ!

ಕರಾವಳಿಯ ಗಂಡು ಕಲೆ ಯಕ್ಷಗಾನ ಈಗಲೂ ಪ್ರಸಿದ್ಧಿಯಲ್ಲಿದೆ. ಪ್ರಸಂಗದ ನಡುವೆ ಹಾಸ್ಯಮಯ ಸಂಭಾಷಣೆಗಳು, ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಬಿಡುತ್ತವೆ. ಕೆಲವೊಮ್ಮೆ ಪ್ರಸಂಗದ ನಡೆಯುತ್ತಿರುವ ವೇಳೆ ಸಾಕು ಪ್ರಾಣಿಗಳು ರಂಗಸ್ಥಳಕ್ಕೆ ಎಂಟ್ರಿ ಕೊಟ್ಟು ಸರ್‌ಪ್ರೈಸ್‌ ನೀಡುತ್ತವೆ. ಇದೀಗ ಇಲ್ಲೊಂದು ಕಡೆ ಕೂಡ ಹೀಗೆ ಆಗಿದೆ. ಯಕ್ಷಗಾನ ನಡೆಯುತ್ತಿರುವ ವೇಳೆ ಬೆಕ್ಕೊಂದು ಎಂಟ್ರಿ ಕೊಟ್ಟಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಕ್ರಿಕೆಟ್‌ ಮ್ಯಾಚ್‌ ಗೆದ್ದ ತಂಡಕ್ಕೆ ಕಪ್ ಬದಲು‌ ಜೀವಂತ ನಾಟಿ‌ಕೋಳಿ ಬಹುಮಾನ!

ಯಕ್ಷಗಾನ ನಡೆಯುವ ವೇಳೆ ಬೆಕ್ಕಿನ ಮರಿಯೊಂದು ರಂಗಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ಕಲಾವಿದರು ಇನ್ನೇನು ಕುಣಿಯಬೇಕು ಅನ್ನುವಷ್ಟರಲ್ಲಿ ಅವರ ಕಾಲಿನ ಬಳಿ ಬಂದಿದೆ. ಕೂಡಲೇ ಗಮನಿಸಿದ ಕಲಾವಿದ ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

PK Jain Creations ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಯಕ್ಷಗಾನ ನಡೆಯುವ ವೇಳೆ ಬೆಕ್ಕು ವೇದಿಕೆ ಮೇಲೆ ಬಂದಿದೆ. ಈ ವೇಳೆ ಕಲಾವಿದರು ಅದನ್ನ ಕೈಯಲ್ಲಿಡು ಚೌಕಿಯತ್ತ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋಗೆ ಸೋಶಿಯಲ್‌ ಮೀಡಿಯಾ ಬಳಕೆದಾರರು ನಾನಾ ಕಮೆಂಟ್‌ ಮಾಡಿದ್ದಾರೆ.  ಕುಣಿಯುವಾಗ ಕಾಲಡಿ ಸಿಕ್ಕಿದ್ರೆ ಕಷ್ಟ. ಒಳ್ಳೆಯ ಕೆಲಸ ಮಾಡಿದ್ರಿ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾನು ನಿಮ್ಮ ಜೊತೆ ಕುಣಿತೀನಿ ಎಂದು ಬೆಕ್ಕಿನ ಮರಿ ರಂಗ ಸ್ಥಳಕ್ಕೆ ಬಂದಿದೆ. ಒಂದು ಚಾನ್ಸ್‌ ಕೊಡೊದಲ್ವಾ ಅಂತ ಕಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *