ಅಭಿಗೆ ಇನ್ಫೆಕ್ಷನ್.. ಕಿಶನ್ ಗೆ ಇಂಜುರಿ – NAM ಪಂದ್ಯಕ್ಕಿಲ್ಲ ಸ್ಫೋಟಕ ಓಪನರ್ಸ್
ಭಾರತಕ್ಕೆ ಫೇವರಿಸಂ ಮಾಡ್ತಿದ್ಯಾ ICC?

ಅಭಿಗೆ ಇನ್ಫೆಕ್ಷನ್.. ಕಿಶನ್ ಗೆ ಇಂಜುರಿ – NAM ಪಂದ್ಯಕ್ಕಿಲ್ಲ ಸ್ಫೋಟಕ ಓಪನರ್ಸ್ಭಾರತಕ್ಕೆ ಫೇವರಿಸಂ ಮಾಡ್ತಿದ್ಯಾ ICC?

ಟಿ-20 ವಿಶ್ವಕಪ್ ರೇಸ್​ನಲ್ಲಿ ನಮೀಬಿಯಾ ವಿರುದ್ಧ 2ನೇ ಪಂದ್ಯಕ್ಕೆ ಸಿದ್ಧವಾಗಿರೋ ಭಾರತಕ್ಕೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಭಾರತದ ಪರ ಇಬ್ಬರೂ ಸ್ಫೋಟಕ ಓಪನರ್​ಗಳು ಪಂದ್ಯದಿಂದ ಹೊರಗುಳಿಯೋ ಚಾನ್ಸಸ್ ಇದೆ. ಮೊದ್ಲೇ ಅಮೆರಿಕ ವಿರುದ್ಧದ ಮ್ಯಾಚಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಫ್ಲ್ಯಾಪ್ ಆಗಿತ್ತು. ಈಗ ಇಬ್ಬರು ಪವರ್​ಹಿಟ್ಟರ್​ಗಳೇ ಆಬ್ಸೆನ್ಸ್ ಆಗ್ತಾರಾ ಅನ್ನೋ ಟೆನ್ಷನ್ ಸ್ಟಾರ್ಟ್ ಆಗಿದೆ. ಇನ್ನೊಂದ್ಕಡೆ ನಮೀಬಿಯಾ ಕ್ಯಾಪ್ಟನ್ ಭಾರತದ ವಿರುದ್ಧ ಫೇವರಿಸಂ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಕಾಸಿಗಾಗಿ PCB ಬೆನ್ನು ಬಿದ್ದ ICC – ಭಾರತದ ವಿರುದ್ಧ ಆಡಿದ್ರಷ್ಟೇ ಭವಿಷ್ಯ

ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್.. ಕ್ರೀಸ್ ಕಚ್ಚಿ ನಿಂತ್ರೂ ಅಂದ್ರೆ ಎದುರಾಳಿ ಬೌಲರ್​ಗಳನ್ನ ಚೆಂಡಾಡಿ ಬಿಡ್ತಾರೆ. ನ್ಯೂಜಿಲೆಂಡ್ ವಿರುದ್ಧದ ಸಿರೀಸ್​ನಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ರು. ಬಟ್ ಅಮೆರಿಕ ವಿರುದ್ಧ ಬ್ಯಾಟ್ ಬಿಚ್ಚೋ ಮುನ್ನವೇ ಪೆವಿಲಿಯನ್ ಸೇರ್ಕೊಂಡಿದ್ರು. ಆದ್ರೀಗ ನಮೀಬಿಯಾ ವಿರುದ್ಧ ಮೈದಾನಕ್ಕೆ ಇಳಿಯೋದೇ ಇಲ್ವ ಅನ್ನೋ ಅನುಮಾನ ಶುರುವಾಗಿದೆ. ಒಂದ್ಕಡೆ ಅಭಿಷೇಕ್ ಶರ್ಮಾಗೆ ಸ್ಟಮಕ್ ಇನ್ಫೆಕ್ಷನ್. ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೊಂದ್ಕಡೆ ಇಶಾನ್ ಕಿಶನ್​ಗೆ ಇಂಜುರಿ.. ಇದೇ ಈಗ ಬಿಸಿಸಿಐ ಮ್ಯಾನೇಜ್​ಮೆಂಟ್​ಗೆ ತಲೆಬಿಸಿ ತಂದಿಟ್ಟಿದೆ.

ಬೂಮ್ರಾ ಯಾರ್ಕರ್ ನಲ್ಲಿ ಇಶಾನ್ ಕಿಶನ್ ಕಾಲಿಗೆ ಇಂಜುರಿ!

ನ್ಯೂಜಿಲೆಂಡ್ ವಿರುದ್ಧದ ಸರಣಿ ಮೂಲಕ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಿದ್ದ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕವೇ ವಿಶ್ವಕಪ್​ನಲ್ಲಿ ಓಪನರ್ ಆಗಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅಮೆರಿಕ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಭಾರತದ ಪರ 20 ರನ್ಸ್ ಕಲೆ ಹಾಕಿದ್ರು. ಆದ್ರೀಗ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡೋದೇ ಡೌಟಿದೆ. ನೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಯಾರ್ಕರ್‌  ಬೌಲಿಂಗ್​ನಲ್ಲಿ ಇಶಾನ್‌ ಕಿಶನ್‌ ಕಾಲಿಗೆ ಬಾಲ್ ಬಿದ್ದಿದೆ. ಈ ವೇಳೆ ಇಶಾನ್ ಕಿಶನ್ ನೋವಿನಿಂದ ಕಾಲು ಹಿಡಿದುಕೊಂಡು ನೆಲಕ್ಕೆ ಕುಸಿದಿದ್ದಾರೆ. ನಂತ್ರ ಬ್ಯಾಟಿಂಗ್ ಮಾಡೋಕೆ ಸಾಧ್ಯವಾಗಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಆಡ್ತಾರಾ ಅಥವಾ ಇಲ್ವಾ ಅನ್ನೋ ಅನುಮಾನ ಇದೆ. ಆಲ್ರೆಡಿ ಅಭಿಷೇಕ್ ಶರ್ಮಾ ಸ್ಟಮಕ್ ಇನ್ಫೆಕ್ಷನ್​ನಿಂದ 2 ದಿನ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ನಿನ್ನೆಯಷ್ಟೇ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ನಮೀಬಿಯಾ ವಿರುದ್ಧ ಅಭಿಷೇಕ್ ಶರ್ಮಾ ಬದಲಿಗೆ ಸಂಜು ಸ್ಯಾಮ್ಸನ್ ಓಪನರ್ ಆಗಿ ಕಾಣಿಸಿಕೊಳ್ತಾರೆ ಎನ್ನಲಾಗಿದೆ. ಆದ್ರೆ ಈಗ ಇಶಾನ್ ಕಿಶನ್ ಕೂಡ ಇಂಜುರಿಯಾಗಿದ್ದು ಭಾರತದ ಪರ ಯಾರು ಇನ್ನಿಂಗ್ಸ್ ಓಪನ್ ಮಾಡ್ತಾರೆ ಅನ್ನೋ ಕನ್ಫ್ಯೂಷನ್ ಸ್ಟಾರ್ಟ್ ಆಗಿದೆ. ಇನ್ನು USA ವಿರುದ್ಧದ ಪಂದ್ಯದ ವೇಳೆ ಜ್ವರದ ಕಾರಣ ಪ್ಲೇಯಿಂಗ್‌ 11ನಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಕೂಡ ನೆಟ್ ಪ್ರಾಕ್ಟೀಸ್ ಮಾಡಿದ್ದು ಕಂಪ್ಲೀಟ್ ಫಿಟ್ ಆಗಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ರಾಕ್ಟೀಸ್ ಸೆಷನ್ನಲ್ಲಿ ಭಾಗಿಯಾಗಿದ್ರು. ಹೀಗಾಗಿ ನಮೀಬಿಯಾ ವಿರುದ್ಧ ಬುಮ್ರಾ ಆಡೋದು ಕನ್ಫರ್ಮ್ ಆಗಿದೆ. ಭಾರತಕ್ಕೆ ಬೌಲಿಂಗ್​ನಲ್ಲಿ ಯಾವುದೇ ಟೆನ್ಷನ್ ಇಲ್ಲ ಅಂದ್ರೂ ಓಪನರ್ಸ್ ಸ್ವಲ್ಪ ಗೊಂದಲ ಇದೆ. ಮತ್ತೊಂದೆಡೆ ಮೊದಲ ಪಂದ್ಯವನ್ನ ಸೋತಿರೋ ನಮೀಬಿಯಾ ಕ್ಯಾಪ್ಟನ್ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಭಾರತಕ್ಕೆ ಫೇವರಿಸಂ ಮಾಡ್ತಿದ್ಯಾ ಐಸಿಸಿ?

ಟಿ-20 ವಿಶ್ವಕಪ್ ನಲ್ಲಿ ಭಾರತದ ಬಗ್ಗೆ ನಮೀಬಿಯಾ ನಾಯಕ ಗಂಭೀರ ಆರೋಪ ಮಾಡಿದ್ದಾರೆ. ಅಂದ್ರೆ ಅವ್ರಿಗೊಂದು ರೂಲ್ಸ್ ನಮಗೊಂದು ರೂಲ್ಸ್ ಯಾಕೆ ಎಂದಿದ್ದಾರೆ.  ಭಾರತಕ್ಕೆ ಅಂಡರ್ ಫ್ಲಡ್ ಲೈಟ್ಸ್ ಅಂದ್ರೆ ರಾತ್ರಿ ವೇಳೆ ತಾಲೀಮು ನಡೆಸೋಕೆ ಅವಕಾಶ ಕೊಟ್ಟಿದ್ದಾರೆ. ಬಟ್ ನಮಗೆ ಅವಕಾಶ ಕೊಟ್ಟಿಲ್ಲ. ಭಾರತದ ಪರ ಐಸಿಸಿ ಫೇವರಿಸಂ ಮಾಡ್ತಿದೆ ಎಂದಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಪ್ರೆಸ್​ಮೀಟ್​ನಲ್ಲಿ ಮಾತನಾಡಿರಫ ಜೆರಾಲ್ಡ್ ಎರಾಸ್ಮಸ್, ತಮ್ಮ ತಂಡಕ್ಕೆ ಒಂದು ದಿನವೂ ನೈಟ್​ನಲ್ಲಿ ಪ್ರಾಕ್ಟೀಸ್​ಗೆ ಸಮಯ ನಿಗದಿ ಪಡಿಸಿಲ್ಲ. ಆದ್ರೆ ಭಾರತಕ್ಕೆ ಅಂಡರ್ ಲೈಟ್ಸ್​ನಲ್ಲಿ 2 ಸೆಷನ್​ಗಳ ಟೈಂ ಫಿಕ್ಸ್ ಮಾಡಿದ್ದಾರೆ. ಇದು ತಾರತಮ್ಯ ಅಲ್ಲದೆ ಮತ್ತಿನ್ನೇನು ಎಂದಿದ್ದಾರೆ. ಅದೂ ಅಲ್ದೇ ನಮೀಬಿಯಾದ ಕ್ರೀಡಾಂಗಣಗಳಲ್ಲಿ  ಫ್ಲಡ್‌ಲೈಟ್‌ ವ್ಯವಸ್ಥೆಗಳಿಲ್ಲ. ಹೀಗಾಗಿ ನಾವು ರಾತ್ರಿ ಟೈಂ ಮ್ಯಾಚ್​ಗಳನ್ನೇ ಆಡಲ್ಲ. ಭಾರತದ ವಿರುದ್ಧದ ಪಂದ್ಯ ರಾತ್ರಿ ವೇಳೆ ನಡೆಯುತ್ತೆ. ಅಟ್​ಲೀಸ್ಟ್ ಇಲ್ಲಾದ್ರೂ ಪ್ರಾಕ್ಟೀಸ್ ಮಾಡೋಣ ಅಂದ್ರೆ ಇದನ್ನೂ ಅನುಮತಿ ಸಿಕ್ಕಿಲ್ಲ ಅಂತಾ ಅಸಮಾಧಾನ ಹೊರ ಹಾಕಿದ್ದಾರೆ. ಹಾಗೇ ಪ್ರಾಕ್ಟೀಸ್ ಸೆಷನ್​ ಬಗ್ಗೆ ಬಿಸಿಸಿಐ ಕೂಡ ನಮಗೆ ರೆಸ್ಪಾನ್ಸ್ ಮಾಡಿಲ್ಲ ಅಂದಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಭಾರತವೇ ವಿನ್ನಿಂಗ್ ಟೀಂ ಅನ್ನೋ ಥರ ಕಂಡ್ರೂ ನಮೀಬಿಯಾವನ್ನ ಈಸಿಯಾಗಿ ಪರಿಗಣಿಸೋಕೆ ಆಗಲ್ಲ. ಜೆರಾರ್ಡ್​ ಎರಾಸ್ಮಸ್ ನೇತೃತ್ವದ ನಮೀಬಿಯಾ ತಂಡ ಟಿ-20 ಕ್ರಿಕೆಟ್​ನಲ್ಲಿ   ಬಿಗ್ ಹಿಟ್ಟರ್ಸ್​ ಜೊತೆಗೆ ಟಿ-ಟ್ವೆಂಟಿ ಸ್ಪೆಷಲಿಸ್ಟ್ ಬೌಲರ್​ಗಳೂ ಇದ್ದಾರೆ. ಅಮೆರಿಕ ವಿರುದ್ಧ ಒದ್ದಾಡಿರೋ ಭಾರತ ಈ ಪಂದ್ಯದಲ್ಲಿ ಸೀರಿಯಸ್ ಆಗಿ ಆಡ್ಬೇಕಿದೆ. ಈಗಾಗಲೇ ಟಿ-20 ವಿಶ್ವಕಪ್​ನಲ್ಲಿ ನೆದರ್​ಲೆಂಡ್ಸ್​, ನೇಪಾಳ್ ಮತ್ತು ಐರ್ಲೆಂಡ್ ತಂಡಗಳು ಬಲಿಷ್ಟ ತಂಡಗಳಿಗೆ ಬಿಸಿ ಮುಟ್ಟಿಸಿವೆ ಅನ್ನೋದನ್ನ ಮರೆಯುವಂತಿಲ್ಲ.

Shantha Kumari

Leave a Reply

Your email address will not be published. Required fields are marked *