ಭಾರತ ಕೆಣಕಿದ ಪಾಕ್ ಪ್ಲೇಯರ್ – 2 ಪಂದ್ಯ ಗೆದ್ದು ಸೂರ್ಯನಿಗೆ ಸವಾಲ್
IND-PAK ಮ್ಯಾಚ್ ಅಲ್ಲ ರಿವೇಂಜ್!

ಬಾಯ್ಕಾಟ್ ನಾಟಕ ಮಾಡಿ ಐಸಿಸಿ ಬಳಿ ಜಾಸ್ತಿ ದುಡ್ಡು ಕೊಡಿ ಅಂತಾ ಬೇಡ್ತಿದ್ದ ಪಾಕಿಸ್ತಾನಿಯರು ಈಗ ಭಾರತದ ವಿರುದ್ಧ ಆಡೋದು ಕನ್ಫರ್ಮ್ ಆಗ್ತಿದ್ದಂತೆ ಬಾಲ ಬಿಚ್ಚೋಕೆ ಶುರು ಮಾಡಿದ್ದಾರೆ. ವೀಕ್ ಟೀಮ್ಗಳ ಎದುರು 2 ಮ್ಯಾಚ್ ಗೆದ್ದು ಟೀಂ ಇಂಡಿಯಾಗೆ ನೇರಾನೇರ ಸವಾಲ್ ಹಾಕಿದ್ದಾರೆ. ಅಮೆರಿಕ ವಿರುದ್ಧ ಗೆದ್ದಿರೋ ಭಾರತ ಇವತ್ತು ನಮೀಬಿಯಾ ವಿರುದ್ಧ ಎರಡನೇ ಪಂದ್ಯಕ್ಕೆ ರೆಡಿಯಾಗ್ತಿದೆ. ಆಲ್ರೆಡಿ 2 ಪಂದ್ಯ ಆಡಿ ಎರಡನ್ನೂ ಗೆದ್ದಿರೋ ಪಾಕಿಸ್ತಾನ ಬಾಲ ಬಿಚ್ಚೋಕೆ ಸ್ಟಾರ್ಟ್ ಮಾಡಿದೆ. ಫೆಬ್ರವರಿ 15ಕ್ಕೆ ಶ್ರೀಲಂಕಾದ ಕೊಲೊಂಬೊ ಮೈದಾನದಲ್ಲಿ ನಡೆಯಲಿರೋ ಭಾರತ-ಪಾಕ್ ಪಂದ್ಯವನ್ನೇ ಟಾರ್ಗೆಟ್ ಮಾಡಿ ಓವರ್ ಬಿಲ್ಡಪ್ ಕೊಡ್ತಿದ್ದಾರೆ. ಪಾಕಿಸ್ತಾನ ಪರ ಓಪನರ್ ಆಗಿ ಕಣಕ್ಕಿಳಿತಿರೋ ಸಾಹಿಬ್್ಜಾದಾ ಫರ್ಹಾನ್ ಭಾರತವನ್ನ ಕೆಣಕಿದ್ದಾನೆ.
ಇದನ್ನೂ ಓದಿ : ವಿಂಡೀಸ್ ಬೌಲರ್‌ಗಳಿಗೆ ಮಂಡಿಯೂರಿದ ಇಂಗ್ಲೆಂಡ್ – ಗ್ರೂಪ್ ಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ವೆಸ್ಟ್ ಇಂಡೀಸ್
ಭಾರತ-ಪಾಕ್ ಪಂದ್ಯ ಸಾಮಾನ್ಯ ಪಂದ್ಯ.. ನಾವೇ ಗೆಲ್ತೇವೆ!
ಟಿ-20 ವಿಶ್ವಕಪ್ ಸದ್ಯ ರೋಚಕ ಘಟ್ಟ ತಲುಪಿದ್ದು ಗ್ರೂಪ್ ಸ್ಟೇಜ್ನಲ್ಲಿ ಟಾಪ್-2ಗೇರಲು ಎಲ್ಲಾ ತಂಡಗಳು ಟಫ್ ಫೈಟ್ ನೀಡ್ತಿವೆ. ಎ ಗುಂಪಿನಲ್ಲಿರೋ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯೋ ಎಲ್ಲಾ ಚಾನ್ಸಸ್ ಇದೆ. ಈಗಾಗ್ಲೇ 2 ಪಂದ್ಯಗಳನ್ನ ಆಡಿ ಎರಡರಲ್ಲಿ ಗೆದ್ದು ಪಾಕಿಸ್ತಾನ ಪಾಯಿಂಟ್ಸ್ ಪಟ್ಟಿಯಲ್ಲಿ 4 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಭಾರತ ಒಂದು ಪಂದ್ಯ ಆಡಿ ಗೆದ್ದಿದ್ದು 2ನೇ ಸ್ಥಾನದಲ್ಲಿದೆ. ಭಾನುವಾರ ಭಾರತ ಮತ್ತು ಪಾಕ್ ನಡುವೆ ಮೂರನೇ ಪಂದ್ಯ ನಡೆಯಲಿದೆ. ಆದ್ರೆ ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಸಾಹಿಬ್ಜಾದಾ ಫರ್ಹಾನ್ ನೀಡಿರೋ ಹೇಳಿಕೆ ಹಲ್ಚಲ್ ಎಬ್ಬಿಸಿದೆ. ಈ ಪಂದ್ಯ ನಮಗೇನು ಸ್ಪೆಷಲ್ ಅನ್ನಿಸಲ್ಲ. ಇದೂ ಕೂಡ ಎಲ್ಲಾ ಪಂದ್ಯಗಳಂತೆ ಸಾಮಾನ್ಯ ಪಂದ್ಯ. ಪಾಕ್ ಆಟಗಾರರಿಂದ ರನ್ಸ್ ಬರ್ತಿದೆ ಅಂದ ಮೇಲೆ ನಾವೇ ಗೆಲ್ಲೋದು ಅನ್ನೋ ವಿಶ್ವಾಸವಿದೆ. ಕಳೆದ ಎರಡು ಇನ್ನಿಂಗ್ಸ್‌ಗಳಲ್ಲಿ ಪಾಕ್ ಪರ್ಫಾಮೆನ್ಸ್ ಹೇಗಿದೆ ಅನ್ನೋದು ಎಲ್ರಿಗೂ ಗೊತ್ತಿದೆ. ಭಾರತದ ವಿರುದ್ಧದ ಪಂದ್ಯವೂ ಸಾಮಾನ್ಯ ಪಂದ್ಯ. ನಾವು ಸಾಮಾನ್ಯ ಪಂದ್ಯದಂತೆ ಆಡುತ್ತೇವೆ ಎಂದಿದ್ದಾರೆ. ಹಾಗೇ ಏಷ್ಯಾಕಪ್ನಲ್ಲೂ ನಾವು ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದೇವೆ. ಫೈನಲ್ವರೆಗೂ ಫೈಟ್ ಕೊಟ್ಟಿದ್ದೇವೆ. ಅದೇ ಮೈಂಡ್ಸೆಟ್ನಲ್ಲೇ ವಿಶ್ವಕಪ್ನಲ್ಲೂ ಆಡ್ತೇವೆ. ಆದ್ರೆ ಈ ಸಲ ಪಂದ್ಯ ನಾವು ಗೆಲ್ತೇವೆ ಅನ್ನೋ ಮೂಲಕ ಸೂರ್ಯಕುಮಾರ್ ನಾಯಕತ್ವದ ಭಾರತ ತಂಡಕ್ಕೆ ಸವಾಲ್ ಹಾಕಿದ್ದಾರೆ.
ಭಾರತ ವಿರುದ್ಧದ ಪರ್ಫಾಮೆನ್ಸ್ ನಿಂದ ಓವರ್ ಕಾನ್ಫಿಡೆನ್ಸ್!
ಅಷ್ಟಕ್ಕೂ ಇಲ್ಲಿ ಫರ್ಹಾನ್ ಈ ಥರ ಮಾತಾಡೋಕೆ ಕಾರಣ ಅವ್ರ ಬ್ಯಾಟಿಂಗ್ ಪರ್ಫಾಮೆನ್ಸ್. ಭಾರತದ ವಿರುದ್ಧ ಕಳೆದ 3 ಇನ್ನಿಂಗ್ಸ್ ಗಳಲ್ಲಿ ಫರ್ಹಾನ್ 155 ರನ್ಗಳನ್ನ ಸ್ಕೋರ್ ಮಾಡಿದ್ದಾರೆ. ಇದ್ರಲ್ಲಿ 2 ಅರ್ಧಶತಕಗಳು ಬಂದಿವೆ. 51.67ರ ಆವರೇಜ್ನಲ್ಲಿ ರನ್ಸ್ ಕಲೆ ಹಾಕಿದ್ದಾರೆ. ಭಾರತದ ಪ್ರೀಮಿಯರ್ ಪೇಸ್ ಬೌಲರ್ಗಳನ್ನ ಫೇಸ್ ಮಾಡಿದ್ದಾರೆ. ಹಾಗೇ ಹೈಕ್ವಾಲಿಟಿ ಅಟ್ಯಾಕ್ನಲ್ಲೂ ಬ್ಯಾಟ್ ಬೀಸಿದ್ದಾರೆ. ಪವರ್ ಪ್ಲೇನಲ್ಲಿ ಭಾರತದ ಬೌಲರ್ಗಳನ್ನ ಫೇಸ್ ಮಾಡಿರೋ ಫರ್ಹಾನ್ ಈಗ ವಿಶ್ವಕಪ್ನಲ್ಲೇ ಅದೇ ಇಂಟೆಂಟ್ನಲ್ಲಿ ಬ್ಯಾಟ್ ಬೀಸಿ ಗೆಲ್ಲೋದಾಗಿ ಹೇಳ್ಕೊಂಡಿದ್ದಾರೆ. ಅದೂ ಅಲ್ದೇ ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ ವಿರುದ್ಧ 47 ರನ್ ಗಳಿಸಿದ್ದ ಫರ್ಹಾನ್ ಅಮೆರಿಕ ವಿರುದ್ಧ 71 ರನ್ಸ್ ಸ್ಕೋರ್ ಮಾಡಿದ್ರು. ಇದೇ ನಂಬರ್ಗಳೇ ಈಗ ಭಾರತದ ವಿರುದ್ಧ ಸ್ಕೋರ್ ಮಾಡ್ತೀನಿ ಅನ್ನೋ ಓವರ್ ಕಾನ್ಫಿಡೆನ್ಸ್ನಲ್ಲಿದ್ದಾರೆ
ಏಷ್ಯಾಕಪ್ನಲ್ಲಿ ಭಾರತದ ವಿರುದ್ಧ ನಾನು ಸೂಪರ್ ಆಗಿ ಬ್ಯಾಟ್ ಬೀಸಿದ್ದೀನಿ ಅಂತಾ ಫರ್ಹಾನ್ ಹೇಳ್ಕೊಂಡ್ರೂ ಕೂಡ ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಭಾರತವೇ ವಿನ್ ಆಗಿತ್ತು. ಅದೂ ಅಲ್ದೇ ಭಾರತ ಪಾಕಿಸ್ತಾನ ನಡುವಿನ ಕಳೆದ 10 ಪಂದ್ಯದಲ್ಲಿ ಅದು ಯಾವುದೇ ಮಾದರಿ ಇರ್ಬೋದು ಕಳೆದ 10 ಪಂದ್ಯಗಳಲ್ಲಿ ಭಾರತ 8 ಸಲ ವಿನ್ ಆಗಿದೆ. ಸೋ ಈ ನಂಬರ್ಸ್ ನೋಡ್ದಾಗ ಒನ್ಸ್ ಅಗೇನ್ ಭಾರತವೇ ಕ್ಲಿಯರ್ ಆಗಿ ಈ ಸಲವೂ ವಿನ್ ಅನ್ನೋದು ಗೊತ್ತಾಗ್ತಿದೆ. ಆದ್ರೆ ಪಂದ್ಯಕ್ಕೂ ಮುನ್ನ ಭಾರತೀಯರನ್ನ ಕೆಣಕೋದು ಅವ್ರಿಗೆ ಹೊಸ್ದೇನು ಅಲ್ಲ. ಹೀಗಾಗಿ ಭಾನುವಾರದ ಪಂದ್ಯದವರೆಗೂ ಇನ್ನೂ ಬೇಜಾನ್ ಹಾರಾಡ್ತಾರೆ. ಬಟ್ ಹೊರಗೆ ಅದೆಷ್ಟೇ ಮೆರೆದ್ರೂ ಮೈದಾನದಲ್ಲಿ ಯಾವತ್ತಿದ್ರೂ ಭಾರತವೇ ಬಾಸ್ ಅನ್ನೋದು ಈ ಸೂಪರ್ ಸಂಡೆಯಲ್ಲಿ ಮತ್ತೊಮ್ಮೆ ಜಗತ್ತಿಗೆ ಗೊತ್ತಾಗುತ್ತೆ.

ನೋಡಿರಿ

