ವ್ಯಾಲೆಂಟೈನ್ಸ್ ಡೇ ಅಂತ ಗರ್ಲ್‌ಫ್ರೆಂಡ್‌ ಜೊತೆ ಮಾಲ್‌ಗೆ ಬಂದ! – ಹೆಂಡ್ತಿ ಎಂಟ್ರಿ.. ಆಮೇಲೆ ಏನಾಯ್ತು?

ವ್ಯಾಲೆಂಟೈನ್ಸ್ ಡೇ ಅಂತ ಗರ್ಲ್‌ಫ್ರೆಂಡ್‌ ಜೊತೆ ಮಾಲ್‌ಗೆ ಬಂದ! – ಹೆಂಡ್ತಿ ಎಂಟ್ರಿ.. ಆಮೇಲೆ ಏನಾಯ್ತು?

ಪ್ರೇಮಿಗಳ ದಿನ ಹತ್ತಿರವಾಗಿದೆ. ಗರ್ಲ್‌ಫ್ರೆಂಡ್‌ಗೆ ಸರ್‌ಪ್ರೈಸ್‌ ಕೊಟ್ಟು ಇಂಪ್ರೆಸ್‌ ಮಾಡಲು ಹುಡುಗರು ನಾನಾ ಸರ್ಕಸ್‌ ಮಾಡ್ತಾರೆ. ಇದೀಗ ಇಲ್ಲೊಬ್ಬ ಗರ್ಲ್‌ಫ್ರೆಂಡ್‌ ಜೊತೆ ಟೈಮ್‌ಪಾಸ್‌ ಮಾಡಲು ಹೋಗಿ ಹೆಂಡತಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇದರ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ: ಕ್ರಿಕೆಟ್‌ ಮ್ಯಾಚ್‌ ಗೆದ್ದ ತಂಡಕ್ಕೆ ಕಪ್ ಬದಲು‌ ಜೀವಂತ ನಾಟಿ‌ಕೋಳಿ ಬಹುಮಾನ!

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ವ್ಯಕ್ತಿಯೊಬ್ಬ ಗರ್ಲ್‌ಫ್ರೆಂಡ್‌ ಜೊತೆ ಮಾಲ್‌ಗೆ ಬಂದಿದ್ದ. ಆದ್ರೆ ಆತನ ಟೈಮ್‌ ಕೆಟ್ಟಿತ್ತು ಅಂತ ಕಾಣುತ್ತೆ. ಮಾಲ್‌ನಲ್ಲಿ ಆತ ಹೆಂಡತಿ ಕಣ್ಣಿಗೆ ಬಿದ್ದು ಪೇಚಿಗೆ ಸಿಲುಕಿದ ಪ್ರಸಂಗ ಉತ್ತರ ಪ್ರದೇಶದ ಶಾಪಿಂಗ್ ಮಾಲ್ ಒಂದರಲ್ಲಿ ನಡೆದಿದೆ.

ಏನಿದು ಘಟನೆ?

ಮಹಿಳೆಯೊಬ್ಬರು ಶಾಪಿಂಗ್‌ಗಾಗಿ ಮಾಲ್‌ಗೆ ಬಂದಿದ್ದರು. ಅದೇ ಸಮಯದಲ್ಲಿ ಅವರ ಪತಿ ಕೂಡ ಮತ್ತೊಬ್ಬ ಮಹಿಳೆಯೊಂದಿಗೆ ಮಾಲ್‌ಗೆ ಬಂದಿದ್ದರು. ಈ ವೇಳೆ ಪತಿರಾಮ ಮಹಿಳೆಯ ಕಣ್ಣಿಗೆ ಬಿದ್ದಾನೆ. ಆತನನ್ನು ನೋಡಿ ಅನುಮಾನಗೊಂಡ ಪತ್ನಿ, ಹತ್ತಿರ ಹೋಗಿ ನೋಡಿದ್ದಾರೆ. ಆತ ತನ್ನ ಗಂಡ ಎಂದು ಗೊತ್ತಾಗುತ್ತಿದ್ದಂತೆ ಪತ್ನಿ ಅಲ್ಲೇ ಕ್ಲಾಸ್‌ ತೆಗೆದುಕೊಂಡಿದ್ದಾಳೆ. ಪ್ರೇಯಸಿ ಎದುರೇ ಪತ್ನಿ ಗದ್ದಲ ಆರಂಭಿಸುತ್ತಿದ್ದಂತೆ ಮಾಲ್‌ನಲ್ಲಿದ್ದ ನೂರಾರು ಗ್ರಾಹಕರು ಇತ್ತ ಕಡೆ ತಿರುಗಿ ನೋಡಿದ್ದಾರೆ. ಇಬ್ಬರ ನಡುವೆ ಜೋರಾದ ವಾಗ್ವಾದ ನಡೆದಿದ್ದು, ಪತ್ನಿಯ ಆಕ್ರೋಶ ಕಂಡು ಪ್ರೇಯಸಿ ಕೂಡ ದಂಗಾಗಿದ್ದಾರೆ. ಈ ವೇಳೆ ಅಲ್ಲಿ ನೂರಾರು ಜನ ಸೇರಿದ್ದಾರೆ. ಕೂಡಲೇ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾನೆ. ಪತ್ನಿಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಪ್ರೇಯಸಿಯನ್ನು ಮಾಲ್‌ನಲ್ಲೇ ಬಿಟ್ಟು ದಿಕ್ಕಾಪಾಲಾಗಿ ಓಡಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಮಾಲ್‌ನ ಭದ್ರತಾ ಸಿಬ್ಬಂದಿಗಳು ಕೂಡಲೇ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ದೃಶ್ಯ ಮಾಲ್‌ನ ಸಿಸಿಟಿವಿ ಮತ್ತು ಜನರ ಮೊಬೈಲ್‌ಗಳಲ್ಲಿ ಸೆರೆಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ. ಆದರೆ, ಈ ಹೈಡ್ರಾಮಾದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ನೆಟ್ಟಿಗರು ಈ ಬಗ್ಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, ಹಬ್ಬದ ದಿನ ಪತಿಗೆ ಸಿಕ್ಕಿತು ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದು ವ್ಯಂಗ್ಯವಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುವುದು ಕುಟುಂಬ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

 

Shwetha M

Leave a Reply

Your email address will not be published. Required fields are marked *