ಆಮೆ ಉಂಗುರ ಹಾಕುತ್ತೀರಾ? – ಈ ನಿಯಮ ಕಡ್ಡಾಯವಾಗಿ ಪಾಲಿಸಿ

ಆಮೆ ಉಂಗುರ ಹಾಕುತ್ತೀರಾ? – ಈ ನಿಯಮ ಕಡ್ಡಾಯವಾಗಿ ಪಾಲಿಸಿ

ಶಾಸ್ತ್ರದ ಪ್ರಕಾರದ ಸಲಹೆಯಂತೆ ಆಮೆ ಉಂಗುರವು ಸಾಕಷ್ಟು ಸಕಾರಾತ್ಮಕ ಫಲಗಳನ್ನು ನೀಡುತ್ತದೆ. ಆದರೆ ಈ ಉಂಗುರವನ್ನು ಧರಿಸುವಾಗ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಸರಿಯಾದ ವಿಧಾನದಲ್ಲಿ ಹಾಗೂ ನಿಗದಿತ ನಿಯಮಗಳಂತೆ ಧರಿಸಿದರೆ ಮಾತ್ರ ಆಮೆ ಉಂಗುರದಿಂದ ಲಭಿಸುವ ಪುಣ್ಯಫಲ ಮತ್ತು ಶುಭಫಲಗಳು ಸಂಪೂರ್ಣವಾಗಿ ದೊರೆಯುತ್ತವೆ. ತಪ್ಪಾದ ರೀತಿಯಲ್ಲಿ ಧರಿಸಿದರೆ ನಿರೀಕ್ಷಿತ ಫಲ ಸಿಗದೆ ತೊಂದರೆಗಳಿಗೂ ಕಾರಣವಾಗಬಹುದು ಎಂಬ ನಂಬಿಕೆ ಶಾಸ್ತ್ರಗಳಲ್ಲಿ ಇದೆ.

ಇದನ್ನೂ ಓದಿ : ಜೀವನದಲ್ಲಿ ಸುಖ, ಸಮೃದ್ಧಿ ಬೇಕಾ? – ಗುರುವಾರ ಈ ಕೆಲಸಗಳನ್ನ ಮಾಡಿ

ಆಮೆ ಉಂಗುರವನ್ನು ಸಾಮಾನ್ಯವಾಗಿ ಬೆಳ್ಳಿಯಿಂದ ತಯಾರಿಸಿಕೊಂಡು ಧರಿಸುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಬೆಳ್ಳಿಯ ಆಮೆ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು, ಮಾನಸಿಕ ಶಾಂತಿ ಹಾಗೂ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಆದರೆ ಒಂದು ಪ್ರಮುಖ ಅಂಶವನ್ನು ಗಮನದಲ್ಲಿಡಬೇಕು. ಅಂದರೆ, ಆಮೆಯ ಮುಖವು ಧರಿಸುವ ವ್ಯಕ್ತಿಯ ಮುಖದ ಕಡೆಗೆ ತಿರುಗಿರುವಂತೆ ಉಂಗುರವನ್ನು ಧರಿಸಬೇಕು. ಈ ರೀತಿಯಲ್ಲಿ ಧರಿಸಿದರೆ ಮಾತ್ರ ಶುಭಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ.

ಇನ್ನು ಆಮೆ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ಎಂಬುದೂ ಮಹತ್ವದ್ದಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಉಂಗುರವನ್ನು ಮಧ್ಯಮ ಬೆರಳಿನಲ್ಲಿ ಅಥವಾ ತೋರು ಬೆರಳಿನಲ್ಲಿ ಧರಿಸಬಹುದು. ಈ ಎರಡೂ ಬೆರಳುಗಳಲ್ಲಿ ಧರಿಸಿದರೆ ಉತ್ತಮ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಮೆ ಉಂಗುರವು ಸಂಪತ್ತು, ಸಮೃದ್ಧಿ, ಶಾಂತಿ ಹಾಗೂ ಅದೃಷ್ಟವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ವಿಷ್ಣುವಿನ ಆಶೀರ್ವಾದ ದೊರೆತು ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ,ಎಲ್ಲ ರಾಶಿಯವರಿಗೆ ಇದು ಶುಭವಲ್ಲ ಎಂಬುದನ್ನು ಗಮನಿಸಬೇಕು.

Kishor KV

Leave a Reply

Your email address will not be published. Required fields are marked *