ಟಿ20 ವಿಶ್ವಕಪ್‌ನಲ್ಲಿ ಅಂಪೈರ್ ಜೊತೆ ಕಿರಿಕ್ – ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿಗೆ ಭಾರಿ ದಂಡ

ಟಿ20 ವಿಶ್ವಕಪ್‌ನಲ್ಲಿ ಅಂಪೈರ್ ಜೊತೆ ಕಿರಿಕ್ –  ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿಗೆ ಭಾರಿ ದಂಡ

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಅಂಪೈರ್ ನಿರ್ಧಾರವನ್ನು ಪಾಲಿಸದಿದ್ದಕ್ಕಾಗಿ ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿಗೆ ಪಂದ್ಯ ಶುಲ್ಕದ 15 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ.ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ 14 ನೇ ಓವರ್‌ನಲ್ಲಿ ಬೌಲರ್ ಲುಂಗಿ ಎನ್‌ಗಿಡಿ ಅವರ ಮಣಿಕಟ್ಟಿನ ಪಟ್ಟಿಯ ಕುರಿತು ನಬಿ ಅಂಪೈರ್‌ಗಳೊಂದಿಗೆ ದೀರ್ಘಕಾಲದ ವಾಗ್ವಾದದಲ್ಲಿ ತೊಡಗಿದಾಗ ಈ ಘಟನೆ ಸಂಭವಿಸಿದೆ.

ಅಂಪೈರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಅವರು ಐಸಿಸಿ ನೀತಿ ಸಂಹಿತೆಯ ಹಂತ 1 ಉಲ್ಲಂಘಿಸಿದ್ದಾರೆ. ನಬಿ ಅಪರಾಧವನ್ನು ಒಪ್ಪಿಕೊಂಡರು ಮತ್ತು ಎಮಿರೇಟ್ಸ್ ಐಸಿಸಿ ಇಂಟರ್ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ರೆಫರೀಸ್‌ನ ಡೇವಿಡ್ ಗಿಲ್ಬರ್ಟ್ ಪ್ರಸ್ತಾಪಿಸಿದ ಶಿಕ್ಷೆಯನ್ನು ಸ್ವೀಕರಿಸಿದರು, ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕ್ರಿಕೆಟ್‌ ಮ್ಯಾಚ್‌ ಗೆದ್ದ ತಂಡಕ್ಕೆ ಕಪ್ ಬದಲು‌ ಜೀವಂತ ನಾಟಿ‌ಕೋಳಿ ಬಹುಮಾನ!

24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ಅಪರಾಧವಾಗಿರುವುದರಿಂದ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ. ಎರಡೂ ತಂಡಗಳ ನಡುವಿನ ತೀವ್ರ ಪೈಪೋಟಿಯ ಪಂದ್ಯವು ಟೈನಲ್ಲಿ ಕೊನೆಗೊಂಡಿತು. ಅಂತಿಮವಾಗಿ ಎರಡು ಸೂಪರ್ ಓವರ್‌ಗಳ ಕಾದಾಟದಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತ್ತು. ಇನ್ನು ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು, ಕೊನೆಯ ಓವರ್‌ನಲ್ಲಿ ನಡೆದ ಹೈಡ್ರಾಮದ ನೆರವಿನಿಂದ 187 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.

Kishor KV

Leave a Reply

Your email address will not be published. Required fields are marked *