ಕ್ರಿಕೆಟ್ ಮ್ಯಾಚ್ ಗೆದ್ದ ತಂಡಕ್ಕೆ ಕಪ್ ಬದಲು ಜೀವಂತ ನಾಟಿಕೋಳಿ ಬಹುಮಾನ!

ಕ್ರಿಕೆಟ್ ಮ್ಯಾಚ್ಗಳಲ್ಲಿ ಗೆದ್ದ ತಂಡಕ್ಕೆ ಟ್ರೋಫಿಯನ್ನ ಬಹುಮಾನವಾಗಿ ನೀಡಲಾಗುತ್ತೆ. ಇನ್ನು ಪಂದ್ಯ ಶ್ರೇಷ್ಠ ಆಟಗಾರರಿಗೂ ಕಪ್ ನೀಡಲಾಗುತ್ತೆ. ಆದ್ರೆ ಇಲ್ಲೊಂದು ಕಡೆ ಗೆದ್ದ ತಂಡಕ್ಕೆ ಕಪ್ ಬದಲು ಕೋಳಿಯನ್ನು ಗಿಫ್ಟ್ ನೀಡಲಾಗಿದೆ. ಇದ್ರ ಫನ್ನಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಗಿಲ್ಲಿ, ರಘುಗಾಗಿ ರಕ್ಷಿತಾ ಕಣ್ಣಿರು! – ರಕ್ತ ಸಂಬಂಧಗಳ ಮೀರಿದ ಬಂಧವಿದು!
ಉತ್ತರ ಪ್ರದೇಶದ ದೇವರಿವಾ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದರಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಬದಲು ಜೀವಂತ ಕೋಳಿಯನ್ನು ಬಹುಮಾನವಾಗಿ ನೀಡಲಾಗಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹುವಾರಿ ಪ್ರೀಮಿಯರ್ ಲೀಗ್ ಎಂದು ಹೆಸರಿಸಲಾದ ಪಂದ್ಯಾವಳಿಯು ಫೆಬ್ರವರಿ 1 ರಿಂದ ಫೆಬ್ರವರಿ 8, 2026 ರವರೆಗೆ ಪಠಾರ್ದೇವ ವಿಧಾನಸಭಾ ಕ್ಷೇತ್ರದ ಅಡಿಯಲ್ಲಿ ಮಹುವಾರಿ ಗ್ರಾಮದಲ್ಲಿ ನಡೆಯಿತು. 16 ಸ್ಥಳೀಯ ತಂಡಗಳು ಭಾಗವಹಿಸಿದ್ದವು. ಗೆದ್ದ ತಂಡಕ್ಕೆ ಕ್ರೀಡಾ ಕೂಟ ಆಯೋಜನಕರು ಜೀವಂತ ನಾಟಿ ಕೋಳಿಯನ್ನು ನೀಡಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ಶಾಕ್ ಆಗಿದ್ದಾರೆ. ಬಳಿಕ ಜೋರಾಗಿ ನಗುತ್ತಾ ಚಪ್ಪಾಳೆ ತಪ್ಪಿದ್ದಾರೆ.
ಇದೀಗ ವೈರಲ್ ಆದ ವಿಡಿಯೋಗೆ ನಾನಾ ಕಮೆಂಟ್ಸ್ ಮಾಡ್ತಿದ್ದಾರೆ. ಬಹುಮಾನ ವ್ಯವಸ್ಥೆಯ ಸೃಜನಶೀಲತೆ, ಸರಳತೆ ಮತ್ತು ಸಾಂಸ್ಕೃತಿಕ ಆಚರಣೆಯನ್ನು ಶ್ಲಾಘಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, ಕೋಳಿ, ಧಾನ್ಯಗಳು ಅಥವಾ ಕೃಷಿ ಪರಿಕರಗಳು ಅಲಂಕಾರಿಕ ಟ್ರೋಫಿಗಳಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂದು ಹಲವಾರು ನೆಟಿಜನ್ಗಳು ಕಾಮೆಂಟ್ ಮಾಡಿದ್ದಾರೆ.

ನೋಡಿರಿ

