ಗಿಲ್ಲಿ, ರಘುಗಾಗಿ ರಕ್ಷಿತಾ ಕಣ್ಣಿರು! – ರಕ್ತ ಸಂಬಂಧಗಳ ಮೀರಿದ ಬಂಧವಿದು!

ಬಿಗ್ಬಾಸ್.. ಇದು ಒಂದು ಜಸ್ಟ್ ಶೋ ಅಲ್ಲ.. ಹಲವು ಬಂಧಗಳನ್ನ ಬೆಸೆಯುವ ದೊಡ್ಡ ವೇದಿಕೆ. ಬಿಗ್ಬಾಸ್ ಕನ್ನಡ ಸೀಸನ್ 12 ಮುಗಿದು 1 ತಿಂಗಳಾಗುತ್ತಾ ಬಂತು. ಶೋ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಎಲ್ಲಾ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಮನೆಯ ಸಂತಸದ ಕ್ಷಣಗಳನ್ನ ಸ್ಪರ್ಧಿಗಳು ಮೆಲುಕು ಹಾಕಿದ್ದಾರೆ. ಈ ವೇಳೆ ರಕ್ಷಿತಾ ಗಿಲ್ಲಿ, ರಘುಗಾಗಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ ಅರೆಸ್ಟ್!
ಬಿಗ್ಬಾಸ್ ಸೀಸನ್ 12 ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸೀಸನ್ನಲ್ಲಿ ಟಾಸ್ಕ್ಗಳ ಜೊತೆ ಸ್ಪರ್ಧಿಗಳ ಜಗಳ, ಫ್ರೆಂಡ್ಶಿಪ್ ಕೂಡ ಸಖತ್ ಹೈಲೈಟ್ ಆಗಿತ್ತು. ಅದ್ರಲ್ಲೂ ಗಿಲ್ಲಿ, ರಘು, ರಕ್ಷಿತಾ ಸ್ನೇಹ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಮೂವರ ಬಾಂಡಿಂಗ್ ನೋಡಿ ವೀಕ್ಷಕರು ಫಿದಾ ಆಗಿದ್ರು. ಇದೀಗ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳನ್ನು ಒಂದೇ ವೇದಿಕೆಗೆ ಕರೆತರಲಾಗಿದೆ. ಕಲರ್ಸ್ ಕನ್ನಡ ವಾಹಿನಿ ದೊಡ್ಮನೆ ಹಬ್ಬ ಎಂಬ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೇ ವೇಳೆ ಗಿಲ್ಲಿ, ರಘುಗಾಗಿ ರಕ್ಷಿತಾ ಕಣ್ಣೀರು ಹಾಕಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಸಖತ್ ಆಕ್ಟಿವ್ ಆಗಿದ್ರು. ಆಟದ ಜೊತೆ ನೇರ ನುಡಿ, ಮುಗ್ದ ಮಾತಿನ ಮೂಲಕ ಹೈಲೈಟ್ ಆಗಿದ್ರು. ಇನ್ನು ರಕ್ಷಿತಾ ಸದಾ ಗಿಲ್ಲಿ ಹಾಗೂ ರಘು ಜೊತೆಗೆ ಹೆಚ್ಚು ಟೈಮ್ ಸ್ಪೆಂಡ್ ಮಾಡುತ್ತಿದ್ದರು. ಗಿಲ್ಲಿಯ ತಮಾಷೆ, ರಘುನ ತಿಳುವಳಿಕೆ ಮತ್ತು ರಕ್ಷಿತಾಳ ಮುಗ್ಧತೆ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ರಕ್ಷಿತಾ ಕೂಡ ಗಿಲ್ಲಿ ರಘು ವಿಚಾರದಲ್ಲಿ ರಕ್ಷಿತಾ ಫುಲ್ ಪೊಸೆಸಿವ್ ಆಗಿದ್ರು. ಯಾವುದೇ ಕಾರಣಕ್ಕೂ ರಘು, ಗಿಲ್ಲಿಯನ್ನು ಬಿಟ್ಟುಕೊಡುತ್ತಿರಲಿಲ್ಲ. ಇದೀಗ ಬಿಗ್ಬಾಸ್ ಮನೆಯಲ್ಲಿ ರಘು, ಗಿಲ್ಲಿ ಜೊತೆಗಿನ ಸಂತಸದ ಕ್ಷಣಗಳನ್ನು ನೆನೆದು ಭಾವುಕಾರಗಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ರಕ್ಷಿತಾ, ಮನೆಯಲ್ಲಿದ್ದಾಗ ನಾವೆಲ್ಲರೂ ಸದಾ ಒಟ್ಟಿಗೆ ಇರುತ್ತಿದ್ದೆವು, ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಆದ್ರೆ ಈಗ ಡಿಸ್ಕನೆಕ್ಟ್ ಆದರೆ ಬೇಜಾರು ಆಗುತ್ತದೆ. ದಯವಿಟ್ಟು ಕನೆಕ್ಷನ್ ಬ್ರೇಕ್ ಮಾಡಬೇಡಿ ಎಂದು ರಕ್ಷಿತಾ ಶೆಟ್ಟಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಆಗ ಗಿಲ್ಲಿ ಮತ್ತು ರಘು ವೇದಿಕೆ ಮೇಲೆ ಬಂದು ರಕ್ಷಿತಾಳನ್ನು ಹಗ್ ಮಾಡಿ ಸಮಾಧಾನ ಮಾಡಿದ್ದಾರೆ. ಇದ್ರ ಪ್ರೋಮೋ ನೋಡಿದ ವೀಕ್ಷಕರು ಕೂಡ ಭಾವುಕರಾಗಿದ್ದಾರೆ.
ದೊಡ್ಮನೆ ಹಬ್ಬದ ಎಮೋಷನಲ್ ಪ್ರೋಮೋ ನೋಡಿ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿಯ ತರಲೆ-ತುಂಟಾಟಗಳನ್ನು ಮತ್ತು ರಕ್ಷಿತಾ ಆ ಮುಗ್ಧ ಮಾತುಗಳನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಬಿಗ್ಬಾಸ್ ಮನೆ ದೊಡ್ಡವರನ್ನು ಮಕ್ಕಳನ್ನಾಗಿ ಮಾಡುತ್ತದೆ ಎಂಬ ಮಾತು ಅಕ್ಷರಶಃ ನಿಜವೆನಿಸಿದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಇನ್ನು ಕೆಲವರು ಈ ಕ್ಯೂಟ್ ಪ್ರೆಂಡ್ಶಿಪ್ಗೆ ರಕ್ತ ಸಂಬಂಧಗಳ ಮೀರಿದ ಬಂಧವಿದು.. ಬಿಗ್ಬಾಸ್ ರಿಯಲ್ ಬಂಧ ಅಂದ್ರೆ ಇದು ಎಂದು ಕಮೆಂಟ್ ಮಾಡಿದ್ದಾರೆ.
ಒಟ್ಟಾರೆ ಗಿಲ್ಲಿ, ರಘು ಜೊತೆಗಿನ ಸ್ನೇಹ ಜಸ್ಟ್ ಶೋಗಾಗಿ ಹುಟ್ಟಿಕೊಂಡ ಫ್ರೆಂಡ್ಶಿಪ್ ಅಲ್ಲ ಅನ್ನೋದು ರಕ್ಷಿತಾ ಮಾತಿನಿಂದ ಗೊತ್ತಾಗುತ್ತೆ. ಈ ಮೂಲಕ ದೊಡ್ಡಮನೆ ಹಬ್ಬ ಕೇವಲ ಸಂಭ್ರಮದ ವೇದಿಕೆಯಾಗದೆ, ಸ್ನೇಹದ ಸಂಕೇತವಾಗಿ ಹೊರಹೊಮ್ಮಿದೆ.

ನೋಡಿರಿ

