ಬೆಂಗಳೂರಲ್ಲಿ ಗಾಳಿಯ ಗುಣಮಟ್ಟ ಕಳಪೆ – ಉಡುಪಿ, ಮಂಗಳೂರಲ್ಲಿ ಆರಾಮಾಗಿ ಉಸಿರಾಡಬಹುದು

ಬೆಂಗಳೂರಲ್ಲಿ ಗಾಳಿಯ ಗುಣಮಟ್ಟ ಕಳಪೆ – ಉಡುಪಿ, ಮಂಗಳೂರಲ್ಲಿ ಆರಾಮಾಗಿ ಉಸಿರಾಡಬಹುದು

ಬೆಂಗಳೂರಿನಲ್ಲಿ ಟ್ರಾಫಿಕ್‌ನಲ್ಲಿ ಓಡಾಡುವುದೇ ಕಷ್ಟ. ಇದರ ಮಧ್ಯೆ ಇಲ್ಲಿ ಉಸಿರಾಡುವುದು ಕಷ್ಟ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಯಾಕೆಂದರೆ, ಬೆಂಗಳೂರಲ್ಲಿ ಬೀಸುವ ಗಾಳಿ ಸೇಫ್ ಅಲ್ಲ. ಕರಾವಳಿಯಲ್ಲಿ ಬೀಸುವ ಗಾಳಿ ಆರೋಗ್ಯಕರ ಎಂದು ವರದಿಯಾಗಿದೆ.

 ಇದನ್ನೂ ಓದಿ:ಬೆಂಗಳೂರಿಗರೇ ಎಚ್ಚರ! – ಇನ್ಮುಂದೆ ನೀರು ಪೋಲು ಮಾಡಿದ್ರೆ 5,000 ದಂಡ ಫಿಕ್ಸ್!‌  

ಬೆಂಗಳೂರು ಮೊದಲೇ ಜನದಟ್ಟಣೆ ವಾಹನದಟ್ಟಣೆಯಿಂದ ತುಂಬಿ ತುಳುಕುತ್ತಿದೆ. ಪರಿಸ್ಥಿತಿ ಹೀಗಿರುವಾಗ ಗಾಳಿಯ ಗುಣಮಟ್ಟ ಅದ್ಯಾವ ಪರಿಸ್ಥಿತಿ ತಲುಪಿರಲು ಸಾಧ್ಯ. ಹೌದು, ವಾಹನಗಳಿಂದ ಹೊರಸೂಸುವ ಹೊಗೆ, ರೋಡ್ ರಿಪೇರಿ, ಕಟ್ಟಡಗಳ ಕಾಮಗಾರಿ ಈ ಮಹಾನಗರಿಯಲ್ಲಿ ಸರ್ವೇಸಾಮನ್ಯ. ಹೀಗಾಗಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಬೆಂಗಳೂರಿನಲ್ಲಿ AQI 140-175 ಕಳಪೆ ಎಂದು ವರದಿಯಾಗಿದೆ. ಬೆಂಗಳೂರಿನ ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಪೀಣ್ಯ ಭಾಗಗಳಲ್ಲಿ ವಾಹನ ದಟ್ಟಣೆಯಿಂದಾಗಿ AQI ಸ್ವಲ್ಪ ಹೆಚ್ಚಾಗಿದೆ. ಬೆಳಗಿನ ಜಾವ ಮಂಜು ಇರುವುದರಿಂದ ಧೂಳಿನ ಕಣಗಳು ಗಾಳಿಯಲ್ಲಿ ಹೆಚ್ಚು ಸಮಯದವರೆಗೆ ಇರುತ್ತದೆ. ಬಿಸಿಲು ಮತ್ತು ಒಣ ಹವೆ ಹೆಚ್ಚಾಗಿರುವುದರಿಂದ ಧೂಳಿನ ಪ್ರಮಾಣ ಗಾಳಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಸಮುದ್ರದ ಗಾಳಿಯ ಪ್ರಭಾವದಿಂದ ಮಂಗಳೂರು ಮತ್ತು ಉಡುಪಿ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಉತ್ತಮವಾಗಿದೆ. ಮೈಸೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ ಬೆಳಗಿನ ವಾಯುವಿಹಾರಕ್ಕೆ ಹವಾಮಾನ ಮತ್ತು ಗಾಳಿ ಅತ್ಯಂತ ಸೂಕ್ತವಾಗಿದೆ.

ಬೆಂಗಳೂರಿನಂತಹ ನಗರಗಳಲ್ಲಿ ಉಸಿರಾಟದ ತೊಂದರೆ ಅಥವಾ ಅಲರ್ಜಿ ಇರುವವರು ಮಧ್ಯಾಹ್ನದ ವೇಳೆ ಹೊರಗೆ ಓಡಾಡುವಾಗ ಮಾಸ್ಕ್ ಧರಿಸುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.

Sulekha

Leave a Reply

Your email address will not be published. Required fields are marked *