ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ – ದ್ವಿಶತಕ ಸಿಡಿಸಿ ಶುಭ್ ಮನ್ ಗಿಲ್ ದಾಖಲೆ!
ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಶುಭ್ ಮನ್ ಗಿಲ್ ತಮ್ಮ ಚೊಚ್ಚಲ ದ್ವಿ ಶತಕ ಬಾರಿಸಿದ್ದಾರೆ. ಇಂಥಾ ಮೈಲುಗಲ್ಲು ಸಾಧಿಸಿದ ಅತ್ಯಂತ ಕಿರಿಯ ಆಟಗಾರ ಅನ್ನೋ ದಾಖಲೆ ಬರೆದರು.
ಇದನ್ನೂ ಓದಿ: ಸ್ಟಾರ್ ಓಟಗಾರ್ತಿಗೂ ತಟ್ಟಿದ ಡ್ರಗ್ಸ್ ಸೇವನೆ ಎಫೆಕ್ಟ್ – ದ್ಯುತಿ ಚಂದ್ ತಾತ್ಕಾಲಿಕ ಅಮಾನತು!
ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಟೀಂ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟ್ಸ್ಮನ್ ಶುಭ್ ಮನ್ ಗಿಲ್ 149 ಎಸೆತಗಳನ್ನು ಎದುರಿಸಿದ್ದು 208 ರನ್ ಗಳಿಸಿದರು. 19 ಬೌಂಡರಿ, 9 ಸಿಕ್ಸ್ ಸಿಡಿಸುವ ಮೂಲಕ ಕ್ರೀಡಾಂಗಣದಲ್ಲಿ ರನ್ಗಳ ಮಳೆ ಸುರಿಸಿದ್ರು. ಆದ್ರೆ 49ನೇ ಓವರ್ನಲ್ಲಿ ನ್ಯೂಜಿಲೆಂಡ್ ಆಟಗಾರ ಗ್ಲೆನ್ ಫಿಲಿಪ್ಸ್ ಬೌಲಿಂಗ್ಗೆ ವಿಕೆಟ್ ಒಪ್ಪಿಸಿದ್ರು.
ಶುಭ್ ಮನ್ ಗಿಲ್ ಅಮೋಘ ಪ್ರದರ್ಶನದ ಮೂಲಕ ಭಾರತ ನ್ಯೂಜಿಲೆಂಡ್ ವಿರುದ್ಧ 50 ಓವರ್ಗಳಲ್ಲಿ 349 ರನ್ ಕಲೆ ಹಾಕಿತು. ಹಾಗೂ ನ್ಯೂಜಿಲೆಂಡ್ಗೆ 350 ರನ್ಗಳ ಟಾರ್ಗೆಟ್ ನೀಡಿತು. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗಿಲ್ ತಮ್ಮ ಏಕದಿನ ವೃತ್ತಿಜೀವನದ ಮೊದಲನೇ ದ್ವಿಶತಕ ಬಾರಿಸಿದ್ದಾರೆ.