ಕಾಸಿಗಾಗಿ PCB ಬೆನ್ನು ಬಿದ್ದ ICC – ಭಾರತದ ವಿರುದ್ಧ ಆಡಿದ್ರಷ್ಟೇ ಭವಿಷ್ಯ
ಇಂಡೋ-ಪಾಕ್ ಫೈಟ್.. ಯಾರಿಗೆ ಲಾಭ?

ಕಾಸಿಗಾಗಿ PCB ಬೆನ್ನು ಬಿದ್ದ ICC – ಭಾರತದ ವಿರುದ್ಧ ಆಡಿದ್ರಷ್ಟೇ ಭವಿಷ್ಯಇಂಡೋ-ಪಾಕ್ ಫೈಟ್.. ಯಾರಿಗೆ ಲಾಭ?

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದ ವಿರುದ್ಧ ಪಂದ್ಯ ಆಡಲ್ಲ ಅಂದಾಗ ಸಾಕಷ್ಟು ಫ್ಯಾನ್ಸ್ ಬೇಜಾರಾಗಿದ್ರು. ಛೇ ಹೈವೋಲ್ಟೇಜ್ ಮ್ಯಾಚ್ ಮಿಸ್ ಆಗುತ್ತಲ್ಲ ಅಂತಾ ಹರ್ಟ್ ಆಗಿದ್ರು. ಆದ್ರೆ ಪಾಕಿಸ್ತಾನ ಉಲ್ಟಾ ಹೊಡ್ದು ಪಂದ್ಯ ಆಡೋಕೆ ರೆಡಿ ಅಂತಿದ್ದಂತೆ ಅಭಿಮಾನಿಗಳಿಗಿಂತ ಜಾಸ್ತಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಖುಷಿಯಾಗಿದೆ. ಅಬ್ಬಾ ಪಂದ್ಯ ನಡೆಯುತ್ತೆ ಅಂತಾ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ ಈ ಪಂದ್ಯದಿಂದ ಆಗೋ ಲಾಭ ಅಷ್ಟಿಷ್ಟಲ್ಲ. ಕ್ರಿಕೆಟ್ ಜಗತ್ತನ್ನೇ ಡಾಮಿನೇಟ್ ಮಾಡ್ತಿರೋ ಭಾರತದ ವಿರುದ್ಧ ಪಾಕಿಸ್ತಾನ ಆಡೋದ್ರಿಂದ ಐಸಿಸಿಗೆ ಲಾಭ.

ಇದನ್ನೂ ಓದಿ : ಹೈಕಮಾಂಡ್ ಹೇಳಿದಂತೆ ನಾನು, ಡಿಕೆಶಿ ನಡೆದುಕೊಳ್ಳಬೇಕು! – ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಖಡಕ್‌ ಮಾತು!

ಪಾಕಿಸ್ತಾನ ಬಾಯ್ಕಾಟ್ ನಾಟಕ ಶುರು ಮಾಡಿದಾಗ್ಲೇ ಇವ್ರೆಲ್ಲಾ ಆಡೋದೊಂದು ಮಾಡೊದೊಂದು ಅಂತಾ ಇಡೀ ಕ್ರಿಕೆಟ್ ಜಗತ್ತೇ ಹೇಳಿತ್ತು. ಅದು ನಿಜ ಕೂಡ ಆಯ್ತು. ಸ್ವತಃ ಪಾಕ್ ಪ್ರಧಾನಿಯೇ ಬಹಿಷ್ಕಾರದ ಬಿಲ್ಡಪ್ ಕೊಟ್ಟು ಶೇಪ್ ಔಟ್ ಮಾಡ್ಕೊಂಡ್ರು. ಪಾಕಿಸ್ತಾನ ಮ್ಯಾಚ್ ಆಡ್ಲಿ ಬಿಡ್ಲಿ ಅದ್ರಿಂದ ಭಾರತಕ್ಕೆ ನಷ್ಟನೂ ಇಲ್ಲ ಲಾಭನೂ ಇಲ್ಲ. ಬಟ್ ಭಾರತದ ವಿರುದ್ಧ ಪಾಕ್ ಆಡೋದು ಪಾಕಿಸ್ತಾನಕ್ಕೂ ಲಾಭ. ಅದಕ್ಕಿಂತ ಜಾಸ್ತಿ ಐಸಿಸಿಗೂ ಲಾಭ. ಐಸಿಸಿಯ ಮಾಜಿ ಸಿಎಫ್‌ಒ ಫೈಸಲ್ ಹಸ್ಟೈನ್ ಸೋಶಿಯಲ್ ಮೀಡಿಯಾದಲ್ಲೇ ಈ ಪಂದ್ಯದ ವೇಯ್ಟೇಜ್ ಎಷ್ಟು ಅನ್ನೋದನ್ನ ಹೇಳ್ಕೊಂಡಿದ್ದಾರೆ. ಕ್ರಿಕೆಟ್​ನಲ್ಲಿ ಇದು ಮತ್ತೊಂದು ಆಟ ಅಲ್ಲ. ಐಸಿಸಿಗೆ ಫೈನಾನ್ಶಿಯಲಿ ಬ್ಯಾಕ್​ಬೋನ್ ಎಂದಿದ್ದಾರೆ. ಅದಕ್ಕೆ ಕಾರಣವೂ ಇದೆ.

ನಿಯಮಗಳ ಪಾಲನೆ.. ಹಣದ ಜಪ.. ಐಸಿಸಿ ಸಂಧಾನ!

ಅಷ್ಟಕ್ಕೂ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಾಗ ಅಷ್ಟೇನು ಫೋರ್ಸ್ ಮಾಡದ ಐಸಿಸಿ ಪಾಕಿಸ್ತಾನ ಆಡಲ್ಲ ಅಂದಾಗ ಅಷ್ಟೊಂದು ತಲೆಕೆಡಿಸಿಕೊಂಡು ಪಿಸಿಬಿ ಜೊತೆ ಸಂಧಾನ ನಡೆಸೋಕೆ ಕಾರಣವೂ ಇದೆ. ಐಸಿಸಿಗೆ ಯಾರೇ ಅಧ್ಯಕ್ಷ ಆದ್ರೂ ಸದಸ್ಯ ಮಂಡಳಿಗಳೆಲ್ಲಾ ಸರಿ ಸಮಾನರು. ಪಾಕ್ ಆದ್ರೂ ಅಷ್ಟೇ ಭಾರತ ಆದ್ರೂ ಅಷ್ಟೇ. ಒಟ್ನಲ್ಲಿ ಅವ್ರಿಗೆ ಹಣ ಬರ್ಬೇಕು. ಜೊತೆಗೆ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ದಿಗ್ಗಜ ಕ್ರಿಕೆಟ್ ಮಂಡಳಿಗಳ ಸದಸ್ಯರ ಅಭಿಪ್ರಾಯಗಳನ್ನೂ ಕೇಳ್ಬೇಕು. ಹಾಗೇ ಪಾಕಿಸ್ತಾನ ಕೂಡ ಕ್ರಿಕೆಟ್ ಜಗತ್ತಿನ ಒನ್ ಆಫ್ ದಿ ಸ್ಟ್ರಾಂಗ್ ಟೀಂ. ಅದೂ ಟೆಸ್ಟ್ ಕ್ರಿಕೆಟ್ ಆಡುವ ಕಂಟ್ರಿ. ಪಿಸಿಬಿ ಉಳೀಬೇಕು ಅಂದ್ರೆ ಅವ್ರು ಭಾರತದ ವಿರುದ್ಧ ಪಂದ್ಯ ಆಡ್ಬೇಕು. ಅಲ್ದೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಒಳ್ಳೊಳ್ಳೆ ಪ್ಲೇಯರ್ಗ್​ಗಳನ್ನೂ ಕೊಟ್ಟಿದೆ. ಇಮ್ರಾನ್‌ಖಾನ್, ಜಾವೇದ್ ಮಿಯಾಂದಾದ್, ವಾಸಿಂ ಅಕ್ರಮ್, ವಕಾರ್ ಯೂನಸ್, ಇಂಜಿ, ಶೋಯೆಬ್ ಅಖ್ತರ್, ಸಕ್ಲೀನ್ ಮುಸ್ತಾಕ್ ಹೀಗೆ ಪಾಕ್‌ನ ಅಪ್ರತಿಮ ಆಟಗಾರರು ಬಂದೋಗಿದ್ದಾರೆ. 1990ರಿಂದ 2010ರ ತನಕದ ಪಾಕ್ ತಂಡ ಕ್ರಿಕೆಟ್ ಜಗತ್ತಿನ ಎಂತಹುದೇ ತಂಡಕ್ಕೂ ಸೆಡ್ಡು ಹೊಡೆಯುವ ತಾಕತ್ತು ಇತ್ತು. ಆದ್ರೆ ಈಗ ಇಲ್ಲ. ಕಾರಣ ಅಲ್ಲಿನ ಕ್ರಿಕೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ರಾಜಕೀಯ, ಅಂತರಿಕ ಕಲಹದಿಂದ ಪಾಕ್ ತಂಡ ಈಗ ಜಿಂಬಾಂಬ್ವೆ ವಿರುದ್ಧವೂ ಡಮ್ಮಿಯಾಗಿ ಕಾಣ್ತಿದೆ. ಹೀಗಾಗಿ ದುಡ್ಡಿಗಾಗಿ ಅವ್ರು ಯಾವ ಮಟ್ಟಕ್ಕಾದ್ರೂ ಇಳೀತಾರೆ. ಭಾರತ-ಪಾಕ್ ಪಂದ್ಯಗಳಿಗೆ ಇರೋ ಕ್ರೇಜ್ ಕೂಡ ಹಾಗೇ ಇದೆ.

ಭಾರತ-ಪಾಕ್ ದುಡ್ಡಿನ ಪಂದ್ಯ!

ಭಾರತ-ಪಾಕ್ ಪಂದ್ಯಗಳಂದ್ರೇನೇ ಟಿಕೆಟ್ಸ್ ಸೋಲ್ಡ್ ಔಟ್

ಫ್ಲೈಟ್ ಟಿಕೆಟ್ಸ್, ಹೋಟೆಲ್ ರೂಮ್ಸ್ ಹೀಗೆ ಎಲ್ಲವೂ ಎಕ್ಸ್​ಪೆನ್ಸಿವ್

ಕಮರ್ಷಿಯಲ್ ವ್ಯಾಲ್ಯೂ 200 ರಿಂದ 250 ಮಿಲಿಯನ್ ಯುಎಸ್ ಡಾಲರ್

2024 ರಿಂದ 2027ರವರೆಗೆ ಐಸಿಸಿ ಈವೆಂಟ್​ ಗಳಿಗೆ 3.4 ಬಿಲಿಯನ್ ಡಾಲರ್

4 ವರ್ಷಗಳ ನಾಲ್ಕೂ ಟೂರ್ನಿಗಳಿಂದ ಟೋಟಲ್ಲಾಗಿ 179 ಪಂದ್ಯಗಳು

ಭಾರತ 26 ರಿಂದ 30 ಪಂದ್ಯ, ಈಗ ಎರಡು ಟೂರ್ನಿಗಳಿಂದ 14 ಪಂದ್ಯ

ಐಸಿಸಿ ಟೂರ್ನಿಗಳಲ್ಲಿ ಹತ್ತತ್ರ 80 ಪರ್ಸೆಂಟ್ ರೆವೆನ್ಯೂ ಭಾರತದ ಪಂದ್ಯ

10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 40 ಲಕ್ಷ ಪೇ ಮಾಡ್ಬೇಕು

Shantha Kumari

Leave a Reply

Your email address will not be published. Required fields are marked *