‘ಪಠಾಣ್’ ಚಿತ್ರಕ್ಕೆ ಮತ್ತೊಂದು ಸವಾಲು – ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರೀ ರಿಲೀಸ್!

‘ಪಠಾಣ್’ ಚಿತ್ರಕ್ಕೆ ಮತ್ತೊಂದು ಸವಾಲು – ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರೀ ರಿಲೀಸ್!

ಬಾಲಿವುಡ್ ಕಿಂಗ್​ಖಾನ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಜನವರಿ 25ರಂದು ರಿಲೀಸ್ ಆಗಲಿರುವ ಪಠಾಣ್ ಚಿತ್ರಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಪಠಾಣ್ ಚಿತ್ರಕ್ಕೂ ಮುನ್ನವೇ ಮತ್ತೊಂದು ವಿವಾದಿತ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’​ ರೀ ರಿಲೀಸ್ ಆಗ್ತಿದೆ.

ಇದನ್ನೂ ಓದಿ:ಸ್ಟಾರ್ ಓಟಗಾರ್ತಿಗೂ ತಟ್ಟಿದ ಡ್ರಗ್ಸ್ ಸೇವನೆ ಎಫೆಕ್ಟ್ – ದ್ಯುತಿ ಚಂದ್ ತಾತ್ಕಾಲಿಕ ಅಮಾನತು!

ಕಳೆದ ವರ್ಷ ಮಾರ್ಚ್​ನಲ್ಲಿ ರಿಲೀಸ್ ಆಗಿದ್ದ ಕಾಶ್ಮೀರ್​ ಫೈಲ್ಸ್ ಬಾಕ್ಸಾಫೀಸ್​ನಲ್ಲಿ ಭಾರಿ ಸದ್ದು ಮಾಡಿತ್ತು. 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಪಠಾಣ್ ಚಿತ್ರದ ರಿಲೀಸ್​​ಗೂ ಮುನ್ನ ಅಂದ್ರೆ ಜನವರಿ 19ರಂದು ಅಂದ್ರೆ ನಾಳೆ ದಿ ಕಾಶ್ಮೀರ್ ಫೈಲ್ಸ್ ಮತ್ತೊಮ್ಮೆ ಥಿಯೇಟರ್​ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಶಾರುಖ್ ಖಾನ್ ಸಿನಿಮಾ ರಿಲೀಸ್​​ಗೂ ಮುನ್ನವೇ ಕಾಶ್ಮೀರ್ ಫೈಲ್ಸ್​ ರೀ ರಿಲೀಸ್ ಮಾಡೋಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ. ಆದ್ರೆ ರೀ ರಿಲೀಸ್ ಹಿಂದಿನ ಉದ್ದೇಶ ಏನು ಅನ್ನೋ ಬಗ್ಗೆ ಈಗ ಬಿಸಿಬಿಸಿ ಚರ್ಚೆಯಾಗ್ತಿದೆ.

ಈ ನಡುವೆ ಪಠಾಣ್ ಸಿನಿಮಾ ರಿಲೀಸ್​ಗೂ ಮುನ್ನ ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡದಿರಲು ಪಠಾಣ್ ಚಿತ್ರ ತಂಡ ನಿರ್ಧರಿಸಿದೆ. ಚಿತ್ರದ ಬಗ್ಗೆ ಯಾವುದೇ ಹೊಸ ವಿವಾದ ಸೃಷ್ಟಿಯಾಗಬಾರದು ಅನ್ನೋ ನಿಟ್ಟಿನಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ. ಸಂದರ್ಶನದ ವೇಳೆ ಕೆಲ ವಿವಾದಾತ್ಮಕ ಪ್ರಶ್ನೆಗಳಿಗೆ ಉತ್ತರಿಸೋ ಸಂದರ್ಭದಲ್ಲಿ ಇನ್ನೊಂದಷ್ಟು ಹೊಸ ವಿವಾದಗಳು ಸೃಷ್ಟಿಯಾಗುತ್ತೆ. ಇದು ಸಿನಿಮಾ ರಿಲೀಸ್ ವೇಳೆ ಭಾರಿ ಪರಿಣಾಮ ಬೀರುತ್ತೆ. ಹೀಗಾಗಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಸೇರಿದಂತೆ ಪಠಾಣ್ ಚಿತ್ರದ ಯಾರೊಬ್ಬರು ಕೂಡ ಸಿನಿಮಾ ರಿಲೀಸ್​ಗೂ ಮುನ್ನ ಮಾಧ್ಯಮಗಳಿಗೆ ಸಂದರ್ಶನ ನೀಡದಿರಲು ನಿರ್ಧರಿಸಿದ್ದಾರೆ.

ರಿಲೀಸ್​ಗೂ ಮುನ್ನವೇ ವಿವಾದಗಳಿಂದಲೇ ಸದ್ದು ಮಾಡುತ್ತಿರೋ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳು ಮೂಡಿವೆ. ಹೀಗಾಗಿ ಈ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದೇ ಕುತೂಹಲ ಮೂಡಿಸಿದೆ.

 

suddiyaana