ಟಿ20I ನಲ್ಲಿ ಅತಿ ವೇಗವಾಗಿ 5 ಸಾವಿರ ರನ್ – ಅಭಿಷೇಕ್ ಶರ್ಮಾ ವಿಶ್ವ ದಾಖಲೆ ಮುರಿದ ಫಿನ್ ಅಲೆನ್

ಯುಎಇ ವಿರುದ್ಧ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿದ್ದ ನ್ಯೂಜಿಲ್ಯಾಂಡ್ನ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಅವರು ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಅವರ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಪಂದ್ಯದಲ್ಲಿ ಅಜೇಯ 84 ರನ್ ಬಾರಿಸಿದ ಫಿನ್ ಅಲೆನ್, ಟಿ20 ಕ್ರಿಕೆಟ್ನಲ್ಲಿ ಅತಿ ವೇಗವಾಗಿ 5 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಅಭಿಷೇಕ್ ಶರ್ಮ ಹೆಸರಿನಲ್ಲಿತ್ತು. ಕಳೆದ ತಿಂಗಳು ಅಭಿಷೇಕ್ 2,898 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು. ಆದರೆ ಅಲೆನ್ ಕೇವಲ 2,854 ಎಸೆತಗಳಲ್ಲಿ ಈ ದಾಖಲೆಯನನು ಮೀರಿ ನಿಂತರು.
ತಮ್ಮ ಇನ್ನಿಂಗ್ಸ್ನಲ್ಲಿ, ಅಲೆನ್ ಯುಎಇ ವಿರುದ್ಧ ಐದು ಸಿಕ್ಸರ್ಗಳನ್ನು ಬಾರಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಟಿ20ಐಗಳಲ್ಲಿ 100 ಸಿಕ್ಸರ್ಗಳನ್ನು ತಲುಪಿದ ಮೂರನೇ ಅತ್ಯಂತ ವೇಗದ ಬ್ಯಾಟ್ಸ್ಮನ್ ಎನಿಸಿಕೊಂಡರು. ವೆಸ್ಟ್ ಇಂಡೀಸ್ನ ಎವಿನ್ ಲೂಯಿಸ್ 789 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ. ಆಸ್ಟ್ರಿಯಾದ ಕರಣ್ಬೀರ್ ಸಿಂಗ್ 813 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಬ್ಯಾಟ್ ನಲ್ಲಿ ರಬ್ಬರ್ ಲೇಯರ್ – ಮೋಸದಿಂದಲೇ ಬಿಗ್ ಸ್ಕೋರ್ ಬರ್ತಿದ್ಯಾ?
ಸತತ ಎರಡು ಗೆಲುವು ಸಾಧಿಸಿರುವ ನ್ಯೂಜಿಲ್ಯಾಂಡ್ ಸೂಪರ್-8 ಹಂತಕ್ಕೆ ಪ್ರವೇಶ ಪಡೆಯಲು ಇನ್ನೊಂದು ಹೆಜ್ಜೆ ಮಾತ್ರ ದೂರದಲ್ಲಿದ್ದಾರೆ. ಆದರೆ, ಅದಕ್ಕೂ ಮುನ್ನ, ಏಕದಿನ ತಂಡದ ನಾಯಕ ಮೈಕೆಲ್ ಬ್ರೇಸ್ವೆಲ್ ಗಾಯದಿಂದ ಟಿ20 ವಿಶ್ವಕಪ್ನಿಂದ ಹೊರಗುಳಿದರು. ಇದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. 34 ವರ್ಷದ ಆಟಗಾರ ಎಡಗಾಲಿನ ಗಾಯದಿಂದ ಬಳಲುತ್ತಿದ್ದು, ಕನಿಷ್ಠ ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ.
ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ಈ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ.

ನೋಡಿರಿ

