ದುಡ್ಡಿದ್ರೂ BCCI ದಡ್ಡತನ – ಗ್ರೇಡ್ ನಲ್ಲೂ RO-KOಗೆ ಅವಮಾನ
ಒಪ್ಪಂದದಲ್ಲಿ ಮಹಾ ಎಡವಟ್ಟು

ಟಿ-20 ವಿಶ್ವಕಪ್ ನಡುವೆಯೇ ಬಿಸಿಸಿಐ ತನ್ನ ಸೆಂಟ್ರಲ್ ಕಾಂಟ್ರ್ಯಾಕ್ಟ್ ಲಿಸ್ಟ್ ಅನೌನ್ಸ್ ಮಾಡಿದೆ. ಈ ಸಲ ಆಟಗಾರರಿಗೆ ನೀಡೋ ಗ್ರೇಡ್ನಲ್ಲಿ ಮೇಜರ್ ಸರ್ಜರಿಗಳೇ ಆಗಿವೆ. ಹಾಗೇ ಕೆಲ ನಿರ್ಧಾರಗಳು ಶಾಕಿಂಗ್ ಕೂಡ ಅನ್ನಿಸ್ತಿದೆ. ಯಾಕಂದ್ರೆ ಲೆಜೆಂಡರಿ ಪ್ಲೇಯರ್ಗಳ ವಿಚಾರದಲ್ಲೂ ಬಿಸಿಸಿಐ ಸಣ್ಣತನ ತೋರಿಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗ್ರೇಡ್ನಲ್ಲಿ ಬಹುಶಃ ಇಂಥಾ ಚೀಪ್ ಗಿಮಿಕ್ಗಳು ಬೇಕಿರಲಿಲ್ಲ. ಅಷ್ಟು ಸಾಲ್ದು ಅಂತಾ ಇರೋ ಆಟಗಾರರನ್ನೂ ಒಪ್ಪಂದದಿಂದ ಕೈಬಿಟ್ಟಿದೆ.
ಇದನ್ನೂ ಓದಿ : ಗಂಡು ಮಕ್ಕಳಿಲ್ಲ ಎಂದು ಜಾತ್ರೆಯಲ್ಲಿ ಮಗುವನ್ನ ಕದ್ದೊಯ್ದ ಮಹಿಳೆ!
ಬಿಸಿಸಿಐ.. ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ. ನೂರಾರು ಕೋಟಿಗಳ ಲೆಕ್ಕದಲ್ಲಿ ಆದಾಯ. ಸಾವಿರಾರು ಕೋಟಿಗಳ ಲೆಕ್ಕದಲ್ಲಿ ವಹಿವಾಟು. ಭಾರತದ ಮುಂದೆ ಬೇರೆ ಯಾವುದೇ ಮಂಡಳಿಗಳೂ ಹತ್ತಿರಕ್ಕೆ ಬರೋಕೂ ಆಗಲ್ಲ. ಹೀಗಿದ್ರೂ ಕೂಡ ಬಿಸಿಸಿಐ ಬ್ರಾಡ್ ಆಗಿ ಥಿಂಕ್ ಮಾಡ್ತಿಲ್ಲ. ತಂಡವನ್ನ ದೊಡ್ಡದು ಮಾಡೋ ಗೋಜಿಗೂ ಹೋಗಿಲ್ಲ. ಕೊನೆಗೆ ರೋಹಿತ್ ಮತ್ತು ಕೊಹ್ಲಿ ಗ್ರೇಡ್ನಲ್ಲೂ ಕಳ್ಳಾಟ ಆಡಿದ್ದಾರೆ. ಅದೂ ಅಲ್ದೇ ಈ ಸಲ ಎಪ್ಲಸ್ ಗ್ರೇಡ್ಗೇ ಗೇಟ್ಪಾಸ್ ಕೊಟ್ಟಿದ್ದಾರೆ. ಎಬಿಸಿ ಅಂತಾ ಮೂರು ಗುಂಪುಗಳನ್ನ ಮಾತ್ರ ಮಾಡಿದ್ದಾರೆ. ಜೊತೆಗೆ ಕೆಲ ಆಟಗಾರರನ್ನೂ ಹೊರ ಹಾಕಿದ್ದಾರೆ.
ಇಶಾನ್ ಕಿಶನ್, ಮೊಹಮ್ಮದ್ ಶಮಿಗೂ ಇಲ್ಲ ಲಕ್!
ಪ್ರಸ್ತುತ ಬಿಸಿಸಿಐನ ಒಪ್ಪಂದದಲ್ಲಿ 6 ಆಟಗಾರರಿಗೆ ಡಿಮೋಷನ್ ನೀಡಲಾಗಿದೆ. ಜೊತೆಗೆ ಕೆಲ ಆಟಗಾರರನ್ನ ಒಪ್ಪಂದ ಪಟ್ಟಿಯಿಂದಲೇ ಕೈಬಿಟ್ಟಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಆಡ್ತಿರೋ ಇಶಾನ್ ಕಿಶನ್ಗೂ ಚಾನ್ಸ್ ಕೊಟ್ಟಿಲ್ಲ. ಹಾಗೇ ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್, ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಕೂಡ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಕಳ್ಕೊಂಡಿದ್ದಾರೆ. ಕಳೆದ ಬಾರಿ 34 ಇದ್ದ ಸಂಖ್ಯೆಯನ್ನ ಈ ಸಲ 40ಕ್ಕೆ ಏರಿಕೆ ಮಾಡ್ತಾರೆ ಮತ್ತೊಂದಷ್ಟು ಆಟಗಾರರಿಗೆ ಅವಕಾಶ ಸಿಗುತ್ತೆ ಅನ್ಕೊಂಡ್ರೆ ಇರೋರನ್ನೇ ತೆಗೆದು 30ಕ್ಕೆ ತಂದಿಟ್ಟಿದ್ದಾರೆ.
A ಗ್ರೇಡ್ ನಲ್ಲಿ ಮೂವರು!
ಶುಭ್ ಮನ್ ಗಿಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ
( ಎ ಗ್ರೇಡ್ನಲ್ಲಿ ಇರೋರಿಗೆ ನೀಡೋ ವೇತನದಲ್ಲೂ ಬೇರೆ ಬೇರೆ ಇದೆ. ಇಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ 7 ಕೋಟಿ ವಾರ್ಷಿತ ವೇತನ ಪಡೀತಾರೆ. ಬಟ್ ಗಿಲ್ ಮತ್ತು ಜಡ್ಡುಗೆ 5 ಕೋಟಿ ಮಾತ್ರ ನೀಡಲಾಗ್ತಿದೆ. ಗ್ರೇಡ್ ಒಂದೇ ಇದ್ರೂ ವೇತನದಲ್ಲಿ ವೇರಿಯೇಷನ್ಸ್ ಇದೆ. )
B ಗ್ರೇಡ್ ನಲ್ಲಿ 11 ಆಟಗಾರರು!
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್
( ಇನ್ನು ಬಿ ಗ್ರೇಡ್ ನಲ್ಲಿ ಇರೋರಿಗೆ 3 ಕೋಟಿ ರೂಪಾಯಿ ವೇತನವನ್ನ ವಾರ್ಷಿಕವಾಗಿ ಬಿಸಿಸಿಐ ನೀಡುತ್ತೆ. 11 ಆಟಗಾರರು 3 ಕೋಟಿ ಪಡೀತಾರೆ. )
C ಗ್ರೇಡ್ ನಲ್ಲಿ 16 ಆಟಗಾರರು!
ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ರೆಡ್ಡಿ, ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ರವಿ ಬಿಷ್ಣೋಯ್
( ಸಿ ಗ್ರೇಡ್ ನಲ್ಲಿ ಇರೋರಿಗೆ ವಾರ್ಷಿಕವಾಗಿ 1 ಕೋಟಿಯನ್ನ ಬಿಸಿಸಿಐ ನೀಡುತ್ತೆ )
ಅವ್ರಿಬ್ಬರು ಲೆಜೆಂಡರಿ ಆಟಗಾರರು. ಒಂದೂವರೆ ದಶಕದಿಂದ ಭಾರತಕ್ಕಾಗಿ ಎಲ್ಲವನ್ನೂ ಕೊಟ್ಟಿದ್ದಾರೆ. ಅವ್ರಿಬ್ಬರು ಭಾರತಕ್ಕಾಗಿ ಆಡೋದೇ ಒಂದು ಹೆಮ್ಮೆಯ ವಿಚಾರ. ಈಗ್ಲೂ ಕೂಡ ಏಕದಿನದಲ್ಲಿ ಮಾತ್ರ ಆಡ್ತಿದ್ದಾರೆ ಅಂದ್ರೂ ಪಂದ್ಯಗಳನ್ನ ನೋಡೋಕೆ ಜನ ಕಿಕ್ಕಿರಿದು ಸೇರ್ತಾರೆ. ಅವ್ರು ಬ್ಯಾಟಿಂಗ್ ಮಾಡೋ ಟೈಮಲ್ಲಿ ಪ್ರೀಮಿಯರ್ ಌಡ್ಗಳು ಪ್ಲೇ ಆಗ್ತಾವೆ. ಅವ್ರಿಬ್ರು ಬಿಸಿಸಿಐಗೆ ಒಂಥರಾ ಮನಿ ಬ್ಯಾಗ್ ಇದ್ದಂಗೆ. ಈಗ್ಲೂ ಅವ್ರ ಹೆಸ್ರಲ್ಲಿ ದುಡ್ಡು ಮಾಡ್ತಿದ್ದಾರೆ. ಹೀಗಿದ್ರೂ ದುಡಿಯೋವರೆಗೂ ದುಡಿಸ್ಕೊಂಡು ಎತ್ತಿಗೆ ವಯಸ್ಸಾಯ್ತು ಕಸಾಯಿ ಖಾನೆಗೆ ಕೊಡು ಅನ್ನೋ ಥರ ಅವ್ರಿಬ್ಬರ ಗ್ರೇಡ್ ಇಳಿಸಿದ್ದಾರೆ. ಹಾಗಾದ್ರೆ ಬಿಸಿಸಿಐ ಅಷ್ಟೊಂದು ಬಡವಾಗಿದ್ಯಾ? ಯಾವುದೇ ಕ್ರಿಕೆಟ್ ಮಂಡಳಿಗೇ ಆದ್ರೂ ಕ್ರೀಡಾಸ್ಫೂರ್ತಿ ಇರ್ಬೇಕು. ಇಷ್ಟು ವರ್ಷ ಅವ್ರು ಕೊಟ್ಟಿರೋ ಕೊಡುಗೆಗಾದ್ರೂ ಗೌರವ ಕೊಡ್ಬೇಕಲ್ವ. ಆದ್ರೆ ಎಲ್ಲವನ್ನೂ ದುಡ್ಡಿನಿಂದ್ಲೇ ನೋಡೋ ಬಿಸಿಸಿಐಗೆ ಇದ್ಯಾವುದೂ ಅರ್ಥ ಆಗಲ್ಲ. ಬಿಸಿಸಿಐನ ಈ ಸಣ್ಣತನಕ್ಕೆ ಅಭಿಮಾನಿಗಳೂ ಸಿಟ್ಟಾಗಿದ್ದಾರೆ.

ನೋಡಿರಿ

