ನಾಯಿ ಕಚ್ಚಿ ಬಾಲಕನಿಗೆ ಗಾಯ! – 3 ಇಂಜೆಕ್ಷನ್‌ ಕೊಡಿಸಿದ್ರೂ ಬದುಕುಳಿಯಲಿಲ್ಲ ಕಂದಮ್ಮ!

ನಾಯಿ ಕಚ್ಚಿ ಬಾಲಕನಿಗೆ ಗಾಯ! – 3 ಇಂಜೆಕ್ಷನ್‌ ಕೊಡಿಸಿದ್ರೂ ಬದುಕುಳಿಯಲಿಲ್ಲ ಕಂದಮ್ಮ!

ಮಧ್ಯಪ್ರದೇಶದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ನಾಯಿ ಕಚ್ಚಿದ ಬಳಿಕ ಬಾಲಕನಿಗೆ ರೇಬಿಸ್‌ ಇಂಜೆಕ್ಷನ್‌ ಕೊಡಿಸಿದ ಬೆನ್ನಲ್ಲೇ ಆತ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಗಂಡು ಮಕ್ಕಳಿಲ್ಲ ಎಂದು ಜಾತ್ರೆಯಲ್ಲಿ ಮಗುವನ್ನ ಕದ್ದೊಯ್ದ ಮಹಿಳೆ!

ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಬಾಲಕನಿಗೆ ಬೀದಿ ನಾಯಿ ಕಚ್ಚಿತ್ತು. ಈ ಬೆನ್ನಲ್ಲೇ ಬಾಲಕನನ್ನು ಪೋಷಕರು ಸರ್ಕಾರಿ ಆಸ್ಪತ್ರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಬಳಿಕ ಆತನಿಗೆ ಬಾಲಕನಿಗೆ ರೇಬಿಸ್ ವಿರೋಧಿ ಲಸಿಕೆಯ ಮೂರು ಡೋಸ್‌  ನೀಡಲಾಗಿತ್ತು. ಆದ್ರೆ ಬಾಲಕನ ಆರೋಗ್ಯ ಹದಗೆಟ್ಟಿದೆ. ಬಾಲಕನಲ್ಲಿ ರೇಬಿಸ್ ಲಕ್ಷಣಗಳು ಕಾಣಿಸಿಕೊಂಡಿದ್ದು, ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ. ಲಸಿಕೆ ಪಡೆದರೂ ಮಗು ಬದುಕುಳಿಯದಿದ್ದದ್ದು ಪೋಷಕರನ್ನು ಮತ್ತು ವೈದ್ಯಕೀಯ ಲೋಕವನ್ನು ಬೆಚ್ಚಿಬೀಳಿಸಿದೆ.

ಬಾಲಕನ ಸಾವಿನಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‘ಲಸಿಕೆ ಹಾಕಿದ ಮೇಲೂ ಮಗು ಸಾಯಲು ಹೇಗೆ ಸಾಧ್ಯ? ವೈದ್ಯರು ಕಳಪೆ ಗುಣಮಟ್ಟದ ಅಥವಾ ಅವಧಿ ಮೀರಿದ ಲಸಿಕೆ ನೀಡಿರಬಹುದು ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ. ನೀಡಲಾದ ಲಸಿಕೆಯ ಬ್ಯಾಚ್ ಮತ್ತು ಗುಣಮಟ್ಟವನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *