ಸ್ಟಾರ್ ಓಟಗಾರ್ತಿಗೂ ತಟ್ಟಿದ ಡ್ರಗ್ಸ್ ಸೇವನೆ ಎಫೆಕ್ಟ್ – ದ್ಯುತಿ ಚಂದ್ ತಾತ್ಕಾಲಿಕ ಅಮಾನತು!

ಸ್ಟಾರ್ ಓಟಗಾರ್ತಿಗೂ ತಟ್ಟಿದ ಡ್ರಗ್ಸ್ ಸೇವನೆ ಎಫೆಕ್ಟ್ – ದ್ಯುತಿ ಚಂದ್ ತಾತ್ಕಾಲಿಕ ಅಮಾನತು!

ಶರವೇಗದಲ್ಲಿ ಓಡುತ್ತಾ ಗೆಲುವಿನ ಪತಾಕೆ ಹಾರಿಸುತ್ತಿದ್ದ ಭಾರತದ ಸ್ಟಾರ್ ಆಟಗಾರ್ತಿ ದ್ಯುತಿ ಚಂದ್​ ಓಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ದ್ಯುತಿ ಚಂದ್ ನಿಷೇಧಿತ ಡ್ರಗ್ ಸೇವನೆ ಮಾಡಿರುವುದು ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಧೃಡಪಟ್ಟಿದೆ. ಹೀಗಾಗಿ ದ್ಯುತಿ ಅವರನ್ನು ಆಟದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ:  ಲಾಲ್​ ಬಾಗ್​ನಲ್ಲಿ ವಾಹನಗಳಿಗೆ ನೋ ಎಂಟ್ರಿ – ಸಚಿವರು, ಅಧಿಕಾರಿಗಳಿಗೂ ಸೈಕಲ್ಲೇ ಗಟ್ಟಿ..!

ವಿಶ್ವ ಉದ್ದೀಪನ ಮದ್ದು ಸಂಸ್ಥೆ (World Anti-Doping Agency) ನಡೆಸಿದ ಡೋಪ್ ಪರೀಕ್ಷೆಯಲ್ಲಿ ದ್ಯುತಿ ಚಂದ್ ಫೇಲ್ ಆಗಿದ್ದಾರೆ. ಈ ಕಾರಣದಿಂದ ದ್ಯುತಿಯನ್ನ ಆಟದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ದ್ಯುತಿಯವರ ಮೂತ್ರದ ಮಾದರಿಯ ವರದಿಯು ಪಾಸಿಟಿವ್ ಬಂದಿದ್ದು, ನಿಷೇಧಿತ ಪದಾರ್ಥಗಳನ್ನು ಸೇವಿಸಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸದ್ಯ ದ್ಯುತಿ ಚಂದ್‌ರನ್ನು ಅಮಾನತುಗೊಳಿಸಿರುವುದರಿಂದ ಏಷ್ಯನ್ ಗೇಮ್ಸ್‌ನಲ್ಲಿ ದ್ಯುತಿ  ಆಡುವುದರ ಮೇಲೆಯೂ ಅನುಮಾನ ಮೂಡಿದೆ. ದ್ಯುತಿ ಅವರ ಈ ಅಮಾನತು ಶಿಕ್ಷೆ ಎಲ್ಲಿಯವರೆಗೆ ಮುಂದುವರೆಯಲಿದೆ ಹಾಗೂ ಯಾವಾಗ ಕೊನೆಗೊಳ್ಳಲಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಏಕೆಂದರೆ, ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕಾದರೆ ಸಂಪೂರ್ಣ ತನಿಖಾ ವರದಿ ಹೊರಬೀಳಬೇಕಾಗಿದೆ. ಡೋಪ್ ಪರೀಕ್ಷೆಯಲ್ಲಿ ವಿಫಲವಾಗಿರುವ ಬಗ್ಗೆ ದ್ಯುತಿ ಚಂದ್ ಅವರಿಗೆ ಪತ್ರ ಬರೆದಿರುವ ಎಎಎಫ್, ಪತ್ರದಲ್ಲಿ ವಿಶೇಷವಾಗಿ ದ್ಯುತಿ ಚಂದ್‌ಗೆ ನಿಷೇಧಿತ ವಸ್ತುಗಳ ಸೇವನೆಯ ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ.

 

ದ್ಯುತಿ ಚಂದ್‌ಗೆ ಎಎಎಫ್ ವಿಸ್ತೃತ ಪತ್ರವನ್ನ ಬರೆದಿದೆ. ನಿಮ್ಮ ಮೂತ್ರದ ಮಾದರಿ ಪರೀಕ್ಷೆಯನ್ನು ಮಾಡಲಾಗಿದ್ದು, ವಾಡಾ ಸೂಚನೆಗಳ ಪ್ರಕಾರ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿರುವುದು ಕಂಡುಬಂದಿದೆ ಎಂದು ಹೇಳಿದೆ. ದ್ಯುತಿ ಚಂದ್ ಅವರ ಮೂತ್ರದ ಮಾದರಿಯನ್ನು 2022ರ ಡಿಸೆಂಬರ್ 5 ರಂದು ಭುವನೇಶ್ವರದಲ್ಲಿ ತೆಗೆದುಕೊಳ್ಳಲಾಗಿತ್ತು ಪಿಟಿಐ ವರದಿ ಪ್ರಕಾರ, ಈ ಬಗ್ಗೆ ಪ್ರತಿಕ್ರಿಯಿಸಿರುವ ದ್ಯುತಿ, ಫಲಿತಾಂಶ ಪಾಸಿಟಿವ್ ಬಂದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

 

 

 

suddiyaana