ಆದಿ – ಭಾಗ್ಯ ಪ್ರೇಮ ಪಯಣ ಶುರು! – ತಾಂಡವ್ಗೆ ಭಾಗ್ಯಳೇ ಗತಿ!

ಆದಿ, ತಾಂಡವ್.. ಇವರಿಬ್ಬರಲ್ಲಿ ಭಾಗ್ಯ ಯಾರನ್ನ ಒಪ್ಪಿಕೊಳ್ತಾಳೆ ಅನ್ನೋದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಆದಿ ಭಾಗ್ಯಳನ್ನು ಮದುವೆ ಆಗಿ ಹೊಸ ಜೀವನ ಶುರು ಮಾಡ್ಬೇಕು ಅಂತ ಕನಸು ಕಾಣ್ತಿದ್ರೆ, ಇತ್ತ ಶ್ರೇಷ್ಠಾಳನ್ನು ಬಿಟ್ಟು ತಾಂಡವ್ ಭಾಗ್ಯ ಮನೆಗೆ ಬಂದಿದ್ದಾನೆ. ಇದೀಗ ಭಾಗ್ಯ ಇಬ್ಬರಲ್ಲಿ ಯಾರನ್ನು ಒಪ್ಪಿಕೊಳ್ತಾಳೆ? ಕುಸುಮಾ ಯಾರ ಪರ ವಹಿಸ್ತಾಳೆ ಅನ್ನೋ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಬಿಗ್ಬಾಸ್ನಿಂದ ಆಚೆ ಬಂದ್ರೂ ನಿಂತಿಲ್ಲ ಸ್ಪರ್ಧಿಗಳ ಕಿತ್ತಾಟ! – ಅಶ್ವಿನಿ Vs ಚೈತ್ರಾ ಕುಂದಾಪುರ ಪೋಸ್ಟ್ ವಾರ್!
ಭಾಗ್ಯ ಲಕ್ಷ್ಮೀ ಸೀರಿಯಲ್ ಕತೆ ರೋಚಕ ತಿರುವು ಪಡೆದುಕೊಂಡಿದೆ. ಆದಿ ಭಾಗ್ಯಳನ್ನು ಲವ್ ಮಾಡ್ತಿದ್ದಾನೆ. ಆಕೆಗೋಸ್ಕರ ಏನು ಮಾಡೋದಿಕ್ಕೂ ರೆಡಿ ಇದ್ದಾನೆ. ಇತ್ತ ಭಾಗ್ಯಗೂ ಆದಿ ಮೇಲೆ ಲವ್ ಆಗಿದೆ. ಇನ್ನೇನು ಆದಿ ಮುಂದೆ ಭಾಗ್ಯ ಪ್ರೀತಿ ಹೇಳಿಕೊಳ್ಬೇಕು ಅನ್ನುವಷ್ಟರಲ್ಲಿ ಭಾಗ್ಯ ಮನೆ ಮುಂದೆ ತಾಂಡವ್ ಎಂಟ್ರಿ ಕೊಟ್ಟಿದ್ದಾನೆ. ಭಾಗ್ಯ ನೀನೇ ಬೇಕು ಅಂತ ಆತ ಗೋಳಾಡುತ್ತಿದ್ದಾನೆ.
ಹೌದು, ಶ್ರೇಷ್ಠಾಳನ್ನ ಮದುವೆ ಆದ ತಾಂಡವ್ಗೆ ತನ್ನ ತಪ್ಪಿನ ಅರಿವಾಗಿದೆ. ಶ್ರೇಷ್ಠಾ ಕೆಟ್ಟವಳು ಅನ್ನೋದು ಕೂಡ ಆತನಿಗೆ ಗೊತ್ತಾಗಿದೆ. ಅವಳಿಂದಾಗಿ ನಾನು ಸಿಕ್ಕಾಪಟ್ಟೆ ತಪ್ಪುಗಳನ್ನು ಮಾಡಿದೆ. ಹೆಂಡ್ತಿ-ಮಕ್ಕಳು-ಅಪ್ಪ ಅಮ್ಮನನ್ನು ದೂರ ಮಾಡಿಕೊಂಡೆ, ಬೀದಿಗೆ ಬಿದ್ದೆ. ನನಗೆ ಎಲ್ಲಿಯೂ ಯಾರೂ ಕೂಡ ಗೌರವ ಕೊಡ್ತಿಲ್ಲ. ಭಾಗ್ಯ ನಾನು ಹೇಳಿದಂತೆ ಕೇಳುತ್ತಿದ್ದಳು, ಒಂದು ದಿನವೂ ಅವಳು ನನಗೆ ತಿರುಗಿ ಉತ್ತರ ಕೊಡುತ್ತಿರಲಿಲ್ಲ. ಆದರೆ ಶ್ರೇಷ್ಠ ಮಾತ್ರ ಯಾವ ವಿಷಯದಲ್ಲೂ ಭಾಗ್ಯಗೆ ಮ್ಯಾಚ್ ಆಗೋದಿಲ್ಲ ಎಂದು ತಾಂಡವ್ಗೆ ಗೊತ್ತಾಗಿದೆ. ಇದೀಗ ಶ್ರೇಷ್ಠಾಳನ್ನು ಬಿಟ್ಟು ಬಂದ ತಾಂಡವ್, ಸಂಪೂರ್ಣ ಬದಲಾಗಿದ್ದಾನೆ. ಭಾಗ್ಯಳ ಬಳಿ ಬಂದು ಕ್ಷಮಿಸು ಎಂದು ಕೇಳಿಕೊಂಡಿದ್ದಾನೆ.
ಭಾಗ್ಯ ಮನೆಗೆ ಬಂದ ತಾಂಡವ್, ನಾನು ತುಂಬ ತಪ್ಪು ಮಾಡಿದ್ದೀನಿ, ನಾನು ಬದಲಾಗಿದ್ದೀನಿ. ಕ್ಷಮಿಸು ಎಂದು ಭಾಗ್ಯ ಮುಂದೆ ಹೇಳುತ್ತಿದ್ದಾನೆ. ಆದ್ರೆ ಮಗಳು ತನ್ವಿ, ಭಾಗ್ಯ ತಾಯಿ ಸುನಂದಾ ಬಿಟ್ಟು ಬೇರೆ ಯಾರೂ ಕೂಡ ತಾಂಡವ್ನ ಕ್ಷಮಿಸಲು ರೆಡಿ ಇಲ್ಲ. ಇದೀಗ ಭಾಗ್ಯ ತಾನು ಯಾಕೆ ನಿಮ್ಮನ್ನು ಕ್ಷಮಿಸಬೇಕು? ಯಾವ ತಪ್ಪಿಗೆ ಕ್ಷಮಿಸಬೇಕು? ನನ್ನ ಬಿಟ್ಟು ಹೋದ ತಪ್ಪಿಗಾ? ಮಕ್ಕಳನ್ನು ಬಿಟ್ಟು ಹೋದ ತಪ್ಪಿಗಾ? ಜೇನುಗೂಡಿನ ಹಾಗೆ ಇದ್ದ ಕುಟುಂಬಕ್ಕೆ ಶ್ರೇಷ್ಠ ಎನ್ನೋ ಕಲ್ಲಿನಿಂದ ಹೊಡೆದು ಛಿದ್ರ ಮಾಡಿದ ತಪ್ಪಿಗಾ? ಮನೆ ಕಿತ್ತುಕೊಂಡ ತಪ್ಪಿಗಾ? ಎಲ್ಲದಕ್ಕೂ ಮೀರಿ ನನ್ನ ಜೀವನವನ್ನು ಹಾಳು ಮಾಡಿದ ತಪ್ಪಿಗಾ? ಎಲ್ಲದಕ್ಕೂ ಮಗ ಎಂದು ಹೇಳುತ್ತಿದ್ದ ಅಪ್ಪ-ಅಮ್ಮನನ್ನು ದೂರ ಮಾಡಿರೋ ತಪ್ಪಿಗಾ? ನಿಮ್ಮ ಯಾವ ತಪ್ಪನ್ನು ನಾನು ಕ್ಷಮಿಸಬೇಕು. ನಿಮ್ಮ-ನಮ್ಮ ಸಂಬಂಧ ಯಾವತ್ತಿಗೋ ಮುಗಿದು ಹೋಗಿದೆ ಎಂದು ಭಾಗ್ಯ, ಕಡ್ಡಿ ತುಂಡು ಮಾಡಿದಂತೆ ತಾಂಡವ್ಗೆ ಹೇಳಿದ್ದಾಳೆ. ಭಾಗ್ಯ ಮಾತನ್ನು ಕೇಳಿದ ತಾಂಡವ್ ಅಲ್ಲಿಂದ ಹೊರಡಲು ಸಿದ್ಧನಾಗಿದ್ದಾನೆ. ಆಗ ಮಗಳು ತನ್ವಿ ಆತನನ್ನು ತಡೆದಿದ್ದಾಳೆ.
ಹೌದು, ತಾಂಡವ್ ಭಾಗ್ಯ ಮನೆಯಿಂದ ಹೊರಡಲು ಸಿದ್ದವಾಗ್ತಿದ್ದಂತೆ ತನ್ವಿ ಆತನನ್ನು ತಡೆದು, ಅಮ್ಮ ನಿಮ್ಮನ್ನು ಕ್ಷಮಿಸಲ್ಲ ಅಂತ ನೀನು ಇಷ್ಟು ಬೇಗ ಸೋಲೊಪ್ಪಿಕೊಳ್ಳಬಹುದಾ? ಅಮ್ಮ ಬದಲಾಗೋ ತನಕ ನಿಮಗೆ ವೈಟ್ ಮಾಡ್ಬೇಕು ಅಂತ ಅನ್ನಿಸ್ತಾ ಇಲ್ವಾ? ಅಜ್ಜಿ ಹಠಮಾರಿ. ಆದ್ರೆ ಅಮ್ಮ ಹಾಗಲ್ಲ ಅಂತ ತನ್ವಿ ಹೇಳಿದ್ದಾಳೆ. ಇದ್ರಿಂದಾಗಿ ತಾಂಡವ್ ಭಾಗ್ಯ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಆದ್ರೀಗ ಮತ್ತೆ ಶ್ರೇಷ್ಠಾ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾಳೆ.
ತಾಂಡವ್ ಮನೆ ಹೊರಗೆ ಭಾಗ್ಯಗಾಗಿ ಕಾಯುತ್ತಿದ್ದ. ಆಗ ತನ್ವಿ ಅಲ್ಲಿಗೆ ಬಂದು ತಾಂಡವ್ಗೆ ಊಟ ಮಾಡಿಸಿದ್ದಾಳೆ. ಅಷ್ಟೊತ್ತಿಗೆ ಶ್ರೇಷ್ಠಾ ಭಾಗ್ಯ ಮನೆಗೆ ಬಂದಿದ್ದಾಳೆ. ಅಲ್ಲೂ ಕೂಡ ರಂಪಾಟ ಮಾಡಿದ್ದಾಳೆ. ಅನ್ನದ ತಟ್ಟೆಯನ್ನು ಎಸೆದು, ನನ್ನ ಗಂಡನನ್ನು ಭಿಕ್ಷಕು ಅಂತ ಅಂದ್ಕೊಂಡಿದ್ಯಾ? ಯಾರನ್ನ ಕೇಳಿ ಆತನನ್ನು ಹೊರಗೆ ಕೂರ್ಸಿದ್ಯಾ ಅಂತ ಕೇಳಿದ್ದಾಳೆ. ಆಗ ತಾಂಡವ್ ಶ್ರೇಷ್ಠಾ ಕಪಾಳಕ್ಕೆ ಬಾರಿಸಿದ್ದಾನೆ. ತಾಂಡವ್ ವರ್ತನೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಇದೀಗ ಭಾಗ್ಯ ತಾಂಡವ್ನ ಒಪ್ಪಿಕೊಳ್ತಾಳಾ? ಕುಸುಮಾ ಮೊದಲಿನಿಂದಲೂ ಭಾಗ್ಯ ಹಾಗೂ ಆದಿಗೆ ಸಪೋರ್ಟ್ ಮಾಡಿಕೊಂಡು ಬಂದಿದ್ಲು. ಇದೀಗ ತಾಂಡವ್ ಬದಲಾಗಿದ್ದಾನೆ. ಈಗ ಕುಸುಮಾ ಆಯ್ಕೆ ಮಗನಾ ಅಥವಾ ಫ್ರೆಂಡಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

