PAK VS IND ಪಂದ್ಯ ಇಡೀ ಜಗತ್ತಿಗೆ ಸ್ಫೂರ್ತಿ – ನೋ ಹ್ಯಾಂಡ್‌ಶೇಕ್‌ಗೆ ಬೀಳಲಿ ಬ್ರೇಕ್ : ಪಾಕ್ ಮಾಜಿ ಆಟಗಾರ

PAK VS IND ಪಂದ್ಯ ಇಡೀ  ಜಗತ್ತಿಗೆ ಸ್ಫೂರ್ತಿ – ನೋ ಹ್ಯಾಂಡ್‌ಶೇಕ್‌ಗೆ ಬೀಳಲಿ ಬ್ರೇಕ್ : ಪಾಕ್ ಮಾಜಿ ಆಟಗಾರ

 ಹಲವು ದಿನಗಳ ಹೈಡ್ರಾಮಕ್ಕೆ ಬ್ರೇಕ್‌ ಬೀಳುವ ಸಮಯ ಬಂದಿದ್ದು, ಭಾರತ-ಪಾಕ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ‘ನೋ ಹ್ಯಾಂಡ್‌ ಶೇಕ್‌’ ನಿಯಮದ ಬಗ್ಗೆ ಚರ್ಚೆ ಶರುವಾಗಿದೆ.ಕಳೆದ ವರ್ಷ ನಡೆದಿದ್ದ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಕಿಸ್ತಾನಿ ಆಟಗಾರರು, ಸಹಾಯಕ ಸಿಬ್ಬಂದಿ ಜತೆ ಭಾರತ ಕ್ರಿಕೆಟ್‌ ತಂಡ ‘ನೋ ಹ್ಯಾಂಡ್‌ ಶೇಕ್‌’ ನಿಯಮ ಪಾಲಿಸಿತ್ತು. ಪ್ರಶಸ್ತಿ ಗೆದ್ದ ಬಳಿಕ ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕ್ ಗೃಹ ಸಚಿವ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಹಿಂದೇಟು ಹಾಕಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. ದುಬೈನ ಎಸಿಸಿ ಮುಖ್ಯ ಕಚೇರಿಯಲ್ಲಿದ್ದ ಏಷ್ಯಾಕಪ್‌ ಟ್ರೋಫಿಯನ್ನು ಅಬುಧಾಬಿಯ ಗುಪ್ತ ಸ್ಥಳವೊಂದರಲ್ಲಿ ಅಡಗಿಸಿಟ್ಟಿದಾರೆ. ಈಗಲೂ ಭಾರತಕ್ಕೆ ಟ್ರೋಫಿ ಸಿಗಲಿಲ್ಲ.

ಇದನ್ನೂ ಓದಿ:  ರೂಂನಲ್ಲೇ ಇನ್‌ಫ್ಲುಯೆನ್ಸರ್ ರೇಶ್ಮಾ ಸೂ*ಸೈಡ್‌ – ಚಿನ್ನು ಪಪ್ಪುಗೆ ನಿಜಕ್ಕೂ ಆಗಿದ್ದೇನು?

ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಹಫೀಜ್, ನಿಜವಾದ ಕ್ರೀಡಾ ಮನೋಭಾವವನ್ನು ಮರಳಿ ತರಬೇಕೆಂದು ಒತ್ತಾಯಿಸಿದ್ದಾರೆ. ವಿಶ್ವಕಪ್‌ನಲ್ಲೂ ಅದೇ ರೀತಿ ನಡೆದರೆ, ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ತಾನು ಬಯಸುವುದಿಲ್ಲ ಎಂದು ಹಫೀಜ್ ಹೇಳಿದ್ದಾರೆ.”ಭಾರತ vs ಪಾಕಿಸ್ತಾನ ಪಂದ್ಯಗಳ ಪರವಾಗಿರುವುದಾಗಿ ಮತ್ತು ಅದು ನಿಯಮಿತವಾಗಿ ನಡೆಯುವುದನ್ನು ನೋಡಲು ಬಯಸುತ್ತೇನೆ” ಎಂದು ಹೇಳಿದರು.

“ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಮಾತು ಬಂದಾಗಲೆಲ್ಲಾ, ನಾನು ಯಾವಾಗಲೂ ಅದರ ಪರವಾಗಿರುತ್ತೇನೆ. ಏಕೆಂದರೆ ಈ ಪಂದ್ಯ ಪೈಪೋಟಿ, ಮತ್ತು ಇಡೀ ಜಗತ್ತಿಗೆ ಸ್ಫೂರ್ತಿ ನೀಡುತ್ತದೆ. ದೇವರು ಬಯಸಿದರೆ ಪಂದ್ಯ ನಡೆಯಲಿ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಮತ್ತು ಇದು ಕೇವಲ ಈ ಒಂದು ಪಂದ್ಯದ ಬಗ್ಗೆ ಅಲ್ಲ. ನಾನು ಈ ಪಂದ್ಯದಲ್ಲಿ ಮಾತ್ರ ಆಸಕ್ತಿ ಹೊಂದಿಲ್ಲ. ಭಾರತ-ಪಾಕಿಸ್ತಾನ ಪಂದ್ಯಗಳು ನಿಯಮಿತ ಆಧಾರದ ಮೇಲೆ ನಡೆಯಬೇಕು, ರಾಜಕೀಯವನ್ನು ಅದರಿಂದ ಶಾಶ್ವತವಾಗಿ ದೂರವಿಡಬೇಕು ಎಂಬುದು ನನ್ನ ಬಯಕೆ” ಎಂದರು.

Kishor KV

Leave a Reply

Your email address will not be published. Required fields are marked *