ಬಿಗ್‌ಬಾಸ್‌ನಿಂದ ಆಚೆ ಬಂದ್ರೂ ನಿಂತಿಲ್ಲ ಸ್ಪರ್ಧಿಗಳ ಕಿತ್ತಾಟ! – ಅಶ್ವಿನಿ Vs ಚೈತ್ರಾ ಕುಂದಾಪುರ ಪೋಸ್ಟ್ ವಾರ್!

ಬಿಗ್‌ಬಾಸ್ ಕನ್ನಡ ಸೀಸನ್ 12 ಮುಗಿದು ತಿಂಗಳೇ ಕಳೆದಿದೆ. ಆದ್ರೂ ಕೂಡ ಸ್ಪರ್ಧಿಗಳ ಹವಾ ನಿಂತಿಲ್ಲ. ಒಂದಾದ ಮೇಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದ್ರೀಗ ಇಬ್ಬರು ಸ್ಪರ್ಧಿಗಳು ಮಾತ್ರ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ದೊಡ್ಮನೆಯಿಂದ ಆಚೆ ಬಂದ್ರೂ ಇಬ್ಬರ ಕಿತ್ತಾಟ ನಿಂತಿಲ್ಲ.
ಬಿಗ್‌ಬಾಸ್ ಮನೆ ಅಂದ್ಮೇಲೆ ಸ್ಪರ್ಧಿಗಳ ಮಧ್ಯೆ ಜಗಳ ಕಾಮನ್. ಒಂದಲ್ಲ ಒಂದು ವಿಚಾರಕ್ಕೆ ಜಗಳ ಮಾಡ್ತಾರೆ, ದೊಡ್ಮನೆಯಿಂದ ಆಚೆ ಬಂದ್ಮೇಲೆ ಮುನಿಸು ಮರೆತು ಸ್ನೇಹಿತರಾಗಿ ಇರ್ತಾರೆ. ಆದ್ರೀಗ ಇಬ್ಬರು ಸ್ಪರ್ಧಿಗಳು ಬಿಗ್‌ಬಾಸ್ ಗುಂಗಿನಿಂದ ಹೊರ ಬಂದಿಲ್ಲ. ಸ್ಪರ್ಧಿಗಳು ಮಾತ್ರ ಅದೇ ಗುದ್ದಾಟ ಮುಂದುವರೆಸಿದ್ದಾರೆ. ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ vs ಅಶ್ವಿನಿ ಗೌಡ ಪೋಸ್ಟ್ ವಾರ್ ಜೋರಾಗಿದೆ.
ಬಿಗ್ ಬಾಸ್ ಸೀಸನ್ 12ರ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬಂದಿದ್ರು. ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ತಮ್ಮ ಕೈ ಕಾಲುಗಳ ಮೇಲೆ ಪರಚಿರುವ ಗಾಯದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ.
ಅಶ್ವಿನಿ ಗೌಡ ಕೈಗೆ ಪರಚಿರುವ ಗಾಯದ ಫೋಟೋವನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ಇದು ಚೈತ್ರಾ ಕುಂದಾಪುರ ಪರಚಿದ ಗಾಯಗಳು ಅಂತ ಜನರು ಕಮೆಂಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇದ್ರಿಂದಾಗಿ ಚೈತ್ರಾ ಕುಂದಾಪುರ ಕೆರಳಿ ಕೆಂಡವಾಗಿದ್ದಾರೆ. ಅಶ್ವಿನಿ ಪೋಸ್ಟ್ಗೆ ಚೈತ್ರಾ ಕುಂದಾಪುರ ಕೂಡ ತಿರುಗೇಟು ನೀಡಿದ್ದಾರೆ. ನಂಗೂ ದೇಹದ ಮೇಲೆ ಪರಚಿದ ಕಲೆಗಳಿವೆ. ಆದ್ರೆ ಕ್ಷಮಿಸಿ ನನ್ನ ಬಳಿ ಯಾವುದೇ ಪಿಆರ್ ತಂಡ ಇಲ್ಲ ಎಂದು ಕೌಂಟರ್ ಪೋಸ್ಟ್ ಮಾಡಿದ್ದಾರೆ.
ಚೈತ್ರಾ ಕುಂದಾಪುರ ಪೋಸ್ಟ್ ಮೇಲೆ ಪೋಸ್ಟ್ ಶೇರ್ ಮಾಡಿ ಕೌಂಟರ್ ಕೊಟ್ಟಿದ್ದು, ಅಶ್ವಿನಿ ಗೌಡ ಫ್ಯಾನ್ಸ್ ಗರಂ ಆಗಿದ್ದಾರೆ. ಚೈತ್ರಾ ವಿರುದ್ಧ ನಾನಾ ಆಕ್ರೋಶದ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.

ನೋಡಿರಿ

