ರೂಂನಲ್ಲೇ ಇನ್ಫ್ಲುಯೆನ್ಸರ್ ರೇಶ್ಮಾ ಸೂ*ಸೈಡ್ – ಚಿನ್ನು ಪಪ್ಪುಗೆ ನಿಜಕ್ಕೂ ಆಗಿದ್ದೇನು?

ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ‘ಚಿನ್ನು ಪಪ್ಪು’ ಎಂದೇ ಖ್ಯಾತರಾಗಿದ್ದ ಕೆ. ರೇಶ್ಮಾ (24) ಸೂಸೈಡ್ ಮಾಡಿಕೊಂಡಿದ್ದಾರೆ. ಬಾಡಿಗೆ ಅಪಾರ್ಟ್ಮೆಂಟ್ನಲ್ಲಿದ್ದ ಅವರ ಕೊಠಡಿಯಲ್ಲಿ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದ್ದು, ಸ್ಥಳೀಯರು ಗಮನಿಸಿದ ನಂತ್ರ ಘಟನೆ ಬೆಳಕಿಗೆ ಬಂದಿದೆ.
ಕೆ. ರೇಶ್ಮಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ‘ಚಿನ್ನು ಪಪ್ಪು’ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ತುಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಡಿಯೊಗಳನ್ನು ನಿರ್ಮಿಸುತ್ತಿದ್ದ ಅವರು, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು. ವಿಶೇಷವಾಗಿ ಸ್ಥಳೀಯ ಪಾಕಪದ್ಧತಿ, ದಿನನಿತ್ಯದ ಜೀವನಶೈಲಿ ಹಾಗೂ ಮನರಂಜನಾ ವೀಡಿಯೊಗಳ ಮೂಲಕ ಅವರು ಜನಪ್ರಿಯತೆ ಗಳಿಸಿದ್ದರು. ಅವರ ಹಲವು ವೀಡಿಯೊಗಳಿಗೆ ಲಕ್ಷಾಂತರ ವೀಕ್ಷಣೆಗಳು ದೊರೆತಿದ್ದವು.
ಪೊಲೀಸ್ ಮೂಲಗಳ ಪ್ರಕಾರ, ರೇಶ್ಮಾ ಅವರು ಸುಮಾರು ಒಂದು ತಿಂಗಳ ಹಿಂದೆ ವಿಚ್ಛೇದನ ಪಡೆದಿದ್ದರು ಎನ್ನಲಾಗಿದೆ. ಅವರಿಗೆ ನಾಲ್ಕು ವರ್ಷದ ಮಗನಿದ್ದು, ಪ್ರಸ್ತುತ ಆತ ಪೋಷಕರ ಜೊತೆ ವಾಸಿಸುತ್ತಿದ್ದಾನೆ. ವಿಚ್ಛೇದನದ ನಂತರ ಅವರು ಮಾನಸಿಕ ಒತ್ತಡದಲ್ಲಿದ್ದರೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ವೈಯಕ್ತಿಕ ಸಮಸ್ಯೆಗಳು ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಬಗ್ಗೆ ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಯುತ್ತಿದೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವು ಸಂಭವಿಸಿದ ಹಿನ್ನೆಲೆ, ಪರಿಸ್ಥಿತಿ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ವಿವರವಾದ ತನಿಖೆ ಆರಂಭಿಸಲಾಗಿದೆ. ಮೃತ ರೇಶ್ಮಾ ಅವರು ಗಂಗಾಧರನ್ ಮತ್ತು ಶೈಲಜಾ ಅವರ ಪುತ್ರಿಯಾಗಿದ್ದು, ಮೂಲತಃ ಅಡೂರು ನಿವಾಸಿಯಾಗಿದ್ದರು. ಕೆಲಸದ ನಿಮಿತ್ತ ಅವರು ಕಾಸರಗೋಡಿನ ಬಳಿಯ ಉಳಿಯತ್ತಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ನೋಡಿರಿ

