ದುಡ್ಡಿಗಾಗಿ ಮೂರೂ ಬಿಟ್ಟ PAK – ಕಾಸು ಕೊಟ್ರೆ ಇಂಡೋ-ಪಾಕ್ ಕ್ರಿಕೆಟ್
4 ಕಂಡೀಷನ್ಸ್ ಒಪ್ಪುತ್ತಾ ICC?

ದುಡ್ಡಿಗಾಗಿ ಮೂರೂ ಬಿಟ್ಟ PAK – ಕಾಸು ಕೊಟ್ರೆ ಇಂಡೋ-ಪಾಕ್ ಕ್ರಿಕೆಟ್4 ಕಂಡೀಷನ್ಸ್ ಒಪ್ಪುತ್ತಾ ICC?

ಟಿ-20 ವಿಶ್ವಕಪ್ ಸ್ಟಾರ್ಟ್ ಆದ್ರೂ ಪಾಕಿಸ್ತಾನದ ನೌಟಂಕಿ ನಾಟಕ ಮಾತ್ರ ನಿಂತಿಲ್ಲ. ದಿನಕ್ಕೊಂದು ಬಣ್ಣ ಬದಲಾಯಿಸ್ತಿದ್ದಾರೆ. ಇಷ್ಟು ದಿನ ಭಾರತದ ವಿರುದ್ಧ ಮ್ಯಾಚ್ ಆಡಲ್ಲ. ಬಾಯ್ಕಾಟ್ ಅಂತಾ ಬಿಲ್ಡಪ್ ಕೊಟ್ಟಿದ್ರು. ಬಟ್ ಈಗ ಆಡ್ತೇವೆ ಬಟ್ ಕಂಡೀಷನ್ಸ್ ಅಪ್ಲೈ ಅಂತಿದ್ದಾರೆ.

ಇದನ್ನೂ ಓದಿ : ಅಭಿಷೇಕ್-ಕಿಶನ್ ನಂ.1 ರೇಸ್ – T-20 ವಿಶ್ವಕಪ್ HERO ಯಾರು?

ಐಸಿಸಿ ಟೂರ್ನಿಗಳು ಅಂತಾ ಬಂದಾಗ ಎಲ್ಲಾ ಪಂದ್ಯಗಳು ಒಂದು ಲೆಕ್ಕ ಆದ್ರೆ ಇಂಡೋ-ಪಾಕ್ ಕ್ರಿಕೆಟ್ ಮತ್ತೊಂದು ಲೆಕ್ಕ. ಅದು ಅಭಿಮಾನಿಗಳ ಕ್ರೇಜ್ ಇರ್ಬೋದು ಅಥವಾ ಮೈದಾನದೊಳಗಿನ ಬಿಸಿ ಇರ್ಬೋದು ಅಥವಾ ಫೈನಾನ್ಶಿಯಲ್ ಟರ್ನ್​ಓವರ್​ ಇರ್ಬೋದು. ಎಲ್ಲದ್ರಲ್ಲೂ ನಂಬರ್ 1. ಸೋ ಇದೇ ದುಡ್ಡಿನಿಂದ್ಲೇ ಐಸಿಸಿ ತನ್ನ ಖರ್ಚುವೆಚ್ಚಗಳನ್ನೆಲ್ಲಾ ಸರಿದೂಗಿಸುತ್ತೆ. ಹಾಗೇ ಟಿ-20 ವಿಶ್ವಕಪ್​ನಲ್ಲೂ 5000 ಕೋಟಿ ವಹಿವಾಟಿನ ಲೆಕ್ಕ ಹಾಕಿದ್ರು. ಬಟ್ ಈಗ ಪಾಕಿಸ್ತಾನ ಪಂದ್ಯ ಆಡಲ್ಲ ಅಂತಿರೋದಕ್ಕೆ ಐಸಿಸಿ ತಲೆ ಕೆಡಿಸಿಕೊಂಡಿದ್ದು ಪಿಸಿಬಿ ಮನವೊಲಿಸಿದೆ.

ಪಿಸಿಬಿ & ಬಿಸಿಬಿ ಜೊತೆ ಸಭೆ ನಡೆಸಿದ ಐಸಿಸಿ!

ಫೆಬ್ರವರಿ 15ರಂದು ಶ್ರೀಲಂಕಾದ ಕೊಲೊಂಬೊ ಮೈದಾನದಲ್ಲಿ ಭಾರತ-ಪಾಕ್ ಮ್ಯಾಚ್ ಫಿಕ್ಸ್ ಆಗಿದೆ. ಬಟ್ ಪಾಕಿಸ್ತಾನ ಪಂದ್ಯದಿಂದ ಹಿಂದೆ ಸರಿಯೋದಾಗಿ ಹೇಳಿದೆ. ಆದ್ರೆ ಈ ಪಂದ್ಯ ರದ್ದಾದ್ರೆ ಸಾಕಷ್ಟು ನಷ್ಟ ಆಗೋದ್ರಿಂದ  ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾನುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಜೊತೆ ಸಭೆ ನಡೆಸಿದೆ. ಭಾರತದ ಜೊತೆ ಪಂದ್ಯ ಆಡುವಂತೆ ಒತ್ತಾಯಿಸಿದೆ. ಸುಮಾರು ನಾಲ್ಕು ಗಂಟೆಗಳ ಸಭೆಯ ನಂತರ ಯಾವುದೇ ಘೋಷಣೆ ಹೊರ ಬಿದ್ದಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆದು ನಂತರ ಘೋಷಣೆ ಮಾಡ್ತೇವೆ ಎಂದಿದ್ದಾರೆ. ಹಾಗೇ ಸಭೆಯಲ್ಲಿ ಐಸಿಸಿ ಮುಂದೆ ಕಂಡೀಷನ್ಸ್ ಕೂಡ ಹಾಕಿದ್ದಾರೆ. ತಮ್ಮ ಷರತ್ತುಗಳನ್ನ ಒಪ್ಪಿದ್ರೆ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಂದ್ಯ ಆಡೋಕೆ ರೆಡಿ ಅಂದಿದ್ದಾರೆ. ಅಷ್ಟಕ್ಕೂ ಪಾಕಿಸ್ತಾನ ಇಟ್ಟಿರೋ ಡಿಮ್ಯಾಂಡ್ಸ್ ಏನು ಅನ್ನೋದನ್ನ ಹೇಳ್ತೇನೆ ನೋಡಿ.

ಪಾಕಿಸ್ತಾನದ ಮೂರು ಷರತ್ತುಗಳು!

  1. ವಾರ್ಷಿಕ ಐಸಿಸಿ ಆದಾಯದಲ್ಲಿ ಹೆಚ್ಚಿದ ಪಾಲು
  2. ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಪುನಾರಂಭ
  3. ಹ್ಯಾಂಡ್‌ ಶೇಕ್ ಪ್ರೋಟೋಕಾಲ್ ಜಾರಿಗೊಳಿಸಬೇಕು

ಸೋ ಈ ಮೂರು ಬೇಡಿಕೆಗಳನ್ನ ಐಸಿಸಿ ಮುಂದೆ ಪಿಸಿಬಿ ಇಟ್ಟಿದೆ. ಒಂದ್ಕಡೆ ಪಂದ್ಯ ನಡೀದಿದ್ರೆ ರೆವೆನ್ಯೂ ಬರಲ್ಲ ಅಂತಾ ಐಸಿಸಿ ತಲೆಬಿಸಿ ಮಾಡ್ಕೊಂಡಿದೆ. ಮತ್ತೊಂದ್ಕಡೆ ಪಿಸಿಬಿ ಸಿಕ್ಕಿದ್ದೇ ಚಾನ್ಸ್ ಅಂತಾ ನವರಂಗಿ ಆಟ ಶುರು ಮಾಡಿದೆ. ಐಸಿಸಿ ಮುಂದೆ ಬೇಡಿಕೆಗಳನ್ನ ಇಟ್ಟು ಬೇಳೆ ಬೇಯಿಸಿಕೊಳ್ತಿದ್ದಾರೆ. ಇದೂ ಸಾಲ್ದು ಅಂತಾ ಬಾಂಗ್ಲಾದೇಶಕ್ಕೂ ಪರಿಹಾರ ಕೊಡಿ ಅಂತಾ ತಗಾದೆ ತೆಗೆದಿದೆ. ಭಾರತದಲ್ಲಿ ಪಂದ್ಯ ಆಡಲ್ಲ ಅಂತಾ ಕೊನೆಗೆ ಟೂರ್ನಿಯಿಂದಲೇ ಹೊರ ಬಿದ್ದಿರೋ ಬಾಂಗ್ಲಾದೇಶದ ಪರವಾಗಿ ಈಗ ಪಾಕಿಸ್ತಾನ ಕ್ಯಾತೆ ತೆಗೆದಿದೆ. ಅವ್ರ ಪರವಾಗಿಯೂ 3 ಬೇಡಿಕೆ ಇಟ್ಟಿದ್ದಾರೆ.

ಬಾಂಗ್ಲಾ ಪರವೂ ಡಿಮ್ಯಾಂಡ್

  1. ವಿಶ್ವಕಪ್ ​ನಿಂದ ಹೊರಬಿದ್ದ ಬಾಂಗ್ಲಾದೇಶಕ್ಕೆ ಹೆಚ್ಚಿನ ಆರ್ಥಿಕ ಪರಿಹಾರ
  2. ಆರಂಭಿಕ ಹಂತದಲ್ಲೇ ಹೊರಬಿದ್ದರೂ ಭಾಗವಹಿಸುವ ಶುಲ್ಕ ನೀಡುವುದು
  3. ಭವಿಷ್ಯದ ಐಸಿಸಿ ಈವೆಂಟ್ ಆಯೋಜನೆ ಹಕ್ಕುಗಳನ್ನು ಬಾಂಗ್ಲಾಗೆ ನೀಡುವುದು

Shantha Kumari

Leave a Reply

Your email address will not be published. Required fields are marked *