ಅಬಕಾರಿ ಇಲಾಖೆ ಹಗರಣ ಕೇಸ್!‌ – ರಾಜೀನಾಮೆ ಒತ್ತಾಯದ ಬೆನ್ನಲ್ಲೇ ದೈವದ ಮೊರೆ ಹೋದ ಸಚಿವ ತಿಮ್ಮಾಪುರ!

ಅಬಕಾರಿ ಇಲಾಖೆ ಹಗರಣ ಕೇಸ್!‌ – ರಾಜೀನಾಮೆ ಒತ್ತಾಯದ ಬೆನ್ನಲ್ಲೇ ದೈವದ ಮೊರೆ ಹೋದ ಸಚಿವ ತಿಮ್ಮಾಪುರ!

ಅಬಕಾರಿ ಇಲಾಖೆಯಲ್ಲಿ6000 ಕೋಟಿ ರೂ. ಕಿಕ್‌ ಬ್ಯಾಕ್‌ ಆರೋಪ ಕೇಳಿ ಬಂದ ಹಿನ್ನೆಲೆ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು ಹಿಡಿದಿದೆ. ವಿಧಾನಸಭೆ ವಿಶೇಷ ಅಧಿವೇಶನದಲ್ಲೂ ಈ ವಿಚಾರ ಭಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ತಿಮ್ಮಾಪುರ ಅವರು ದೈವದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಬಾಯ್‌ಫ್ರೆಂಡ್‌ಗೆ ಅಮ್ಮ, ದೊಡ್ಡಮ್ಮನ ಖಾಸಗಿ ಫೋಟೋ ಕಳುಹಿಸಿದ್ಲು ಪಾಪಿ ಮಗಳು!

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ಸಚಿವ ಆರ್‌.ಬಿ. ತಿಮ್ಮಾಪುರ ದೈವದ ಮೊರೆ ಹೋಗಿದ್ದಾರೆ. ಇಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಸಮೀಪದ ಬಿಳಿಯಾರು ಧೂಮಾವತಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಇಂದು ಧೂಮಾವತಿ ಸನ್ನಿಧಾನದಲ್ಲಿ ನೇಮೋತ್ಸವ ನಡೆಯಲಿದೆ.

ಆರ್‌.ಬಿ. ತಿಮ್ಮಾಪುರ ಅವರು ಇಂದು ಧೂಮಾವತಿ ಸನ್ನಿಧಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಿಮ್ಮಾಪುರ ಅವರು, ಆಪ್ತ ಜೀವನಶೆಟ್ಟಿ ಆಹ್ವಾನದ ಮೇರೆಗೆ ಸಚಿವ ತಿಮ್ಮಾಪುರ ಅವರು ಧೂಮಾವತಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಸನ್ನಿಧಿಯ ನೂತನ ಗೋಪುರ ಮತ್ತು ಹೊಸ ಕಟ್ಟಡವನ್ನೂ ಅವರು ಉದ್ಘಾಟಿಸಿದ್ದಾರೆ.

ಇನ್ನು ದೈವಸ್ಥಾನಕ್ಕೆ ಭೇಟಿ ಬಳಿಕ ಮಾತನಾಡಿದ ಸಚಿವರು, ಜೀವನ್ ಶೆಟ್ಟಿ ಅವರು ಇಲ್ಲಿಗೆ ಬರುವಂತೆ ಕರೆದಿದ್ದಕ್ಕೆ ನಾನು ಬಂದಿದ್ದೇನೆ. ಕುಟುಂಬದ ಜೊತೆಗೆ ಬಂದು ದೈವದ ಆಶೀರ್ವಾದ ಪಡೆದಿದ್ದು, ದೈವಸ್ಥಾನದ ಕಟ್ಟಡಕ್ಕೆ ಸಹಕಾರ ಮಾಡಿದವರನ್ನು ಸನ್ಮಾನಿಸಿದ್ದೇನೆ. ಇಂತಹ ದೈವದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪಗಳೆಲ್ಲ ಸುಳ್ಳು. ಅಧಿವೇಶನದಲ್ಲಿ ಎಲ್ಲಾ ವಿಚಾರವನ್ನು ನಾನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *