ಪಕ್ಕದ ಮನೆಯ ವ್ಯಕ್ತಿಯ ಬೆದರಿಕೆಗೆ ಹೆದರಿ ತಾಯಿ-ಮಗಳು ಸೂ*ಸೈಡ್

ಪಕ್ಕದ ಮನೆಯ ವ್ಯಕ್ತಿಯ ಬೆದರಿಕೆಗೆ ಹೆದರಿ ತಾಯಿ-ಮಗಳು ಸೂ*ಸೈಡ್

ಪಕ್ಕದ ಮನೆಯವರ ಕಿರುಕುಳ ಹಾಗೂ ಬೆದರಿಕೆಗೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ   ಜಿಲ್ಲೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ. ಶಕುಂತಲಾದೇವಿ (46), ಪುತ್ರಿ ಪ್ರಿಯಾಂಕಾ (19) ಮೃತರು. ಶಕುಂತಲಾದೇವಿ ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ತಿದದರು. ಇತ್ತ ಪ್ರಿಯಾಂಕಾ ಕೂಡ ಗಂಡನ ಮನೆ ಸೇರುವ ತವಕದಲ್ಲಿದ್ದಳು. ಆದರೆ, ಇವರ ಆತ್ಮಹತ್ಯೆಯಿಂದ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.

ಪಕ್ಕದ ಮನೆಯ ವ್ಯಕ್ತಿಯ ಬೆದರಿಕೆಗೆ ಹೆದರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಾಯ್‌ಫ್ರೆಂಡ್‌ಗೆ ಅಮ್ಮ, ದೊಡ್ಡಮ್ಮನ ಖಾಸಗಿ ಫೋಟೋ ಕಳುಹಿಸಿದ್ಲು ಪಾಪಿ ಮಗಳು!

ಪಕ್ಕದ ಮನೆಯ ನಿವಾಸಿ 35 ವರ್ಷದ ವಿವಾಹಿತ ಮುತ್ತುರಾಜು ಎಂಬ ವ್ಯಕ್ತಿ, ನನ್ನ ಮಗಳಾದ ಪ್ರಿಯಾಳನ್ನು ಪರಿಚಯ ಮಾಡಿಕೊಂಡು, ನಿನ್ನನ್ನು ಮದುವೆ ಮಾಡಿಕೊಳ್ಳುವೆ ಎಂದು ಪುಸಲಾಯಿಸಿದ್ದಾನೆ. ಇದಕ್ಕೆ ಯುವತಿ ತಂದೆ-ತಾಯಿ ಒಪ್ಪದೆ, ನಿನಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಮತ್ತು ಮಕ್ಕಳಿದ್ದಾರೆ.‌ ಮತ್ತೆ ಮದುವೆ ಸಾಧ್ಯವಿಲ್ಲ ಎಂದು ಮುತ್ತುರಾಜನಿಗೆ ಬುದ್ದಿ ಹೇಳಿದ್ದಾರೆ. ನಂತರ ಮಗಳಾದ ಪ್ರಿಯಾಳಿಗೆ ಬೇರೆಯ ವರನಿಗೆ ಮದುವೆ ಮಾಡೋಣ ಎಂದು ಸಿದ್ದತೆ ಮಾಡಿಕೊಳ್ಳುತ್ತಿರುವ ವಿಷಯ ತಿಳಿದ ಮುತ್ತುರಾಜು, ಯುವತಿಗೆ ತಾಯಿ ಶಕುಂತಲಾ ಅವರಿಗೆ ಕರೆ ಮಾಡಿ, ಪ್ರಿಯಾಳನ್ನು ಬೇರೆ ಕಡೆಗೆ ಮದುವೆ ಮಾಡಿದರೇ ನಿಮ್ಮನ್ನು ಕೊಲೆ ಮಾಡುವೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇದರಿಂದ ಮನನೊಂದ ಶಕುಂತಲಾ ಮತ್ತು ಪ್ರಿಯಾ ಇಬ್ಬರು ಭಾನುವಾರ ಬೆಳಗ್ಗೆ ನೇಣು ಬಿಗಿದುಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಂದೆ ಎಂ.ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kishor KV

Leave a Reply

Your email address will not be published. Required fields are marked *