ಕ್ವಾರ್ಟರ್ ಫೈನಲ್ನಲ್ಲಿ ಗೆದ್ದು ಸೆಮಿ ಫೈನಲ್ಗೆ ಕಾಲಿಟ್ಟ ಕರ್ನಾಟಕ

ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಬರೋಬ್ಬರಿ 377 ರನ್ಗಳಿಸಿ ಆಲೌಟ್ ಆಯಿತು. ಈ ರನ್ ಬೆನ್ನಟ್ಟಿದ ಕರ್ನಾಟಕ ಟೀಂ ಕ್ವಾಂಟರ್ ಫೈನಲ್ನಲ್ಲಿ ಗೆದ್ದು ಸೆಮಿ ಫೈನಲ್ಗೆ ಕಾಲಿಟ್ಟಿದೆ. ಕೆಎಲ್ ರಾಹುಲ್ ಹಾಗೂ ಸ್ಮರಣ್ ರವಿಚಂದ್ರನ್ ಭರ್ಜರಿ ಬ್ಯಾಟಿಂಗ್ ಕರ್ನಾಟಕ ಗೆಲುವಿನ ದಡ ಸೇರಿಸಿದ್ರು.
ಇದನ್ನೂ ಓದಿ: ಯಶಸ್ವೀ ಪ್ರದರ್ಶನ ಕಂಡ ಬಾರ್ಡರ್ -2 ಸಿನಿಮಾ – ಬಾಲಿವುಡ್ನಲ್ಲಿ 309 ಕೋಟಿ ರೂಪಾಯಿ ಗಳಿಕೆ
ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈನ ನಡುವಿನ ರಣಜಿ ಟ್ರೋಫಿ 2025-26 ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಗೆಲುವಿಗೆ ಮುಂಬೈ ನೀಡಿದ 326 ರನ್ಗಳ ಗುರಿಯನ್ನು ಕರ್ನಾಟಕ ತಂಡ 6 ವಿಕೆಟ್ಗಳ ನಷ್ಟಕ್ಕೆ ನಾಲ್ಕನೇ ದಿನದಾಟದ ಎರಡನೇ ಸೆಷನ್ನಲ್ಲಿ ಬೆನ್ನಟ್ಟುವ ಮೂಲಕ ಜಯದ ನಗೆ ಬೀರಿತು. ಕರ್ನಾಟಕ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅನುಭವಿ ಬ್ಯಾಟ್ಸ್ಮನ್ ಕೆಎಲ್ ರಾಹುಲ್ 130 ರನ್ಗಳ ಇನ್ನಿಂಗ್ಸ್ ಆಡಿದರು. ರಾಹುಲ್ಗೆ ಸಾಥ್ ನೀಡಿದ ಆರ್. ಸ್ಮರಣ್ ಕೂಡ ಅಜೇಯ 83 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ನೋಡಿರಿ

