ಯಶಸ್ವೀ ಪ್ರದರ್ಶನ ಕಂಡ ಬಾರ್ಡರ್ -2 ಸಿನಿಮಾ – ಬಾಲಿವುಡ್‌ನಲ್ಲಿ 309 ಕೋಟಿ ರೂಪಾಯಿ ಗಳಿಕೆ

ಯಶಸ್ವೀ ಪ್ರದರ್ಶನ ಕಂಡ ಬಾರ್ಡರ್ -2 ಸಿನಿಮಾ – ಬಾಲಿವುಡ್‌ನಲ್ಲಿ 309 ಕೋಟಿ ರೂಪಾಯಿ ಗಳಿಕೆ

ಬಾಲಿವುಡ್‌ನ ಒಂದು ಕಾಲದ ಸೂಪರ್ ಸ್ಟಾರ್ ಸನ್ನಿಡಿಯೋಲ್, ಈಗ ಮತ್ತೊಮ್ಮೆ ಖದರ್ ತೋರಿದ್ದಾರೆ. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾ ನೀಡಿದ ಸನ್ನಿ ಡಿಯೋಲ್ ಈಗ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ. ಸನ್ನಿ ನಟಿಸಿರುವ ಬಾರ್ಡರ್ -2 ಸಿನಿಮಾ ಬರೋಬ್ಬರಿ 309 ಕೋಟಿ ರೂಪಾಯಿ ಗಳಿಕೆ ಕಂಡಿದ್ದು, ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ:ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ರಕ್ಕಸಪುರದೋಳ್ – ರಾಜ್ ಬಿ ಶೆಟ್ಟಿ VS ಅನಿರುದ್ಧ್ ಭಟ್ ಕಾಂಬಿನೇಷನ್ ಸೂಪರೋ ಸೂಪರ್

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸ್ಟಾರ್ ಸನ್ನಿ ಡಿಯೋಲ್ ಯಾರಂತಾ ಯಂಗ್‌ಸ್ಟರ್ಸ್‌ಗೆ ಗೊತ್ತಿರಲು ಸಾಧ್ಯವಿಲ್ಲ. 90ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ನಟ ಸನ್ನಿಡಿಯೋಲ್. ಇದೀಗ ಮತ್ತೆ ಸನ್ನಿಡಿಯೋಲ್ ತನ್ನ ಖದರ್ ತೋರಿಸುತ್ತಿದ್ದಾರೆ. ಹೊಸ ವರ್ಷದಲ್ಲಿ ಬಾಲಿವುಡ್ ಭಾಗ್ಯದ ಬಾಗಿಲು ತೆರೆದ ಬಾರ್ಡರ್ 2 ಸಿನಿಮಾ ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ದೇಶಭಕ್ತಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಸದ್ಯ ಬಾಕ್ಸಾಫೀಸ್‌ನಲ್ಲಿ 17 ದಿನಗಳಿಂದ ಯಶಸ್ವಿ ಪ್ರದರ್ಶನವನ್ನು ಪೂರೈಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳ ಪ್ರಕಾರ ಈ ಸಿನಿಮಾ ಕೇವಲ ಭಾರತದಲ್ಲಿ ₹ 309 ಕೋಟಿಯನ್ನು ಗಳಿಸಿದೆ.

17 ದಿನಗಳ ಒಟ್ಟು ಗಳಿಕೆಯನ್ನು ಭಾರತದಲ್ಲಿ 309.4 ಕೋಟಿ ಗಳಿಕೆಯನ್ನು ತಲುಪಿದೆ. ಈ ಸಿನಿಮಾದಲ್ಲಿ ಸನ್ನಿಡಿಯೋಲ್ ಜೊತೆ ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Sulekha

Leave a Reply

Your email address will not be published. Required fields are marked *