ಇಲ್ಲಿಗೆ ಹೋದ್ರೆ ಮೆಣಸಿನ ಕಾಯಿ ನೀರಲ್ಲೇ ಸ್ನಾನ ಮಾಡ್ಬೇಕು! -ಏನಿದು ಹಾಟ್‌ಪಾಟ್ ಸ್ಪಾ?

ಇಲ್ಲಿಗೆ ಹೋದ್ರೆ ಮೆಣಸಿನ ಕಾಯಿ ನೀರಲ್ಲೇ ಸ್ನಾನ ಮಾಡ್ಬೇಕು! -ಏನಿದು ಹಾಟ್‌ಪಾಟ್ ಸ್ಪಾ?

ಸಾಮಾನ್ಯವಾಗಿ ಸೋಪ್‌, ಬಾಡಿ ವಾಶ್‌ನಲ್ಲಿ ಸ್ನಾನ ಮಾಡುತ್ತಾರೆ. ಇನ್ನು ಹಳ್ಳಿ ಕಡೆಗಳಲ್ಲಿ ಕಡ್ಲೆ ಹಿಟ್ಟು, ಸೀಗೆಕಾಯಿ ಪುಡಿಯಲ್ಲಿ ಸ್ನಾನ ಮಾಡುತ್ತಾರೆ. ಎಂದಾದ್ರೂ ಮೆಣಸಿನಕಾಯಿ ನೀರಲ್ಲಿ ಸ್ನಾನ ಮಾಡೊದನ್ನ ಕೇಳಿದ್ದೀರಾ? ಇಲ್ಲೊಂದು ಕಡೆ ಹೋದ್ರೆ ಮೆಣಸಿನಕಾಯಿ ನೀರಲ್ಲಿ ಸ್ನಾನ ಮಾಡ್ಬೇಕು!

 ಇದನ್ನೂ ಓದಿ:  ಈ ಸೈಡ್‌ ಮಲಗಿದ್ರೆ ನಿಮ್ಮ ದೇಹದಲ್ಲಿ ಆಗುತ್ತೆ ಮ್ಯಾಜಿಕ್‌! – ಮಲಗೋ ಮುನ್ನ ಈ ವಿಚಾರ ತಿಳ್ಕೊಳ್ಳಿ!

ಚೀನಾದ ಹಾರ್ಬಿನ್‌ನಲ್ಲಿರುವ ಈ ಒಂದು ಈಜುಕೊಳ ಇಡೀ ಜಗತ್ತಿನ ಜನರ ಗಮನ ಸೆಳೆದಿದೆ. ಚೀನಾದ ರೆಸಾರ್ಟ್‌ ಒಂದರಲ್ಲಿ ‘ಹಾಟ್ ಪಾಟ್ ಸ್ಪ’ ಎಂದು ಕರೆಯಲಾಗುವ ಸ್ಪಾಟ್ ಇಲ್ಲಿದ್ದು ನೀರಿನ ಒಳಗೆ ತರಕಾರಿ ಮತ್ತು ಮೆಣಸಿನಕಾಯಿ ಜತೆ ಸ್ನಾನ ಮಾಡಬಹುದು. ಇಲ್ಲಿ ಒಂದು ಬದಿಯ ನೀರು ಮೆಣಸಿನಕಾಯಿಯಿಂದ ಕೂಡಿರುವ ಕೆಂಪು ಬಣ್ಣದ್ದಾಗಿದ್ದು ಇನ್ನೊಂದು ಬದಿ ಹಾಲು ಮತ್ತು ಇತರ ತರಕಾರಿಗಳಿಂದ ತುಂಬಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ‌ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾಟ್ಪಾಟ್ ಸ್ಪಾ ಏನಿದು?

ಹಾರ್ಬಿನ್‌ನ ಮೇಪಲ್ ಲೀಫ್ ವಿಲೇಜ್ ಹಾಟ್ ಸ್ಪ್ರಿಂಗ್ ರೆಸಾರ್ಟ್ ಹೊಸ ಪ್ರಯೋಗವನ್ನು ಪರಿಚಯಿಸಿದೆ. ಇಲ್ಲಿನ ಈಜುಕೊಳವನ್ನು ನೋಡಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಈ ಕೊಳವನ್ನು ಚೀನಾದ ಸಾಂಪ್ರದಾಯಿಕ ‘ಯಿನ್-ಯಾಂಗ್’ ಹಾಟ್‌ಪಾಟ್ ಶೈಲಿಯಲ್ಲಿ ರಚನೆ ಮಾಡಲಾಗಿದೆ. ಒಂದು ಬದಿಯಲ್ಲಿ ಕೆಂಪು ಬಣ್ಣದ ನೀರು ಮತ್ತು ನೂರಾರು ಮೆಣಸಿನ ಕಾಯಿಗಳನ್ನು ಬೆರೆಸಿದ್ದರೆ‌ ಇನ್ನೊಂದು ಬದಿಯಲ್ಲಿ ಬಿಳಿ ಬಣ್ಣದ ನೀರು ಮತ್ತು ವಿವಿಧ ತರಕಾರಿಗಳು ಇವೆ. ಆದರೆ ಈ ಮೆಣಸಿನಕಾಯಿಗಳು ಅತಿಯಾದ ಖಾರವನ್ನು ಹೊಂದಿರುವುದಿಲ್ಲ, ಆದ್ದರಿಂದ ಚರ್ಮಕ್ಕೆ ಯಾವುದೇ ತೊಂದರೆಯಿಲ್ಲ ಎಂದು ರೆಸಾರ್ಟ್‌ ತಿಳಿಸಿದೆ.

ಈ ರೆಸಾರ್ಟ್ ಕೇವಲ ಖಾರದ ಸ್ನಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಪ್ರವಾಸಿಗರಿಗಾಗಿ ಇನ್ನೂ ಹಲವು ವಿಶೇಷತೆಗಳಿವೆ ದಾಸವಾಳದಿಂದ ಗಿಡಮೂಲಿಕೆ ನೀರು, ಎಲೆಗಳು ಮತ್ತು ಗುಲಾಬಿಗಳವರೆಗೆ ನಿಮ್ಮ ಚರ್ಮವನ್ನು ಗುಣಪಡಿಸುವ ಮತ್ತು ರಕ್ಷಿಸುವ ವಿವಿಧ ಗಿಡಮೂಲಿಕೆಗಳು ಮತ್ತು ಹೂವು ಗಳಿಂದ ತುಂಬಿದ ಪೂಲ್‌ಗಳನ್ನು ಹೊಂದಲಾಗಿದೆ.

ಇತ್ತೀಚೆಗೆ ಒಬ್ಬ ವ್ಯಕ್ತಿ ಮೇಪಲ್ ಲೀಫ್ ವಿಲೇಜ್ ಹಾಟ್ ಸ್ಪ್ರಿಂಗ್ ರೆಸಾರ್ಟ್‌ನಿಂದ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ತಗಲುವ ವೆಚ್ಚ ಸುಮಾರು 28 ಡಾಲರ್ (ಅಂದರೆ ಅಂದಾಜು 2,500 ರುಪಾಯಿ) ಎಂದು ಅವರು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *