ಭಾರತದೆದುರು ಬಿದ್ದಿದ್ದೇ ಜಾಸ್ತಿ PAK – Bowl-OUT ವಿಕ್ಟರಿ ಹೇಗಿತ್ತು?
19 ವರ್ಷ.. ನಾವು ನಡೆದಿದ್ದೇ ದಾರಿ!

2026ರ ಟಿ-20 ವಿಶ್ವಕಪ್ ಟೂರ್ನಿ ಅದ್ಧೂರಿಯಾಗಿ ಸ್ಟಾರ್ಟ್ ಆಗಿದೆ. ಟೂರ್ನಿಯ ಮೊದಲ ದಿನವೇ ಹೈವೋಲ್ಟೇಜ್ ಪರ್ಫಾಮೆನ್ಸ್ಗಳು ಬಂದಿವೆ. ಹಾಗೇ ಯುಎಸ್ಎ ವಿರುದ್ಧ ಭರ್ಜರಿಯಾಗಿ ಗೆದ್ದಿರೋ ಭಾರತ ನೆಕ್ಸ್ಟ್ ಬೇಟೆಗೆ ರೆಡಿಯಾಗಿದೆ. ಫೆಬ್ರವರಿ 12ಕ್ಕೆ ನಮೀಬಿಯಾ ವಿರುದ್ಧ ಭಾರತ ಎರಡನೇ ಪಂದ್ಯ ಆಡಲಿದೆ. ಅದ್ರಲ್ಲೂ ಈ ಟೂರ್ನಿಯಲ್ಲಿ ಮೋಸ್ಟ್ ಅವೇಟೆಡ್ ಮ್ಯಾಚ್ ಆಗಿದ್ದ ಇಂಡೋ-ಪಾಕ್ ವಾರ್ ಫೆಬ್ರವರಿ 15ಕ್ಕೆ ಫಿಕ್ಸ್ ಆಗಿತ್ತು. ಬಟ್ ಪಾಕಿಸ್ತಾನದ ಹುಚ್ಚಾಟದಿಂದಾಗಿ ಪಂದ್ಯ ನಡೆಯೋದೇ ಡೌಟಿದೆ. ಅಷ್ಟಕ್ಕೂ ಇಲ್ಲಿ ಪಾಕಿಸ್ತಾನ ಮ್ಯಾಚ್ ಆಡಲ್ಲ ಅನ್ನೋಕೆ ಅಸಲಿ ಕಾರಣವೇ ಸೋಲಿನ ಭಯ. ಟಿ-20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಮುಂದೆ ಮಂಡಿಯೂರುತ್ತಲೇ ಬಂದಿರೋ ಪಾಕ್ ಈಗ ಬಹಿಷ್ಕಾರದ ನಾಟಕ ಆಡ್ತಿದೆ ಅಷ್ಟೇ.
ಇದನ್ನೂ ಓದಿ : ಟೀಂ ಇಂಡಿಯಾ ಟಿ20 ವಿಶ್ವಕಪ್ ಟೀಂನಲ್ಲಿ ಬಿಗ್ ಚೇಂಜ್ – ಹರ್ಷಿತ್ ರಾಣಾ OUT , ಮೊಹಮ್ಮದ್ ಸಿರಾಜ್ IN
ಟಿ-20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯ ಆಡಲ್ಲ ಅಂತಾ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವ್ರೇ ಅಧಿಕೃತವಾಗಿ ಘೋಷಣೆ ಮಾಡಿದ್ರು. ಸೋ ಅಲ್ಲಿಗೆ ಆಲ್ಮೋಸ್ಟ್ ಈ ಪಂದ್ಯ ನಡೆಯಲ್ಲ. ಬಟ್ ಲಾಸ್ಟ್ ಮೂಮೆಂಟ್ನಲ್ಲಿ ಏನ್ ಬೇಕಾದ್ರೂ ಆಗ್ಬೋದು. ಅವ್ರು ಆಡ್ತೀವಿ ಅಂದ್ರೂ ಆಡಲ್ಲ ಅಂದ್ರೂ ಭಾರತ ಅಂತೂ ಕಂಪ್ಲೀಟ್ ಆಗಿ ಪ್ರಿಪೇರ್ ಆಗಿರ್ಬೇಕು. ಪಂದ್ಯಕ್ಕಾಗಿ ಶ್ರೀಲಂಕಾಗೆ ಹಾರಿ ಕೊಲೊಂಬೊ ಮೈದಾನದಲ್ಲಿ ಟಾಸ್ಗಾಗಿ ಕ್ಯಾಪ್ಟನ್ ಸೂರ್ಯಕುಮಾರ್ ಮೈದಾನಕ್ಕೆ ಹೋಗ್ತಾರೆ. ಟಾಸ್ ವೇಳೆ ಪಾಕ್ ಕ್ಯಾಪ್ಟನ್ ಬಂದಿಲ್ಲ ಅಂದಾಗ ಮಾತ್ರ ಅಧಿಕೃತವಾಗಿ ಮ್ಯಾಚ್ ರೆಫರಿ ಪಂದ್ಯವನ್ನ ವಾಕ್ ಓವರ್ ಅಂತಾ ಘೋಷಣೆ ಮಾಡಿ ಭಾರತಕ್ಕೆ 2 ಅಂಕ ಕೊಡ್ತಾರೆ. ಸೋ ಅಲ್ಲಿವರೆಗೂ ಪ್ರೊಸೀಜರ್ಸ್ ಇರುತ್ತೆ.
ಪಾಕ್ ಎದುರು ಭಾರತವೇ ಬಾಸ್!
- 2007ರ ವಿಶ್ವಕಪ್ ನಲ್ಲಿ ಎರಡು ಬಾರಿ ಫೈಟ್, ಭಾರತಕ್ಕೇ ಗೆಲುವು
- 2012ರಲ್ಲಿ ಪಾಕಿಸ್ತಾನಕ್ಕೆ ನೀರು ಕುಡಿಸಿ ಗೆದ್ದ ಭಾರತ
- 2014ರಲ್ಲಿ ಪಾಕ್ ವಿರುದ್ಧ 7 ವಿಕೆಟ್ ಗಳಿಂದ ಗೆದ್ದ ಭಾರತ
- 2016ರ ವಿಶ್ವಕಪ್ ನಲ್ಲಿ ಭಾರತದಲ್ಲೇ ಪಾಕ್ ಗೆ ಶಾಕ್!
- 2021ರಲ್ಲಿ ಭಾರತದ ವಿರುದ್ಧ ಮೊದಲ ಬಾರಿ ಗೆದ್ದ ಪಾಕ್
- 2022ರಲ್ಲಿ ಕೊನೇ ಬಾಲ್ ನಲ್ಲಿ ಪಾಕ್ ವಿರುದ್ಧ ಗೆದ್ದಿದ್ದ ಭಾರತ
- 2024ರಲ್ಲಿ 119ಕ್ಕೆ ಆಲೌಟ್ ಆದ್ರೂ ಗೆದ್ದು ಬೀಗಿದ್ದ ಭಾರತ
ಟಿ-20 ವಿಶ್ವಕಪ್ ಹಿಸ್ಟರಿ ಕೆದಕಿದ್ರೆ ಪಾಕಿಸ್ತಾನ ಗೆದ್ದಿದ್ದಕ್ಕಿಂತ ಬಿದ್ದಿದ್ದೇ ಜಾಸ್ತಿ. ಌಂಡ್ ಈ ಸಲ ಅಂತೂ ಭಾರತ ಬ್ಯಾಟಿಂಗ್ನಲ್ಲಿ ಸುನಾಮಿ ಎಬ್ಬಿಸ್ತಿದೆ. 2026ರ ವಿಶ್ವಕಪ್ ಕೂಡ ಭಾರತದ್ದೇ ಅನ್ನೋ ಮಟ್ಟಿಗೆ ಪರ್ಫಾಮೆನ್ಸ್ ಕೊಡ್ತಿದೆ. ಹೀಗಿರುವಾಗ ಮತ್ತೊಮ್ಮೆ ಸೋತು ಮರ್ಯಾದೆ ಕಳ್ಕೊಳ್ಳೋದಕ್ಕಿಂತ ಬಾಯ್ಕಾಟ್ ಅಂತಾ ಬಿಲ್ಡಪ್ ತಗೊಳ್ಳೋಣ ಅನ್ಕೊಂಡು ಡ್ರಾಮಾ ಮಾಡ್ತಿದ್ದಾರೆ ಅಷ್ಟೇ.

ನೋಡಿರಿ

