ಬೆಕ್ಕು ಕಿಡ್ನ್ಯಾಪ್‌ ಮಾಡಿದಕ್ಕೆ 9 ಜನರ ವಿರುದ್ಧ FIR! – ಕೇಸ್‌ ಕೊಟ್ಟಿದ್ಯಾರು?

ಬೆಕ್ಕು ಕಿಡ್ನ್ಯಾಪ್‌ ಮಾಡಿದಕ್ಕೆ 9 ಜನರ ವಿರುದ್ಧ FIR! – ಕೇಸ್‌ ಕೊಟ್ಟಿದ್ಯಾರು?

ಮನುಷ್ಯರನ್ನು ಕಿಡ್ನ್ಯಾಪ್‌ ಮಾಡೋದನ್ನ ಕೇಳಿದ್ದೇವೆ. ಆದ್ರೆ ಯಾವತ್ತಾದ್ರೂ ಪ್ರಾಣಿಗಳನ್ನು ಕಿಡ್ನ್ಯಾಪ್‌ ಮಾಡುವುದನ್ನು ಕೇಳಿದ್ದೀರಾ? ಇದೀಗ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬೆಕ್ಕನ್ನು ಕಿಡ್ನ್ಯಾಪ್‌ ಮಾಡಿದ್ದಾರೆಂದು 9 ಜನರ ವಿರುದ್ಧ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಟಿ20 ವಿಶ್ವಕಪ್ ಟೀಂನಲ್ಲಿ ಬಿಗ್ ಚೇಂಜ್ – ಹರ್ಷಿತ್ ರಾಣಾ OUT , ಮೊಹಮ್ಮದ್ ಸಿರಾಜ್ IN

ಬೆಂಗಳೂರು ನಗರದ ಎಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿ ಬೆಕ್ಕನ್ನು ಅಕ್ರಮವಾಗಿ ಸ್ಥಳಾಂತರ (ಕಿಡ್ನ್ಯಾಪ್) ಮಾಡಲಾಗಿದೆ ಎಂಬ ಆರೋಪದಡಿ ಬರೋಬ್ಬರಿ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ವ್ಯಾನ್ಶಿ ಸಾಲೇಟೇರ್ ಅಪಾರ್ಟ್ಮೆಂಟ್ ಆವರಣದಲ್ಲಿದ್ದ ಗರ್ಭಿಣಿ ಬೆಕ್ಕೊಂದನ್ನು ಅಕ್ರಮವಾಗಿ ಹಿಡಿದು ಬೇರೆಡೆಗೆ ಸಾಗಿಸಲಾಗಿದೆ. ಇದೀಗ ಪ್ರಾಣಿಪ್ರಿಯರಾಗಿರುವ ಹರೀಶ್ ಎಂಬುವರು ಈ ಕುರಿತು ಎಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಾಣಿಗಳನ್ನು ಅಕ್ರಮವಾಗಿ ಸ್ಥಳಾಂತರ ಮಾಡುವುದು ಮತ್ತು ಹಿಂಸಿಸುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಬೆಕ್ಕನ್ನು ಸ್ಥಳಾಂತರಿಸಲು ಕಾರಣರಾದ ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮ್, ಸೆಕ್ಯುರಿಟಿ ಮ್ಯಾನೇಜರ್ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನನ್ವಯ ಪೊಲೀಸರು ‘ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ’ಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Shwetha M

Leave a Reply

Your email address will not be published. Required fields are marked *