ಸರ್ಕಾರಿ ಬಸ್‌ಗಳ ಮೇಲಿನ ಜಾಹೀರಾತಿಗೆ ಬ್ರೇಕ್ – 15 ದಿನದೊಳಗೆ ಜಾಹೀರಾತು ತೆರವಿಗೆ ಸೂಚನೆ

ಸರ್ಕಾರಿ ಬಸ್‌ಗಳ ಮೇಲಿನ ಜಾಹೀರಾತಿಗೆ ಬ್ರೇಕ್ – 15 ದಿನದೊಳಗೆ ಜಾಹೀರಾತು ತೆರವಿಗೆ ಸೂಚನೆ

ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಗುಟ್ಕಾ, ತಂಬಾಕು ಉತ್ಪನ್ನಗಳ ಜಾಹೀರಾತು ರಾರಾಜಿಸುತ್ತಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಶಾಲಾ ಮಕ್ಕಳು ಮತ್ತು ಯುವಜನತೆಯ ಮೇಲೆ ಇದು ಕೆಟ್ಟ ಪ್ರಭಾವ ಬೀರುತ್ತಿದೆ. ಹಣದಾಸೆಗೆ ಬಸ್‌ ಮೇಲೆ ಜಾಹೀರಾತು ಹಾಕುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಾಗರಿಕರು ತಿರುಗಿಬಿದ್ದಾರೆ. ಇದೀಗ ಈಗ ಜನಾಕ್ರೋಶಕ್ಕೆ ಕೆಎಸ್‌ಆರ್‌ಟಿಸಿ ಈಗ ಮಣಿದಿದೆ.

ಇದನ್ನೂ ಓದಿ: ಬೈಂದೂರು ಮಾಜಿ ಶಾಸಕ ಇನ್ನಿಲ್ಲ! – ಬಸ್ರೂರು ಅಪ್ಪಣ್ಣ ಹೆಗ್ಡೆ ವಿಧಿವಶ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತಿನ ಪೋಸ್ಟರ್ ಅಂಟಿಸೋದರ ವಿರುದ್ಧ ಒಂದು ಆಂದೋಲನವೇ ಶುರುವಾಗಿದೆ. ಸಾರ್ವಜನಿಕರು, ಸಂಘಟನೆಗಳು ಬಸ್‌ಗಳಿಗೆ ಅಂಟಿಸಲಾಗಿದ್ದ ಜಾಹೀರಾತು ಪೋಸ್ಟರ್ ಕಿತ್ತೆಸೆಯುತ್ತಿದ್ದಾರೆ.  ಸದ್ಯ ಜನಾಕ್ರೋಶಕ್ಕೆ ಮಣಿದಿರುವ ಸರ್ಕಾರ, ಕೂಡಲೇ ತಂಬಾಕು ಉತ್ಪನ್ನಗಳನ್ನು ಪ್ರಮೋಟ್ ಮಾಡುವ ಜಾಹಿರಾತುಗಳ ತೆರವಿಗೆ ಕೆಎಸ್‌ಆರ್‌ಟಿಸಿ ಎಂಡಿಗೆ ಸೂಚನೆ ನೀಡಿದೆ.

ರಾಜ್ಯದ ಹಲವು ಬಸ್ ನಿಲ್ದಾಣಗಳಲ್ಲಿ ಪೋಸ್ಟರ್‌ಗಳನ್ನ ಕಿತ್ತೆಸೆಯುವ ಪ್ರಕರಣಗಳು ಹೆಚ್ಚಾಗ್ತಿದ್ದಂತೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಲ್ಲಾ ತಂಬಾಕು ಉತ್ಪನ್ನಗಳ ಜಾಹೀರಾತುಗಳ ತೆರವಿಗೆ ಸೂಚಿಸಿದ್ದಾರೆ. ಸಚಿವರ ನಿರ್ದೇಶನದ ಮೇರೆಗೆ ವಾರ್ಷಿಕವಾಗಿ 60 ಕೋಟಿ ಆದಾಯ ಬರುತ್ತಿದ್ದರೂ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ರಾಜ್ಯದ 2 ಸಾವಿರ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್ ಅನ್ನು ಅಳವಡಿಕೆ ಮಾಡಿದ್ದಾರೆ. 15 ದಿನಗಳ ಒಳಗೆ ಎಲ್ಲಾ ಬಸ್‌ಗಳ ಮೇಲಿನ ಜಾಹೀರಾತು ತೆರವಿಗೆ ಸೂಚನೆ ನೀಡಲಾಗಿದೆ. ಇನ್ನೂ ಜಾಹೀರಾತು ನೀಡಿದ ಕಂಪನಿಗಳ ಜೊತೆಯೂ ಮಾತನಾಡಿದ್ದು, ಜಾಹೀರಾತುಗಳ ತೆರವು ಮಾಡುವುದಕ್ಕೆ ಕಂಪನಿಗಳು ಒಪ್ಪಿಕೊಂಡಿವೆ. ಆಯಾ ಡಿಪೋಗಳಲ್ಲಿ ಡಿಪೋ ಮ್ಯಾನೆಜರ್‌ಗಳ ಜೊತೆ ಮಾತನಾಡಿದ್ದು, ತಕ್ಷಣಕ್ಕೆ ತೆರವು ಮಾಡುವಂತೆ ಸೂಚಿಸಲಾಗಿದೆ.

Shwetha M