RCBಗೆ ಹ್ಯಾಟ್ರಿಕ್ ಕಪ್ – ಡೆಲ್ಲಿ ಬೇಟೆಯಾಡಿದ ಸಿಂಹಿಣಿಯರು
ಫೈನಲ್ ನಲ್ಲಿ ಧೂಳೆಬ್ಬಿಸಿದ ಮಂದಾನ  

RCBಗೆ ಹ್ಯಾಟ್ರಿಕ್ ಕಪ್ – ಡೆಲ್ಲಿ ಬೇಟೆಯಾಡಿದ ಸಿಂಹಿಣಿಯರುಫೈನಲ್ ನಲ್ಲಿ ಧೂಳೆಬ್ಬಿಸಿದ ಮಂದಾನ  

ಅಸಾಧ್ಯ ಅನ್ನೋದನ್ನ ಸಾಧಿಸಿ ತೋರಿಸೋದ್ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಎತ್ತಿದ ಕೈ. 2026ರ ಡಬ್ಲ್ಯೂಪಿಎಲ್ ಫೈನಲ್​ನಲ್ಲಿ 200 ಪ್ಲಸ್ ಟಾರ್ಗೆಟ್ ಸೆಟ್ ಆದಾಗ್ಲೇ ಈ ಸಲ ಡೆಲ್ಲಿ ವಿನ್ನರ್ ಬೆಂಗಳೂರು ಟೀಂ ರನ್ನರ್ ಅಂತಾ 96 ಪರ್ಸೆಂಟ್ ಮಂದಿ ಪ್ರೆಡಿಕ್ಟ್ ಮಾಡಿದ್ರು. ಜಸ್ಟ್ 4 ಪರ್ಸೆಂಟ್ ಜನ ಮಾತ್ರ ಆರ್​ಸಿಬಿ ಪರ ವೋಟ್ ಹಾಕಿದ್ದು. ಆದ್ರೆ ಸಿಂಹಿಣಿಯರು ಬೇಟೆಗೆ ಅಂತಾ ನಿಂತ ಮೇಲೆ ರನ್ಸ್ ಲೆಕ್ಕ ಹಾಕಲ್ಲ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ರು. ಸತತ 5 ಪಂದ್ಯ ಗೆದ್ದು ಪ್ಲೇಆಫ್​ಗೆ ಕಾಲಿಟ್ಟವ್ರು ಫೈನಲ್​ನಲ್ಲಿ ದಾಖಲೆ ಮಟ್ಟದ ಚೇಸಿಂಗ್ ಮಾಡಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ಇದನ್ನೂ ಓದಿ : ಟಿಪ್ಸ್‌ ಕೊಟ್ರೆ ಡ್ಯಾನ್ಸ್‌ ಮಾಡ್ತೀವಿ! – ಬೆಂಗಳೂರಿನ ಈ ಕೆಫೆ ಸಿಬ್ಬಂದಿ ಮಸ್ತ್‌ ಡ್ಯಾನ್ಸ್!‌

ಡಬ್ಲ್ಯೂಪಿಎಲ್​ ಫೈನಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ರಾಯಲ್ ಆಗೇ ಚಾಂಪಿಯನ್ ಪಟ್ಟಕ್ಕೇರಿದೆ. ಸತತ 4 ಬಾರಿ ಫೈನಲ್​ಗೆ ಬಂದ್ರೂ ಡೆಲ್ಲಿ ಪಡೆಗೆ ಟ್ರೋಫಿ ಸಿಗಲೇ ಇಲ್ಲ.  ವಡೋದರದ ಕೊಟಂಬಿ ಮೈದಾನದಲ್ಲಿ ನಡೆದ ಈ ರಣರೋಚಕ ಮ್ಯಾಚಲ್ಲಿ ಸ್ಮೃತಿ ಮಂದಾನ ನಾಯಕತ್ವದ ಬೆಂಗಳೂರು ಹಲವು ಚರಿತ್ರೆ ಸೃಷ್ಟಿಸಿದೆ.

ಬಿಗ್ ಟಾರ್ಗೆಟ್ ಚೇಸ್ ಮಾಡಿ ಕಪ್ ಗೆದ್ದ ಸಿಂಹಿಣಿಯರು!

ಡೆಲ್ಲಿ ಮತ್ತು ಆರ್​ಸಿಬಿ ನಡುವಿನ ಫೈನಲ್ ಮ್ಯಾಚದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಡೆಲ್ಲಿ  ಪರ ನಾಯಕಿ ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ ಎಂಟು ಬೌಂಡರಿ ಸೇರಿದಂತೆ 57 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದ್ರು. 204ರನ್​ಗಳ ಟಾರ್ಗೆಟ್ ಪಡೆದ ಆರ್ಸಿಬಿ ಈ ಪಂದ್ಯ ಗೆಲ್ಲಲ್ಲ ಅನ್ನೋ ಥರನೇ ಇತ್ತು. ಯಾಕಂದ್ರೆ 2ನೇ ಓವರ್​ನಲ್ಲೇ ಗ್ರೇಸ್ ಹ್ಯಾರಿಸ್ ವಿಕೆಟ್ ಬಿದ್ದಿತ್ತು. ಆದ್ರೆ 2ನೇ ವಿಕೆಟ್​ಗೆ ಜೊತೆಯಾದ ಸ್ಮೃತಿ ಮಂದಾನ ಹಾಗೇ ಜಾರ್ಜಿಯಾ ವೋಲ್ ಹಿಂತಿರುಗಿ ನೋಡ್ಲೇ ಇಲ್ಲ. ಸ್ಮೃತಿ 41 ಎಸೆತಗಳಲ್ಲಿ 87 ರನ್ಸ್, 54 ಬಾಲಲ್ಲಿ ವಾಲ್ 79 ರನ್ಸ್ ಕಲೆ ಹಾಕಿದ್ರು. ಆಲ್ಮೋಸ್ಟ್ ಗೆಲುವಿನ ದಡ ಸೇರಿಸಿ ವಿಕೆಟ್ ಒಪ್ಪಿಸಿದ್ರು. 19ನೇ ಓವರ್​ನಲ್ಲೇ ಮ್ಯಾಚ್ ಮುಗಿಯುತ್ತೆ ಅನ್ಕೊಂಡ್ರೆ ಕೊನೆಯಲ್ಲಿ ಡೆಲ್ಲಿ ಮತ್ತೆ ಚೋಕ್ ಕೊಟ್ರು. ರಿಚಾ 6 ರನ್​ಗಳಿಗೆ ಔಟಾದ್ರು. ಕೊನೇ ಓವರ್​ನಲ್ಲಿ 10 ರನ್ ಬೇಕಿದ್ದಾಗ ರಾಧಾ ಯಾವದ್ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿ ವಿನ್ನಿಂಗ್ ಶಾಟ್ ಬಾರಿಸಿದ್ರು. ಇನ್ನೂ 2 ಬಾಲ್ ಇದ್ದಂತೆಯೇ ಆರ್​ಸಿಬಿ ವಿನ್ ಆಯ್ತು. ಹಾಗೇ ಈ ಪಂದ್ಯದ ಮೂಲಕ ಬೆಂಗಳೂರು ಟೀಂ ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸಿದೆ.

ಆರ್ ಸಿಬಿ ಬರೆದ ದಾಖಲೆಗಳು!

ಚಾಂಪಿಯನ್ ಆರ್ ಸಿಬಿ ತಂಡಕ್ಕೆ 6 ಕೋಟಿ ಬಹುಮಾನ

377 ರನ್ ಬಾರಿಸಿ ಟೂರ್ನಿಯಆರೆಂಜ್ ಕ್ಯಾಪ್ ಗೆದ್ದ ಮಂದಾನ

ಟಿ-20 ಫೈನಲ್ ನಲ್ಲಿ ಇತಿಹಾಸದಲ್ಲೇ ಫೈನಲ್ ನಲ್ಲಿ ಹೈಯೆಸ್ಟ್ ಚೇಸ್

WPL ಇತಿಹಾಸದಲ್ಲಿ 200 ಕ್ಕೂ ಹೆಚ್ಚು ಗುರಿ ಬೆನ್ನಟ್ಟಿದ ಏಕೈಕ ತಂಡ

ಸ್ಮೃತಿ ಮತ್ತು ಜಾರ್ಜಿಯಾ ವೋಲ್ 165 ರನ್‌ ಗಳ ಜೊತೆಯಾಟ

ಡೈರೆಕ್ಟ್ ಫೈನಲ್ ಗೇರಿದ ತಂಡ ಮೊದಲ ಬಾರಿಗೆ ಕಪ್ ಗೆಲುವು

ಹೀಗೆ ಹೇಳ್ತಾ ಹೋದ್ರೆ ಸಾಕಷ್ಟು ದಾಖಲೆಗಳನ್ನ ಆರ್​ಸಿಬಿ ಫೈನಲ್ ಮ್ಯಾಚಲ್ಲಿ ಮಾಡಿದೆ. ಪ್ರಶಸ್ತಿ ಗೆಲುವಿನ ಸುತ್ತಿನಲ್ಲೂ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿ ಗೆದ್ದಿದ್ದಾರೆ. ಬಟ್ ಬ್ಯಾಡ್​ಲಕ್ ಸತತ ನಾಲ್ಕನೇ ಸಲವೂ ಡೆಲ್ಲಿ ಕ್ಯಾಪಿಟಲ್ಸ್ ಟ್ರೋಫಿಯನ್ನ ಮಿಸ್ ಮಾಡ್ಕೊಂಡಿದೆ. 4 ಸೀಸನ್​ನಲ್ಲೂ ರನ್ನರ್ ಅಪ್ ಆಗಿದ್ದಾರೆ. ಬಹುಶಃ ಆರ್​ಸಿಬಿ ಬಿಟ್ಟು ಬೇರೆ ಯಾರೇ ಇದ್ರೂ ನಮ್ಮ ಸಪೋರ್ಟ್ ಡೆಲ್ಲಿಗಿರ್ತಿತ್ತು. ಬೆಟರ್ ಲಕ್ ನೆಕ್ಸ್​ಟ್ ಟೈಂ.

Shantha Kumari