ಬೆಂಗಳೂರಲ್ಲಿ  ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ  ಶೆಡ್‌ಗೆ ಬೆಂ*ಕಿ

ಬೆಂಗಳೂರಲ್ಲಿ  ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ  ಶೆಡ್‌ಗೆ ಬೆಂ*ಕಿ

ಬೆಂಗಳೂರಲ್ಲಿ  ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ   ಶೆಡ್‌ಗಳಿಗೆ ಬೆಂಕಿ  ಬಿದ್ದು 100ಕ್ಕೂ ಅಧಿಕ ಶೆಡ್‌ಗಳು ಹೊತ್ತಿ ಉರಿದ ಘಟನೆ ಕೂಡ್ಲು ಕೆರೆ ಸಮೀಪ ನಡೆದಿದೆ. ಇಂದು ಬೆಳಗ್ಗೆ 5:30 ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಸರ್ಜಾಪುರ ಹಾಗು ಡೈರಿ ಸರ್ಕಲ್‌ನಿಂದ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಶಿವರಾತ್ರಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವವರಿಗೆ ಟಫ್ ರೂಲ್ಸ್

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೆಡ್‌ಗಳು ಹಾಗು ಸ್ಕ್ರಾಪ್ ವಸ್ತುಗಳು ಬೆಂಕಿಗಾಹುತಿಯಾಗಿದೆ. ಹೈ ಟೆನ್ಷನ್‌ ವಯರ್‌ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ : ದಾವಣಗೆರೆಯಲ್ಲಿ ಜಿಂಕೆಗಳಿಗೆ ಸಾಂಕ್ರಾಮಿಕ ರೋಗ ಹರಡಿದ್ದು, ಮಾಸಾಂತ್ಯದ ವರೆಗೆ ಮೃಗಾಲಯಕ್ಕೆ ಪ್ರವೇಶವನ್ನು ನಿಷೇಧ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಅನಗೋಡದಲ್ಲಿರುವ ಇಂದಿರಾ ಪ್ರಿಯದರ್ಶಿನಿ ಮೃಗಾಲಯದಲ್ಲಿ ಈ ಒಂದು ಘಟನೆ ನಡೆದಿದೆ.

ಮೃಗಾಲಯದಲ್ಲಿ ಜಿಂಕೆಗಳಿಗೆ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಇಡೀ ಮೃಗಾಲಯಕ್ಕೆ ಸದ್ಯ ಅರಣ್ಯ ಇಲಾಖೆ ಪರದೆ ಅಳವಡಿಸಿದೆ. ಜನವರಿ 16 ಕೆ ಮೊದಲ ಜಿಂಕೆ ಸಾವನ್ನಪ್ಪಿದ್ದು ಇಲ್ಲಿಯವರೆಗೆ ಆರು ಜಿಂಕೆಗಳು ಸಾವನ್ನಪ್ಪಿವೆ. ಹಾಗಾಗಿ ಇಡೀ ಮೃಗಾಲಯವನ್ನು ಬಂದ್ ಮಾಡಲಾಗಿದ್ದು, ಪಶು ವೈದ್ಯರು ಆಗಮಿಸಿ ಜಿಂಕೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

Kishor KV