ವಿಶ್ವಕಪ್ ನಲ್ಲಿ ಭಾರತೀಯರ ದಂಡು – ಕೆನಡಾ, ಅಮೆರಿಕದಲ್ಲಿ ಇಂಡಿಯಾ ಗತ್ತು!
ಚಾನ್ಸ್ ಸಿಗದೇ ದೇಶ ಬಿಟ್ಟವರೆಷ್ಟು?

ವಿಶ್ವಕಪ್ ನಲ್ಲಿ ಭಾರತೀಯರ ದಂಡು – ಕೆನಡಾ, ಅಮೆರಿಕದಲ್ಲಿ ಇಂಡಿಯಾ ಗತ್ತು!ಚಾನ್ಸ್ ಸಿಗದೇ ದೇಶ ಬಿಟ್ಟವರೆಷ್ಟು?

ಕ್ರಿಕೆಟ್ ಜಗತ್ತಿನಲ್ಲಿ ಬಿಸಿಸಿಐ ಅಂದ್ರೆ ದೊಡ್ಡಣ್ಣ. ಟೀಂ ಇಂಡಿಯಾ ಅಂದ್ರೆ ಬಲಿಷ್ಠ ತಂಡ. ಈಗಂತೂ ವೈಟ್ ಬಾಲ್ ಕ್ರಿಕೆಟ್​ನಲ್ಲಿ ಭಾರತ ಮೋಸ್ಟ್ ಫೇವರೆಟ್ ಟೀಂ ಟಿ-20 ವಿಶ್ವಕಪ್ ಅಖಾಡದಲ್ಲೂ ಭಾರತವೇ ಟ್ರೋಫಿ ಗೆಲ್ಲುವಂಥ ಫೇವರೆಟ್ ಟೀಂ. ಅದಲ್ಲಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಈ ಬಾರಿಯ ಟೂರ್ನಿಯಲ್ಲಿ ಭಾರತೀಯರ ದಂಡೇ ಇದೆ. ನಮ್ಮ ತಂಡದಲ್ಲಷ್ಟೇ ಅಲ್ಲ ಬೇರೆ ಬೇರೆ ತಂಡಗಳಲ್ಲೂ ಭಾರತೀಯರದ್ದೇ ಹವಾ.

ಇದನ್ನೂ ಓದಿ : ಇಂದು WPL ಫೈನಲ್‌ – RCB VS DC ಕಾದಾಟದಲ್ಲಿ ಗೆಲ್ಲೋದ್ಯಾರು?

ಟಿ-20 ವಿಶ್ವಕಪ್ ಆರಂಭಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಫೆಬ್ರವರಿ 7 ಅಂದ್ರೆ ಶನಿವಾರದಿಂದಲೇ ಒಂದು ತಿಂಗಳ ಮೆಗಾ ಫೈಟ್ ಸ್ಟಾರ್ಟ್ ಆಗುತ್ತೆ. 20 ತಂಡಗಳ ನಡುವಿನ ಸಮರದಲ್ಲಿ ಮಾರ್ಚ್ 8ರಂದು 10ನೇ ಆವೃತ್ತಿಯ ಚಾಂಪಿಯನ್​ನ ಉದಯವಾಗುತ್ತೆ. ಅದ್ರಲ್ಲೂ ಭಾರತೀಯರಿಗೆ ಈ ಟೂರ್ನಿ ಅಂದ್ರೆ ಡಬಲ್ ಧಮಾಕಾ. ಯಾಕಂದ್ರೆ ಟೂರ್ನಿ ಹೋಸ್ಟಿಂಗ್ ಮಾಡ್ತಿರೋದು ಭಾರತ. ಌಂಡ್ ಭಾರತ ತಂಡದಲ್ಲಷ್ಟೇ ಅಲ್ಲದೆ ಬೇರೆ ಬೇರೆ ಟೀಮ್​ಗಳಲ್ಲಿ ಆಡ್ತಿರೋ ಭಾರತೀಯರನ್ನೂ ನೋಡೋ ಚಾನ್ಸ್ ಸಿಕ್ತಿದೆ.

ಟೀಂ ಇಂಡಿಯಾ ಬಿಟ್ಟೂ ಟೂರ್ನಿಯಲ್ಲಿದ್ದಾರೆ 40 ಭಾರತೀಯ ಪ್ಲೇಯರ್ಸ್!

ಭಾರತ ಮತ್ತು ಲಂಕಾ ಆಯೋಜನೆಯಲ್ಲಿ ನಡೆಯಲಿರೋ ಈ ಟೂರ್ನಿಯಲ್ಲಿ ಒಟ್ಟು 40 ಭಾರತೀಯ ಆಟಗಾರರು ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಟೀಂ ಇಂಡಿಯಾ ಪರ ಆಡ್ಬೇಕು ಅಂತಾ ಕನಸು ಕಂಡಿದ್ದ ಅದೆಷ್ಟೋ ಆಟಗಾರರು ಅವಕಾಶ ವಂಚಿತರಾಗಿ ಬೇರೆ ಬೇರೆ ದೇಶಗಳ ಪರ ಕಣಕ್ಕಿಳಿಯುತ್ತಿದ್ದಾರೆ. ಅದ್ರಲ್ಲೂ ಕೆನಡಾ ತಂಡದಲ್ಲಂತೂ ಭಾರತೀಯರ ದಂಡೇ ತುಂಬಿದೆ. ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಸಬಹುದಾದ ಅಷ್ಟೂ ಆಟಗಾರರು ಭಾರತೀಯರೇ ಇದ್ದಾರೆ. ಌಂಡ್ ನೆಕ್ಸ್​ಟ್ ಸೆಕೆಂಡ್ ಪ್ಲೇಸಲ್ಲಿ ಅಮೆರಿಕ ಇದ್ದು ಇಲ್ಲೂ ಕೂಡ ಆಲ್ಮೋಸ್ಟ್ ಭಾರತೀಯ ಮೂಲದ ಪ್ಲೇಯರ್​ಗಳೇ ಇದ್ದಾರೆ.

ಭಾರತೀಯ ಮೂಲದ 40 ಆಟಗಾರರು!

ಕೆನಡಾ (11 ): ದಿಲ್‌ಪ್ರೀತ್ ಬಾಜ್ವಾ (ನಾಯಕ), ಅಜಯ್‌ವೀರ್ ಹುಂಡಾಲ್, ಅಂಶ್ ಪಟೇಲ್, ಹರ್ಷ್ ಠಾಕರ್, ಜಸ್ಕರನ್‌ದೀಪ್ ಬಟ್ಟಾರ್, ಕನ್ವರ್‌ಪಾಲ್ ತತ್ಗುರ್, ನವನೀತ್ ಧಲಿವಾಲ್, ರವೀಂದರ್‌ಪಾಲ್ ಸಿಂಗ್, ಶಿವಂ ಶರ್ಮಾ, ಶ್ರೇಯಸ್ ಮೊವ್ವ, ಯುವರಾಜ್ ಸಮ್ರಾ.

ಅಮೇರಿಕಾ (09) : ಮೋನಾಕ್ ಪಟೇಲ್ (ನಾಯಕ), ಜೆಸ್ಸಿ ಸಿಂಗ್ (ಉಪನಾಯಕ), ಮಿಲಿಂದ್ ಕುಮಾರ್, ಸೈತೇಜಾ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಸೌರಭ್ ನೇತ್ರವಲ್ಕರ್, ಶುಭಂ ರಂಜನೆ, ನೆಸ್ತುಸ್​ ಕೆಂಜಿಗೆ.

ಒಮನ್ (07 ): ಜತೀಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಕರಣ್ ಸೋನಾವಾಲೆ, ಜೇ ಒಡೆದಾರ, ಆಶಿಶ್ ಒಡೆದಾರ, ಜಿತೇನ್ ರಾಮನಂದಿ, ವಾಸಿಂ ಅಲಿ.

ಯುಎಇ (07 ): ಆರ್ಯನ್ಶ್ ಶರ್ಮಾ (ವಿಕೆಟ್ ಕೀಪರ್), ಧ್ರುವ ಪರಾಶರ್, ಹರ್ಷಿತ್ ಕೌಶಿಕ್, ಮಯಾಂಕ್ ಕುಮಾರ್, ರೋಹಿದ್ ಸಿಂಗ್, ಸಿಮ್ರಂಜೀತ್ ಸಿಂಗ್, ಅಲಿಶಾನ್ ಶರಫು,

ಇಟಲಿ (1) : ಜಸ್ಪ್ರೀತ್ ಸಿಂಗ್.

ಸೌತ್ ಆಫ್ರಿಕಾ (1 ) : ಕೇಶವ್ ಮಹಾರಾಜ್

ನೆದರ್ಲ್ಯಾಂಡ್ (1) ​: ಆರ್ಯನ್​ ದತ್ ​

ವೆಸ್ಟ್ ಇಂಡೀಸ್ ( 1) : ಗುಡಕೇಶ್ ಮೋಟಿ

ನ್ಯೂಜಿಲೆಂಡ್ (2) ​: ರಚಿನ್​ ರವೀಂದ್ರ ಮತ್ತು ಇಶ್​ ಸೋಧಿ

ಇವ್ರೆಲ್ಲಾ ಟೀಂ ಇಂಡಿಯಾ ಅಲ್ಲದೆ ಬೇರೆ ಬೇರೆ ತಂಡಗಳಲ್ಲಿ ಆಡ್ತಿರೋ ಭಾರತೀಯ ಆಟಗಾರರು. ಅಮೆರಿಕ ತಂಡವನ್ನು ಮುನ್ನಡೆಸುತ್ತಿರುವ 32 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಮೋನಾಂಕ್, ಒಂದು ಕಾಲದಲ್ಲಿ ಗುಜರಾತ್ U-19 ತಂಡಕ್ಕಾಗಿ ಆಡ್ತಿದ್ರು. ಬಟ್ ಅವಕಾಶ ಸಿಗದೆ ಯುಎಸ್​ಗೆ ಹಾರಿದ್ರು. ಈಗ ಕ್ಯಾಪ್ಟನ್ ಆಗಿ ಲೀಡ್ ಮಾಡ್ತಿದ್ದಾರೆ. ಒಟ್ನಲ್ಲಿ ಭಾರತದಲ್ಲಿ ಕ್ರಿಕೆಟ್​​ ಎಂಬ ಸಮುದ್ರದಲ್ಲಿ ಈಜುತ್ತಿರೋ ಎಲ್ರಿಗೂ ಅವಕಾಶ ಸಿಗ್ತಿಲ್ಲ. ಸಿಗೋ ಕಡೆ ಆಡ್ತಿದ್ದು ಅಲ್ಲೂ ಕೂಡ ಅವ್ರ ಪ್ರತಿಭೆ ಮೂಲಕವೇ ಸ್ಥಾನ ಪಡೆದು ಮಿಂಚುತ್ತಿದ್ದಾರೆ.

Shantha Kumari