IND-PAK ವಾರ್.. ಜಗತ್ತೇ ಶೇಕ್ – ಪಂದ್ಯ ರದ್ದಾದ್ರೆ ಇಷ್ಟೆಲ್ಲಾ ಅಪಾಯನಾ?
ವಿಶ್ವಕಪ್ ನಲ್ಲಿ ಕುತಂತ್ರಿಗಳ ಕರ್ಮಕಾಂಡ

IND-PAK ವಾರ್.. ಜಗತ್ತೇ ಶೇಕ್ – ಪಂದ್ಯ ರದ್ದಾದ್ರೆ ಇಷ್ಟೆಲ್ಲಾ ಅಪಾಯನಾ?ವಿಶ್ವಕಪ್ ನಲ್ಲಿ ಕುತಂತ್ರಿಗಳ ಕರ್ಮಕಾಂಡ

ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಇದುವರೆಗೆ ಯಾವುದೇ ತಂಡ ಪಂದ್ಯವನ್ನು ಬಹಿಷ್ಕರಿಸಿಲ್ಲ. 2007ರಿಂದ ಆರಂಭವಾದ ಟೂರ್ನಿಯಲ್ಲಿ 2024 ರವರೆಗೆ ಒಂಬತ್ತು ಆವೃತ್ತಿಗಳನ್ನ ಕಂಡಿದೆ. ಹೀಗಿದ್ರೂ ಯಾವುದೇ ತಂಡವು ನಿರ್ದಿಷ್ಟ ಎದುರಾಳಿ ಅಥವಾ ನಿರ್ದಿಷ್ಟ ದೇಶದಲ್ಲಿ ಆಡಲ್ಲ ಅಂತೇಳಿ ಒಮ್ಮೆಯೂ ಪಂದ್ಯ ಕಳ್ಕೊಂಡಿಲ್ಲ. ಬಟ್ ಈ ಸಲ ಅದೂ ಆಗಬಹುದು ಅಥವಾ ಆಗದೆಯೂ ಇರ್ಬೋದು. ಅಂದ್ರೆ ಪಾಕಿಸ್ತಾನ ಲಾಸ್ಟ್ ಮೂಮೆಂಟ್​ನಲ್ಲಿ ಉಲ್ಟಾ ಹೊಡ್ದು ಆಡಲೂ ಬಹುದು. ಌಕ್ಚುಲಿ ಇಲ್ಲಿ ಪಾಕಿಸ್ತಾನ ಪಂದ್ಯ ಆಡಲ್ಲ ಅಂತಿದ್ರೂ ಕೂಡ ಲಾಸ್ ಅಂತಾ ಬಂದಾಗ ಹಲವು ರಾಷ್ಟ್ರಗಳಿಗೆ ಹೊಡೆತ ಬೀಳುತ್ತೆ.

ಇದನ್ನೂ ಓದಿ : 2026ರ ವಿಶ್ವ ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌  ಟೂರ್ನಿ ಗೆದ್ದ ದುಬೈ ರಾಯಲ್ಸ್‌

ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ವಿರುದ್ಧದ ಹೈ ಪ್ರೊಫೈಲ್ ಪಂದ್ಯವನ್ನು ಪಾಕಿಸ್ತಾನ ಬಾಯ್ಕಾಟ್ ಮಾಡಿದೆ. ಪಾಕಿಸ್ತಾನ ತನ್ನ ನಿಲುವಿಗೆ ಅಂಟಿಕೊಂಡಿದ್ದೇ ಆದ್ರೆ ಕೋಟಿ ಕೋಟಿ ಆದಾಯಕ್ಕೆ ಖೋತಾ ಆಗುತ್ತೆ. ಟೂರ್ನಿ ಆಯೋಜನೆ ಮಾಡ್ತಿರೋ ಭಾರತೀಯ ಪ್ರಸಾರಕರಿಗೆ ಏನಿಲ್ಲ ಅಂದ್ರೆ 200ರಿಂದ   250 ಕೋಟಿ ರೂಪಾಯಿಗಳವರೆಗೆ ಜಾಹೀರಾತು ನಷ್ಟವಾಗುವ ಸಾಧ್ಯತೆಯಿದೆ. ಯಾಕಂದ್ರೆ ಏಕೆಂದರೆ ಮಾರ್ಕ್ಯೂ ಎನ್ಕೌಂಟರ್ ಸಮಯದಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 40 ಲಕ್ಷ ರೂಪಾಯಿಗಳವರೆಗೆ ಇದೆ. ಌಂಡ್ ಕ್ರಿಕೆಟ್ ಜಗತ್ತಿನಲ್ಲಿ ಹೈಯೆಸ್ಟ್ ಪೇಯ್ಡ್ ಮ್ಯಾಚ್​ಗಳೇ ಇಂಡೋ-ಪಾಕ್ ಪಂದ್ಯಗಳು.

ಭಾರತ-ಪಾಕ್ ಪಂದ್ಯ ನಡೆಯದೇ ಇದ್ರೆ 2,200 ಕೋಟಿ ರೂ ನಷ್ಟ!

ಐಸಿಸಿ ಟೂರ್ನಿಗಳು ಅಂತಾ ಬಂದಾಗ ಅರ್ಧಕ್ಕಿಂತ ಜಾಸ್ತಿ ಪ್ರಾಫಿಟ್ ಬರೋದೇ ಇಂಡೋ-ಪಾಕ್ ಮ್ಯಾಚ್​ಗಳಿಂದ. ಪ್ರಸಾರ ಹಕ್ಕು, ಜಾಹೀರಾತು, ಪ್ರಾಯೋಜಕತ್ವ, ಟಿಕೆಟ್ ಆದಾಯ ಮತ್ತು ಕಾನೂನುಬದ್ಧ ಬೆಟ್ಟಿಂಗ್(ಭಾರತದ ಹೊರಗಡೆ) ಸೇರಿ ಹಲವು ವಿಧದಲ್ಲಿ ಆದಾಯ ಸಿಗಲಿದೆ. ಇಂಥಾ ಟೈಮಲ್ಲೇ ಪಂದ್ಯವೇ ನಡೆಯದೇ ಇದ್ರೆ ದೊಡ್ಡ ಮಟ್ಟದ ನಷ್ಟ ಕೂಡ ಆಗುತ್ತೆ. ಬರೋಬ್ಬರಿ 2,200 ಕೋಟಿ ನಷ್ಟವಾಗಬಹುದು ಅಂತಾ ಅಂದಾಜಿಸಲಾಗಿದೆ. ಐಸಿಸಿಗೆ ಅಷ್ಟೇ ಅಲ್ದೇ ಪಾಕ್‌ ಕ್ರಿಕೆಟ್‌, ಬಿಸಿಸಿಐ, ಶ್ರೀಲಂಕಾ, ಟೂರ್ನಿಯ ಪ್ರಾಯೋಜಕರು, ಜಾಹೀರಾತುದಾರರಿಗೂ ಅನ್ವಯಿಸಲಿದೆ. ಇಂಡೋಪಾಕ್ ಪಂದ್ಯಗಳಿಗೆ ಪ್ರತಿ  ಲಾಸ್ಟ್ ಮೂಮೆಂಟ್​ವರೆಗೂ ಪಾಕಿಸ್ತಾನ ಮೊಂಡಾಟ ಆಡ್ಕೊಂಡು ಪಂದ್ಯ ರದ್ದಾದ್ರೆ ಪ್ರಾಯೋಜಕರು, ಪ್ರಸಾರಕರಿಗೆ ಐಸಿಸಿ ನಷ್ಟ ಪರಿಹಾರ ನೀಡಬೇಕಾಗುತ್ತದೆ. ಟಿಕೆಟ್‌ ಮಾರಾಟದ ಮೂಲಕ ಬರಬೇಕಿದ್ದ ಹಣ ಕೈತಪ್ಪಲಿದೆ. ಪಂದ್ಯ ಆಯೋಜನೆ ಹೊಣೆ ಹೊತ್ತಿದ್ದ ಲಂಕಾ ಕ್ರಿಕೆಟ್‌ ಮಂಡಳಿ ಐಸಿಸಿ ಬಳಿ ಪರಿಹಾರ ಕೇಳಬಹುದು. ಐಸಿಸಿ ಸದಸ್ಯ ದೇಶಗಳಿಗೂ ವಾರ್ಷಿಕ ಆದಾಯದಲ್ಲಿ ಕಟ್ ಆಫ್ ಮಾಡ್ಬೇಕಾಗುತ್ತೆ. ಐಸಿಸಿ ಆದಾಯವನ್ನೇ ನಂಬಿಕೊಂಡಿರುವ ವಿಂಡೀಸ್‌, ಸ್ಕಾಟ್ಲೆಂಡ್‌, ಜಿಂಬಾಬ್ವೆ, ನಮೀಬಿಯಾ, ಆಫ್ಘನ್‌ ಸೇರಿದಂತೆ ಹಲವು ಮಂಡಳಿಗಳೂ ನಷ್ಟ ಅನುಭವಿಸಲಿದೆ. ಸೋ ಈ ಎಲ್ಲಾ ಬೆಳವಣಿಗೆಗಳನ್ನ ನೋಡ್ತಿದ್ರೆ ಪಾಕ್​ಗೆ ಬ್ಯಾಕ್ ಫೈರ್ ಆಗೋ ಎಲ್ಲಾ ಚಾನ್ಸಸ್ ಇದೆ.

ಪಾಕಿಸ್ತಾನದಿಂದ ಆಗ್ತಿರೋ ನಷ್ಟ!

  1. ಭಾರತ-ಪಾಕಿಸ್ತಾನ ಐಸಿಸಿ ಪಂದ್ಯದ ಅಂದಾಜು ಮೌಲ್ಯ
  • 250 ಮಿಲಿಯನ್ ಯುಎಸ್ ಡಾಲರ್ (2,200+ ಕೋಟಿ ರೂ.)

 

  1. ಪ್ರಸಾರಕರ ಜಾಹೀರಾತು ಆದಾಯ
  • ಸುಮಾರು 200-250 ಕೋಟಿ ರೂ.

 

  1. ಪಂದ್ಯದ ವೇಳೆ 10-ಸೆಕೆಂಡ್ ಜಾಹೀರಾತು ಸ್ಲಾಟ್‌ ವೆಚ್ಚ
  • 40 ಲಕ್ಷ ರೂ.ಗಳವರೆಗೆ

 

  1. ಭಾರತದ ಮಾಧ್ಯಮ ಹಕ್ಕುಗಳ ಒಪ್ಪಂದವು ಪ್ರಸ್ತುತ ಮರು ಮಾತುಕತೆಯಲ್ಲಿದೆ
  • 3 ಬಿಲಿಯನ್ ಯುಎಸ್ ಡಾಲರ್ (ಜಿಯೋಸ್ಮಾ‌ರ್-ಐಸಿಸಿ)

 

  1. ಪಿಸಿಬಿ ಮೇಲೆ ಐಸಿಸಿ ವಿಧಿಸಬಹುದಾದ ಆರ್ಥಿಕ ದಂಡಗಳು
  • ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ, ಐಸಿಸಿ ನಿಯಮಗಳ ಅಡಿಯಲ್ಲಿ ಅನುಮತಿಸಲಾಗಿದೆ

 

  1. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾರ್ಷಿಕ ಆದಾಯ
  • 5 ಮಿಲಿಯನ್ ಯುಎಸ್ ಡಾಲರ್

 

  1. ಭಾರತ-ಪಾಕಿಸ್ತಾನ ನಡುವಿನ ಒಂದು ಪಂದ್ಯದ ಮೌಲ್ಯ vs ಪಿಸಿಬಿ ವಾರ್ಷಿಕ ಆದಾಯ
  • 250 ಮಿಲಿಯನ್ ಡಾಲರ್ vs 35.5 ಮಿಲಿಯನ್ ಡಾಲರ್

ಭಾರತ-ಪಾಕ್ ಪಂದ್ಯಗಳು ಅಂದ್ರೇನೇ ಹಾಗೆ. ಹೈಫೀವರ್ ಇರುತ್ತೆ. ವಿಶ್ವಾದ್ಯಂತ 1+ ಬಿಲಿಯನ್ ವೀಕ್ಷಕರು ಈ ಪಂದ್ಯ ನೋಡ್ತಾರೆ. ಹೀಗಾಗಿ  ಹಣದ ಹೊಳೆಯೇ ಹರಿದು ಬರುತ್ತೆ. ಇಂಥಾ ಟೈಮಲ್ಲಿ ಪಾಕಿಸ್ತಾನ ಕಳ್ಳಾಟ ಆಡ್ತಿರೋದ್ರಿಂದ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಅನುಭವಿಸೋಕೆ ರೆಡಿಯಾಗ್ಬೇಕಿದೆ.

ಪಾಕ್ ಹುಚ್ಚಾಟಕ್ಕೆ ತಿರುಗಿ ಬಿದ್ರೆ ಪಾಕ್ ತಂಡವೇ ಬ್ಯಾನ್!

ಭಾರತದಲ್ಲಿ ಪಂದ್ಯ ಆಡಲ್ಲ ಕ್ಯಾತೆ ತೆಗೆದಿದ್ದು ಬಾಂಗ್ಲಾ. ಟೂರ್ನಿ ಬಿಟ್ಟು ಅವ್ರೇ ಸುಮ್ನಿದ್ದಾರೆ. ಆದ್ರೆ ಮಿಡ್ಲಲ್ಲಿ ಬಂದ ಪಾಕಿಸ್ತಾನ ದಿನಕ್ಕೊಂದು ಅವತಾರ ಆಡ್ತಿದೆ. ಪಾಕಿಸ್ತಾನದ ಈ ನಕ್ರಾದಿಂದ ಇತರೆ ಕ್ರಿಕೆಟ್ ಮಂಡಳಿಗಳೂ ಸಿಟ್ಟಾಗಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ಪಾಕಿಸ್ತಾನ ತಂಡವನ್ನು ಯಾವುದೇ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧ ಮಾಡೋ ಚಿಂತನೆಯಲ್ಲೂ ಇದೆ. ಯಾಕಂದ್ರೆ ಇತರ ಸದಸ್ಯ ಮಂಡಳಿಗಳೂ ಅಸಮಾಧಾನ ವ್ಯಕ್ತಪಡಿಸಿವೆ. ಹೀಗಾಗಿ ಟಿ-20 ವಿಶ್ವಕಪ್​ನಲ್ಲಿನ ಹುಚ್ಚಾಟ ಅವ್ರ ಭವಿಷ್ಯವನ್ನೇ ಖತಂ ಮಾಡ್ಬೋದು. ಸೋ ಕುತ್ತಿಗೆಗೆ ಬರೋವರೆಗೂ ಡ್ರಾಮಾ ಮಾಡ್ಕೊಂಡು ಲಾಸ್ಟ್ ಮೂಮೆಂಟ್​ನಲ್ಲಿ ನಾವು ಭಾರತದ ವಿರುದ್ಧ ಆಡ್ತೀವಿ ಅಂತಾ ಕಣಕ್ಕಿಳಿದ್ರೂ ಇಳಿಬೋದು. ಇದನ್ನೇ ಸುನಿಲ್ ಗವಾಸ್ಕರ್ ಕೂಡ ಹೇಳಿದ್ದಾರೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬೇರೆ ಬೇರೆ ರೀತಿ ರೆಸ್ಪಾನ್ಸ್ ಬರುತ್ತೆ.  ತಮ್ಮದೇ ಕ್ರಿಕೆಟಿಗರು ಮತ್ತು ಮಾಜಿ ಕ್ರಿಕೆಟಿಗರು ಕ್ಲಾಸ್ ತಗೊಂಡ್ರೆ ಪಾಕಿಸ್ತಾನ ತಂಡ, ಭಾರತದ ವಿರುದ್ಧ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಬಹಿಷ್ಕರಿಸಿರುವ ನಿರ್ಧಾರವನ್ನು ಕೈ ಬಿಡಬಹುದು ಎಂದಿದ್ದಾರೆ. ಒಟ್ನಲ್ಲಿ ಪಾಕಿಸ್ತಾನ ಮಾಡ್ತಿರೋ ಕುತಂತ್ರದಿಂದ ಬೇರೆ ಬೇರೆ ತಂಡಗಳಿಗೂ ಎಫೆಕ್ಟ್ ಆಗ್ತಿದೆ.

Shantha Kumari