ರೀಲ್ಸ್‌ ಮಾಡಬೇಡ ಎಂದ ಗಂಡನನ್ನು ಯೂಟ್ಯೂಬ್‌ ನೋಡಿ ಕೊಲೆ ಮಾಡಿದ್ಲು ಪಾಪಿ ಪತ್ನಿ!

ರೀಲ್ಸ್‌ ಮಾಡಬೇಡ ಎಂದ ಗಂಡನನ್ನು ಯೂಟ್ಯೂಬ್‌ ನೋಡಿ ಕೊಲೆ ಮಾಡಿದ್ಲು ಪಾಪಿ ಪತ್ನಿ!

ಈಗೀಗ ರೀಲ್ಸ್‌ ಗೀಳು ಹೆಚ್ಚಾಗಿದೆ. ರೀಲ್ಸ್‌ಗಾಗಿ ಏನು ಬೇಕಾದರೂ ಮಾಡಲು ರೆಡಿ ಇರ್ತಾರೆ. ಅನ್ನ ನೀರು ಇಲ್ಲ ಅಂದ್ರೂ ಪರವಾಗಿಲ್ಲ.. ರೀಲ್ಸ್‌ ಮಾಡ್ಬೇಕು ಅಂತಾ ಹೇಳುವವರು ಇದ್ದಾರೆ. ಇದೀಗ ಇಲ್ಲೊಂದು ಕಡೆ ರೀಲ್ಸ್‌ ಮಾಡಬೇಡ ಎಂದು ಹೇಳಿದ ಗಂಡನ ಕತೆಯನ್ನೇ ಮುಗಿಸಿದ್ದಾರೆ ಈ ಲೇಡಿ.

ಇದನ್ನೂ ಓದಿ:  ನನ್ನ ಬಳಿ ಹಣವಿಲ್ಲ.. ಅಧಿಕಾರಿಗಳಿಗೆ ಮೂಲಂಗಿಯೇ ಲಂಚ! – ತಾಲೂಕು ಕಚೇರಿ ಮುಂದೆ ಮೈಕ್‌ನಲ್ಲಿ ಅನೌನ್ಸ್ ಮಾಡಿದ ರೈತ

ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರೀಲ್ಸ್ ಮಾಡಲು ಪತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ಪತ್ನಿಯೇ ಆತನನ್ನು ಕತ್ತು ಹಿಸುಕಿ ಕೊಂದಿದಿದ್ದಾಳೆ. ಅದೂ ಕೂಡ ಯೂಟ್ಯೂಬ್‌ ನೋಡಿ ಕೊಲೆ ಮಾಡಿದ್ದಾಳೆ.

ಅಷ್ಟಕ್ಕೂ ಆಗಿದ್ದೇನು?

ಮದುವೆ ಸಮಾರಂಭದಲ್ಲಿ ಕೈಲಾಶ್  ಎಂಬಾತನ ಪತ್ನಿ ನೃತ್ಯ ಮಾಡಿದ್ದಳು. ಇದರ  ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಲು ಆಕೆ ಹೊರಟಿದ್ದಳು. ಆದ್ರೆ ಇದಕ್ಕೆ ಕೈಲಾಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಉಂಟಾದ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೋಪಗೊಂಡ ಪತ್ನಿ ಯೂಟ್ಯೂಬ್‌ನಲ್ಲಿ ಕೊಲೆಯ ವಿಧಾನಗಳನ್ನು ಹುಡುಕಿದ್ದು, ಅದೇ ರಾತ್ರಿ ಪೇಟದಿಂದ ಕೈಲಾಶ್‌ನ ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ಗಂಡನ ಶವದ ಮುಂದೆ ಅತ್ತು ಗೋಳಾಡಿದ್ದಾಳೆ.

ಜಿಲ್ಲೆಯ ಥಾಂಡ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಕೈಲಾಶ್‌ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಾಣಿಸದಿದ್ದರೂ, ಅನುಮಾನಾಸ್ಪದ ಸ್ಥಿತಿಯಲ್ಲಿ ಶವ ಕಂಡುಬಂದಿತ್ತು. ಬಳಿಕ ತಡರಾತ್ರಿ ಪತಿ-ಪತ್ನಿ ನಡುವೆ ಭಾರೀ ಜಗಳ ನಡೆದಿತ್ತು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿಯೇ ಕೈಲಾಶ್‌ನನ್ನು ಕೊಂದಿದ್ದಾಳೆ ಎಂಬ ಶಂಕೆಯ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದರು.

ಪ್ರಾಥಮಿಕ ತನಿಖೆಯಲ್ಲಿ ಪ್ರಕರಣ ಸಹಜ ಸಾವು ಎನ್ನುವಂತೆ ಕಂಡರೂ, ವಿಚಾರಣೆ ವೇಳೆ ಭಯಾನಕ ಸತ್ಯ ಹೊರಬಂದಿದೆ.  ತೀವ್ರ ವಿಚಾರಣೆಯ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆರೋಪಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರೆದಿದೆ.

Shwetha M