1 ಬಾರಿ ಮನೆ ನೋಡಲು 1 ತಿಂಗಳ ಬಾಡಿಗೆ ಕೊಡಬೇಕು! – ಬೆಂಗಳೂರಿನಲ್ಲಿ ಇದೆಂಥಾ ರೂಲ್ಸ್!‌

1 ಬಾರಿ ಮನೆ ನೋಡಲು 1 ತಿಂಗಳ ಬಾಡಿಗೆ ಕೊಡಬೇಕು! – ಬೆಂಗಳೂರಿನಲ್ಲಿ ಇದೆಂಥಾ ರೂಲ್ಸ್!‌

ಇದು ದುಬಾರಿ ದುನಿಯಾ. ಬೆಂಗಳೂರಿನಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಇನ್ನು ಬಾಡಿಗೆ ಮನೆ ಹುಡುಕುವುದು ದೊಡ್ಡ ತಲೆನೋವು. ಮನೆ ಇಷ್ಟ ಆದ್ರೆ, ಬಾಡಿಗೆ ದರ ಹೆಚ್ಚು ಇರುತ್ತೆ. ಇನ್ನು ಬಾಡಿಗೆ ಕಡಿಮೆ ಇದ್ರೆ, ಮನೆ ಚೆನ್ನಾಗಿ ಇರಲ್ಲ. ಹೀಗೆ ಒಂದಲ್ಲ ಒಂದು ಸಮಸ್ಯೆ ಇರುತ್ತೆ. ಇದೀಗ ಇಲ್ಲೊಬ್ಬರು ಬಾಡಿ ಮನೆ ನೋಡಲು ಹೋಗಿದ್ದು, ವಿಚಿತ್ರ ಅನುಭವ ಆಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಸ್ಕೂಟರ್‌ಗೆ ಖಾಸಗಿ ಬಸ್‌ ಡಿಕ್ಕಿ! – ಮದುವೆ ನಿಶ್ಚಯವಾಗಿದ್ದ ಯುವತಿ ದುರಂತ ಅಂತ್ಯ!

ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರದಲ್ಲಿ ದುಡಿದ ಹಣವನ್ನೆಲ್ಲವೂ ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆ. ಆದರೆ ಮನೆ ಮಾಲೀಕರು ತಿಂಗಳ ಬಾಡಿಗೆ ಸಾವಿರ ಅಲ್ಲ, ಲಕ್ಷ ರೂ ಹೇಳ್ತಾರೆ. ಇದೀಗ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿರುವಾಗ ಎದುರಾದ ಅನಿರೀಕ್ಷಿತ ಘಟನೆಯ ಬಗ್ಗೆ ವ್ಯಕ್ತಿಯೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಮನೆ ಹೇಗಿದೆ ಎಂದು ನೋಡಲು ಒಂದು ತಿಂಗಳ ಬಾಡಿಗೆ ನೀಡಬೇಕೆಂದು ಮನೆ ಮಾಲೀಕ ಹೇಳಿದ್ದಾರೆ. ಇದನ್ನ ಕೇಳಿ ಆ ವ್ಯಕ್ತಿ ಶಾಕ್‌ ಆಗಿದ್ದಾರೆ.

ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ, ಫ್ಲಾಟ್ ನೋಡಲು ಒಂದು ತಿಂಗಳ ಬಾಡಿಗೆ ಕೇಳಿದೆ  ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಘಟನೆ ಸುಮಾರು ಎರಡು ತಿಂಗಳ ಹಿಂದೆ ನಡೆದಿತ್ತು. ಬಹುಮಹಡಿ ಕಟ್ಟಡದ ಸುತ್ತಲೂ ನಡೆದುಕೊಂಡು ಹೋಗುತ್ತಿದ್ದಾಗ ಭದ್ರತಾ ಸಿಬ್ಬಂದಿ ಬಳಿ ಯಾವುದಾದರೂ ಫ್ಲಾಟ್‌ಗಳು ಖಾಲಿ ಇವೆಯೇ ಎಂದು ಕೇಳಿದೆ. ಭದ್ರತಾ ಸಿಬ್ಬಂದಿ ಒಂದು ಫ್ಲಾಟ್ ಖಾಲಿಯಿದೆ ಎಂದು ಹೇಳಿ ಮನೆಮಾಲೀಕರ ಫೋನ್ ನಂಬರ್ ಕೊಟ್ಟರು. ಮಾಲೀಕರಿಗೆ ಕರೆ ಮಾಡಿದ ಬಳಿಕ ಭದ್ರತಾ ಸಿಬ್ಬಂದಿ ಫ್ಲಾಟ್ ತೋರಿಸಿದರು. ಸಂಭಾಷಣೆಯ ಸಮಯದಲ್ಲಿ ಯಾವುದೇ ಶುಲ್ಕ, ಠೇವಣಿ ಅಥವಾ ವಿಶೇಷ ಶುಲ್ಕದ ಉಲ್ಲೇಖವಿರಲಿಲ್ಲ. ಆದರೆ ಸೆಕ್ಯೂರಿಟಿ ಗಾರ್ಡ್ ವಿಚಿತ್ರ ಬೇಡಿಕೆ ಇಟ್ಟರು. ಅಪಾರ್ಟ್ಮೆಂಟ್ ತೋರಿಸಲು ನಾನು ಒಂದು ತಿಂಗಳ ಬಾಡಿಗೆಯನ್ನು ಪಾವತಿಸಬೇಕೆಂದು ಭದ್ರತಾ ಸಿಬ್ಬಂದಿ ನನಗೆ ಹೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ. ಇದು ದಲ್ಲಾಳಿ ಅಥವಾ ಯಾವುದೇ ಅಧಿಕೃತ ವ್ಯವಹಾರವಾಗಿರಲಿಲ್ಲ. ಬಾಗಿಲು ತೆರೆದು ಫ್ಲಾಟ್ ತೋರಿಸಲು ಹಣ ನೀಡಬೇಕೇ? ಎಂದು ಇಲ್ಲಿ ಬರೆದಿದ್ದಾರೆ.

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇಲ್ಲಿಗೆ ದುಡ್ಡಿಗೆ ಮಾತ್ರ ಬೆಲೆ ಎಂದಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಎಲ್ಲರೂ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ನೈತಿಕವಾಗಿ ದಿವಾಳಿಯಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮನೆ ಮಾಲೀಕರು ಬಾಡಿಗೆ ಹೆಸರಿನಲ್ಲಿ ಜನರಿಂದ ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡುತ್ತಿದ್ದಾರೆ.

Shwetha M