‘ಒಂದು ದೇಶ-ಒಂದು ಪೊಲೀಸ್ ಸಮವಸ್ತ್ರ’ಕ್ಕೆ ರಾಜ್ಯ ಗೃಹ ಇಲಾಖೆ ಅಸ್ತು!
ಬದಲಾಗುತ್ತಾ ಕರ್ನಾಟಕ ಪೊಲೀಸರ ಸಮವಸ್ತ್ರ..?

‘ಒಂದು ದೇಶ-ಒಂದು ಪೊಲೀಸ್ ಸಮವಸ್ತ್ರ’ಕ್ಕೆ ರಾಜ್ಯ ಗೃಹ ಇಲಾಖೆ ಅಸ್ತು!ಬದಲಾಗುತ್ತಾ ಕರ್ನಾಟಕ ಪೊಲೀಸರ ಸಮವಸ್ತ್ರ..?

ಬೆಂಗಳೂರು: ಕರ್ನಾಟಕ ಪೊಲೀಸ್ ಸಿಬ್ಬಂದಿಯ ಸಮವಸ್ತ್ರ ಬದಲಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಕೇಂದ್ರ ಗೃಹ ಇಲಾಖೆ ಸಿದ್ಧಪಡಿಸಿರುವ ಪೊಲೀಸ್ ಇಲಾಖೆಯಲ್ಲಿ ‘ಒಂದು ದೇಶ – ಒಂದು ಸಮವಸ್ತ್ರ’ ನೀತಿಯನ್ನ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ರಾಜ್ಯದ ಗೃಹ ಇಲಾಖೆ ಸಮ್ಮತಿ ಸೂಚಿಸಿದೆ.

ಇದನ್ನೂ ಓದಿ: ಮದ್ಯ ಖರೀದಿ ಮತ್ತು ಸೇವನೆ ವಯಸ್ಸಿನ ಮಿತಿ ಇಳಿಕೆ – ಅಬಕಾರಿ ಸಚಿವ ಹೇಳಿದ್ದೇನು? 

ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿರುವ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರಧಾನಿಯವರ ಸಲಹೆಯಂತೆ ದೇಶದ ಎಲ್ಲ ರಾಜ್ಯಗಳಲ್ಲೂ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ನಿಗದಿಪಡಿಸುವುದು ಅಗತ್ಯವಾಗಿದೆ. ಇದು ದೇಶದ ಕಾನೂನು ಅನುಷ್ಠಾನ ಸಂಸ್ಥೆಗಳ ಸಿಬ್ಬಂದಿಯ ಗುರುತಿನಲ್ಲಿ ಏಕತೆ ತರಲಿದೆ. ದೇಶದಲ್ಲಿ ಒಂದು ಸಮವಸ್ತ್ರ ನೀತಿ ಜಾರಿಗೊಂಡ ದಿನದಿಂದಲೇ ಕರ್ನಾಟಕದಲ್ಲಿ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಸ್ತಾವನೆ ಕುರಿತು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.  ಪೊಲೀಸರಿಗೆ ದೇಶದಾದ್ಯಂತ ಒಂದೇ ಸಮವಸ್ತ್ರ ನೀತಿ ಜಾರಿಗೊಳಿಸುವ ಕುರಿತು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಅಭಿ‍ಪ್ರಾಯ ಕೇಳಿತ್ತು. ಒಳಾಡಳಿತ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ನಾನು ಸಮ್ಮತಿ ಸೂಚಿಸಿದ್ದು, ಅದರಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

suddiyaana