ಮಧ್ಯಾಹ್ನ ಮಲಗಿ ಸಂಜೆ ಎದ್ದ ಬಾಲಕ! – ಬೆಳಗ್ಗೆ ಆಯ್ತು ಅಂದುಕೊಂಡು ಸ್ಕೂಲ್‌ಗೆ ಹೊರಟೇಬಿಟ್ಟ!

ಮಧ್ಯಾಹ್ನ ಮಲಗಿ ಸಂಜೆ ಎದ್ದ ಬಾಲಕ! – ಬೆಳಗ್ಗೆ ಆಯ್ತು ಅಂದುಕೊಂಡು ಸ್ಕೂಲ್‌ಗೆ ಹೊರಟೇಬಿಟ್ಟ!

ಕೆಲವರಿಗೆ ಮಧ್ಯಾಹ್ನ ಮಲಗುತ್ತಾರೆ. ಇನ್ನೂ ಕೆಲವರಿಗೆ ಮಧ್ಯಾಹ್ನ ಮಲಗುವ ಅಭ್ಯಾಸ ಇರಲ್ಲ. ಅಪರೂಪಕ್ಕೆ ಮಲಗಿದ್ರೂ, ಸಡನ್‌ ಆಗಿ ಎಚ್ಚರಗೊಂಡಾಗ ನಾವು ಎಲ್ಲಿರುತ್ತೇವೆ ಅನ್ನೋದನ್ನೇ ಮರೆತು ಬಿಡ್ತಾರೆ. ಇದೀಗ ಇಲ್ಲೊಂದು ಕಡೆ, ಬಾಲಕನೊಬ್ಬ ಮಧ್ಯಾಹ್ನ ಮಲಗಿದ್ದು, ಸಂಜೆ ಎಚ್ಚರಗೊಂಡಿದ್ದಾನೆ.  ಬಳಿಕ ಲೇಟ್‌ ಆಯ್ತು ಅಂತ ಸಂಜೆ ಸ್ಕೂಲ್‌ ಗೆ ಹೊರಟಿದ್ದಾಳೆ.

ಇದನ್ನೂ ಓದಿ: ಸ್ವಚ್ಛತಾ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಗಿಫ್ಟ್‌ ನೀಡಿದ ಸೂಪರ್‌ಸ್ಟಾರ್‌ ರಜನಿಕಾಂತ್‌!

ಕೆಲವೊಂದು ಮಧ್ಯಾಹ್ನದ ನಿದ್ದೆಗಳು ನಮ್ಮನ್ನು ಸರಿಯಾಗೇ ಕನ್ಫ್ಯೂಸ್ ಮಾಡಿಬಿಡುತ್ತವೆ. ರಾತ್ರಿ ಹೊತ್ತು ಎಚ್ಚರವಾದರೆ, ‘ಅಯ್ಯೋ ಬೆಳಗ್ಗೆ ಆಗಿಬಿಡ್ತಾ’ ಅಂತಾ ಗಾಬರಿಯಾಗಿದ್ದು ನಮ್ಮಲ್ಲಿ ಹಲವರಿಗೆ ಅನುಭವ ಆಗಿರುತ್ತೆ. ಇದೀಗ ಇಲ್ಲೊಬ್ಬ ಸ್ಕೂಲ್ ಹುಡುಗ ಕೂಡ, ಇದೇ ರೀತಿ ಕನ್ಫ್ಯೂಸ್ ಆಗಿ ನೇರವಾಗಿ ಶಾಲೆಗೇ ಹೊರಟುಬಿಟ್ಟಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚೆನ್ನಾಗಿ ನಿದ್ದೆ ಮಾಡಿ ಎದ್ದ ಈ ಬಾಲಕನಿಗೆ ಆಗ ಸಂಜೆ 7 ಗಂಟೆಯಾಗಿತ್ತು. ಆದರೆ, ಆತ ಬೆಳಗ್ಗೆ 7 ಗಂಟೆ ಎಂದುಕೊಂಡಿದ್ದಾನೆ. ತಕ್ಷಣವೇ ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು, ಬ್ಯಾಗ್ ಹೆಗಲಿಗೇರಿಸಿ, ಪಕ್ಕಾ ಕಾನ್ಫಿಡೆನ್ಸ್‌ನಿಂದ ಶಾಲೆ ಕಡೆಗೆ ನಡೆಯಲು ಶುರುಮಾಡಿದ್ದಾನೆ. ಅವನಿಗೆ ಸಮಯದ ಪರಿವೆಯೇ ಇರಲಿಲ್ಲ. ಇದನ್ನು ನೋಡಿದ ಊರಿನ ಕೆಲ ಯುವಕರು, ಈ ದೃಶ್ಯವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಇಷ್ಟೊಂದು ವೈರಲ್ ಆಗಲು ಮುಖ್ಯ ಕಾರಣ, ಆ ಹುಡುಗನ ಗಂಭೀರತೆ ಮತ್ತು ದೃಢ ನಿರ್ಧಾರ. ಪ್ರತಿದಿನದಂತೆ ಸ್ನಾನ ಮಾಡಿ, ಯೂನಿಫಾರ್ಮ್ ಧರಿಸಿ, ಬ್ಯಾಗ್‌ನೊಂದಿಗೆ ಶಾಲೆಗೆ ಹೊರಟಿದ್ದ. ದಾರಿಯಲ್ಲಿ ಕೆಲವರು ಆ ಬಾಲಕನನ್ನು ತಡೆಯಲು ಪ್ರಯತ್ನಿಸಿದರೂ, ಆತ ಯಾವುದನ್ನೂ ಕೇರ್ ಮಾಡದೆ ಶಾಲೆ ಕಡೆಗೆ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

Shwetha M