ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ – ಪತ್ನಿಯ ನಡತೆ ಶಂಕಿಸಿ ತಲೆ ಬೋಳಿಸಿದ ಪಾಪಿ ಪತಿ!

ಗಂಡ – ಹೆಂಡತಿ ಅಂದ್ಮೇಲೆ ಜಗಳ ಕಾಮನ್. ಆದ್ರೆ ದಂಪತಿ ಮಧ್ಯೆ ಅನುಮಾನ ಎಂಬ ಭೂತ ವಕ್ಕರಿಸಿಕೊಂಡ್ರೆ ಇಬ್ಬರ ಜೀವನವೂ ನಾಶವಾದಂತೆ ಲೆಕ್ಕ. ಇಲ್ಲೊಬ್ಬ ಪತಿರಾಯನಿಗೆ ಹೆಂಡತಿ ಮೇಲೆ ಅನುಮಾನ. ಹೆಂಡತಿ ಶೀಲ, ನಡತೆ ಬಗ್ಗೆ ಸಂಶಯಗೊಂಡ ಪತಿರಾಯ ಆಕೆಯ ತಲೆ ಬೋಳಿಸಿದ್ದಾನೆ.
ಇದನ್ನೂ ಓದಿ: ನೂರಾರು ಜೇನುನೊಣ ಕಚ್ಚಿದ್ರೂ 20 ಮಕ್ಕಳನ್ನು ರಕ್ಷಿಸಿದ ಮಹಿಳೆ! – ಬದುಕುಳಿಯಲೇ ಇಲ್ಲ ಮಹಾತಾಯಿ!
ಈ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ನಡೆದಿದೆ. ಹೆಂಡತಿಯ ಶೀಲ, ನಡತೆ ಮೇಲೆ ಸಂಶಯಗೊಂಡ ಪತಿ ಹೆಂಡತಿಯ ತಲೆ ಬೋಳಿಸಿ, ವಿಕೃತಿ ಮೆರೆದಿದ್ದಾನೆ. 31 ವರ್ಷದ ಉಮೇಶ್ ಎಂಬಾತ, 26 ವರ್ಷದ ತನ್ನ ಪತ್ನಿಯ ತಲೆ ಬೋಳಿಸಿ, ಹಲ್ಲೆ ನಡೆಸಿದ್ದಾನೆ. ಜೊತೆಗೆ ಕೊಲೆ ಮಾಡಲು ಕೂಡ ಯತ್ನಿಸಿದ್ದಾನಂತೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಇನ್ನು ಗಂಡ, ಹೆಂಡತಿ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿದ್ದು, ಇದು ಆಕೆಯ ತವರು ಮನೆಯವರಿಗೂ ತಿಳಿದಿತ್ತು. ತವರು ಮನೆಯವರು ಅಳಿಯನಿಗೆ ಹಲವು ಬಾರಿ ಬುದ್ಧಿವಾದವನ್ನೂ ಹೇಳಿದ್ದರಂತೆ. ಆದ್ರೂ ಪತಿ ಉಮೇಶ್ ಪತ್ನಿಗೆ ಕಿರುಕುಳ ನೀಡೋದು ಬಿಟ್ಟಿರಲಿಲ್ಲ. ಕಳೆದ ತಿಂಗಳು ಜನವರಿ 31ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ ಮನೆಗೆ ಬುತ್ತಿ ತೆಗೆದುಕೊಂಡು ಹೋಗಲು ಬಂದಿದ್ದ ಕಬ್ಬಿನ ಗ್ಯಾಂಗ್ ಮನ್ ಮೇಲೆ ಪತಿ ಉಮೇಶ್ ಅನುಮಾನ ಪಟ್ಟಿದ್ದಾನೆ. ಬಾಗಿಲು ಹಾಕಿಕೊಂಡು ಬುತ್ತಿ ಕೊಡಲು ತಡ ಯಾಕೆ ಆಯ್ತು ಎಂದು ಹೆಂಡತಿ ಜೊತೆ ಗಲಾಟೆ ಮಾಡಿದ್ದಾನಂತೆ.
ಈ ವೇಳೆ ಪತ್ನಿ ಜೊತೆ ಉಮೇಶ್ ಗಲಾಟೆ ಮಾಡಿದ್ದಾನೆ. ಬಳಿಕ ಜಗಳ ವಿಕೋಪಕ್ಕೆ ಹೋಗಿ ಹೆಂಡತಿಯ ತಲೆ ಬೋಳಿಸಿದ್ದಾನೆ. ಮನೆಯಲ್ಲೇ ಇರುವ ಎಲೆಕ್ಟ್ರಿಕ್ ಟ್ರಿಮ್ಮರ್ನಿಂದ ಹೆಂಡತಿಯ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾನೆ. ಅಲ್ಲದೇ ಹಲ್ಲೆ ನಡೆಸಿ, ಜೀವ ಬೆದರಿಕೆ ಕೂಡ ಹಾಕಿದ್ದಾನಂತೆ. ಸದ್ಯ ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಉಮೇಶ್ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ನೋಡಿರಿ

