ಜಯಂತ್ ಕರಾಳ ಮುಖ ಬಯಲು ಮಾಡುತ್ತಾ ದೆವ್ವ – ಪ್ರೇತಾತ್ಮ ನೋಡಿ ಬೆಚ್ಚಿಬಿದ್ದ ಸೈಕೋ ಜಯಂತ್

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಒಂದೆಡೆ ವಿಶ್ವನ ಮನೆಯಲ್ಲಿ ಶೋಕ ಆವರಿಸಿದೆ. ಆದರೆ, ಭಾವನಾ ಬಾಳಲ್ಲಿ ತಂಗಾಳಿ ಬೀಸುವ ಲಕ್ಷಣ ಕಾಣುತ್ತಿದೆ. ಜೊತೆಗೆ ಚಿನ್ನುಮರಿಗೆ ನ್ಯಾಯ ಸಿಗುವ ಸಮಯ ಹತ್ತಿರವಾಗುತ್ತಿದೆ.
ಇದನ್ನೂ ಓದಿ:ಪಾಕ್ನಲ್ಲಿ ಧುರಂಧರ್ #1 ಟ್ರೆಂಡ್! – ಬ್ಯಾನ್ ಮಾಡಿದ್ರೂ ಇಷ್ಟವಾಗಿದ್ದು ಹೇಗೆ?
ಜಯಂತ್ ದುಷ್ಟತನಕ್ಕೆ ವಿಶ್ವನ ಮನೆ ಶೋಕಸಾಗರವಾಗಿದೆ. ಲಲಿತಮ್ಮನ ಸಾವಿನಿಂದ ಇಡೀ ಮನೆ ಕಂಗೆಟ್ಟಿದೆ. ಆದರೆ, ಮಾಡಿದ ಪಾಪಕ್ಕೆ ಜಯಂತ್ ತಕ್ಕ ಶಿಕ್ಷೆ ಅನುಭವಿಸಲೇಬೇಕಿದೆ. ಹೀಗಾಗಿ ಜಯಂತ್ ನನ್ನು ಮಧ್ಯರಾತ್ರಿ ಕಾಡುತ್ತಿದೆ ಒಂದು ಪ್ರೇತಾತ್ಮ. ಲಲಿತಾಳನ್ನು ಕೊಂದಿರುವ ಜಯಂತ್, ಸಾಕ್ಷ್ಯ ನಾಶವಾಗಿದೆ ಎಂದು ಭಾವಿಸಿದ್ದಾನೆ. ಆದರೆ, ಮಾಡಿದ ತಪ್ಪು ಆತನನ್ನು ದಿನೇ ದಿನೇ ಕಾಡುತ್ತಿದೆ. ಜೊತೆಗೆ ಇದೀಗ ಸೈಕೋನ ಲಲಿತಾಳ ಪ್ರೇತಾತ್ಮ ಕಾಡುತ್ತಿದೆ. ಈ ಭಯದಿಂದ ತನ್ನ ತಪ್ಪನ್ನು ಜಯಂತ್ ಒಪ್ಪಿಕೊಳ್ಳುತ್ತಾನಾ ಎಂಬ ಕುತೂಹಲ ಗರಿಗೆದರಿದೆ.
ಚಿನ್ನುಮರಿಗಾಗಿ ಸೈಕೋ ತರ ಆಡುವ ಜಯಂತ್ಗೆ ನೆಮ್ಮದಿ ಇಲ್ಲದಾಗಿದೆ. ಇದಾಗಲೇ ಸಂತೋಷ್ ಈ ವಿಡಿಯೋ ರೆಕಾರ್ಡ್ ಮಾಡಿಕೊಂಡು ಜಯಂತ್ಗೆ ಬ್ಲ್ಯಾಕ್ಮೇಲ್ ಮಾಡಿ ದುಡ್ಡನ್ನು ವಸೂಲಿ ಮಾಡಿಯಾಗಿದೆ. ಈಗ ಅದರ ಸಾಕ್ಷ್ಯಾಧಾರಗಳೆಲ್ಲವೂ ನಾಶವಾಗಿದೆ ಎನ್ನುವ ಸಂತೋಷದಲ್ಲಿ ಜಯಂತ್ ಇದ್ದರೂ, ಪ್ರೇತಾತ್ಮ ಅವನನ್ನು ಬದುಕಲು ಬಿಡುತ್ತಿಲ್ಲ. ಲಲಿತಾನನ್ನು ಸಾಯಿಸಿದ ನಿನ್ನನ್ನು ನಾನು ಸಾಯಿಸುತ್ತೇನೆ ಎಂದು ಆತ್ಮವೊಂದು ಮಧ್ಯರಾತ್ರಿ ಜಯಂತ್ಗೆ ಬಂದು ಕಾಟ ಕೊಟ್ಟಿದೆ. ಅದೇ ಗಿಲ್ಟ್ ಜಯಂತ್ನನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಪ್ರೇತಾತ್ಮ ಬಂದ ರೀತಿಯಲ್ಲಿ ಅವನಿಗೆ ಕಾಣಿಸಿದೆ. ಮಲಗಲು ಆಗದೇ ಶಾಂತಮ್ಮನಿಗೆ ಪ್ರೇತಾತ್ಮ ಇರೋದು ನಿಜನಾ ಎಂದು ಪ್ರಶ್ನಿಸಿದಾಗ, ಆಕೆ ಹೌದು. ಯಾವುದಾದರೂ ಆತ್ಮಕ್ಕೆ ನೆಮ್ಮದಿ ಸಿಗದಾಗ ಹೀಗೆ ಬರುತ್ತದೆ ಎಂದಿದ್ದಾಳೆ. ಇದೀಗ ಜಯಂತ್ ಲಲಿತಮ್ಮನೇ ದೆವ್ವವಾಗಿ ಬಂದು ಕಾಡುತ್ತಿದೆ ಎಂದು ಭಾವಿಸಿ ಹೆದರಿ ಕಂಗಾಲಾಗಿದ್ದಾನೆ.

ನೋಡಿರಿ

