ಪದೆ ಪದೇ ಆಯಾಸ ಆಗ್ತಿದ್ಯಾ? – ಎಚ್ಚರ.. ನಿಮಗೆ ಈ ಸಮಸ್ಯೆ ಕಾಣಿಸಿಕೊಂಡಿರಬಹುದು!

ನಾವು ಆರೋಗ್ಯವಾಗಿ ಇರಬೇಕಂದ್ರೆ ಉತ್ತಮ ಆಹಾರ, ಜೀವನ ಶೈಲಿ ಜೊತೆಗೆ ನಿದ್ರೆಯೂ ಮುಖ್ಯ.. ಸರಿಯಾಗಿ ನಿದ್ದೆ ಮಾಡಿದ್ರೆ, ಅನಾರೋಗ್ಯ ನಮ್ಮನ್ನ ಕಾಡುತ್ತೆ ಅನ್ನೋದು ಎಲ್ಲರಿಗೂ ಗೊತ್ತು.. ಆದ್ರೆ ನಿತ್ಯ ಸರಿಯಾಗಿ ನಿದ್ರಿಸಿದ್ರೂ ನಿಮಗೆ ಆಯಾಸ ಕಾಣಿಸಿಕೊಂಡ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಅಪಾಯಕಾರಿ ರೋಗದ ಲಕ್ಷಣವಾಗಿರಬಹುದು.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಆರ್ ಪುರದಿಂದ ಹೊಸಕೋಟೆಗೆ 16 ಕಿಮೀ ಮೆಟ್ರೋ ಡಬಲ್ ಡೆಕ್ಕರ್ ಫ್ಲೈಓವರ್!
ಸರಿಯಾಗಿ ನಿದ್ರೆ ಮಾಡದಿದ್ರೆ ಅನಾರೋಗ್ಯ ನಿಮ್ಮನ್ನ ಕಾಡುತ್ತೆ.. ಸುಸ್ತು, ಆಲಸ್ಯ, ತಲೆನೋವು ನಿಮ್ಮನ್ನ ಬಾದಿಸುತ್ತೆ. ಆದ್ರೆ ಸರಿಯಾಗಿ ನಿದ್ದೆ ಮಾಡಿದ್ರೂ ಪದೇ ಪದೇ ಆಯಾಸವೆನಿಸಿದರೇ, ಇದು ಅಪಾಯಕಾರಿ ರೋಗದ ಗುಣಲಕ್ಷಣವಾಗಿರಬಹುದು. ನಿಮಗೂ ಇದೇ ರೀತಿಯ ಅನುಭವವಾಗಿದ್ದರೆ, ಅದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ದಿನಕ್ಕೆ 7–8 ಗಂಟೆಗಳ ನಿದ್ರೆ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಸಾಕಷ್ಟು ನಿದ್ರೆ ಮಾಡಿದರೂ ಆಯಾಸ ಹೋಗದಿದ್ದರೆ, ಇದು ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಿರುತ್ತದೆ. ಭಾರತದಲ್ಲಿ ಬಹುತೇಕ ಮಹಿಳೆಯರು ಮತ್ತು ಅನೇಕ ಪುರುಷರು ರಕ್ತಹೀನತೆ (ಅನಿಮಿಯಾ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಮುಖ್ಯವಾಗಿ ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸದಿದ್ದಾಗ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ನೀವು ಪ್ರತಿದಿನ ಸಾಕಷ್ಟು ನಿದ್ರೆ ಮಾಡಿದರೂ ದೇಹವು ಸದಾ ದಣಿದಂತೆ ಭಾಸವಾಗುತ್ತಿದ್ದರೆ ಅದು ದೇಹಕ್ಕೆ ಕಬ್ಬಿಣದ ಕೊರತೆಯಿರುವ ಸೂಚನೆಯಾಗಿರಬಹುದು. ಕಬ್ಬಿಣದ ಕೊರತೆಯಿದ್ದರೆ ದೇಹದ ಜೀವಕೋಶಗಳಿಗೆ ಅಗತ್ಯವಾದ ಆಮ್ಲಜನಕ ತಲುಪುವುದಿಲ್ಲ. ಇದರ ಪರಿಣಾಮವಾಗಿ ಶಕ್ತಿಯ ಕೊರತೆ ಹಾಗೂ ಆಯಾಸ ಉಂಟಾಗುತ್ತದೆ. ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕ ಸರಿಯಾಗಿ ತಲುಪದಿದ್ದರೆ ಎದೆ ನೋವು, ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳೂ ಕಾಣಿಸಬಹುದು. ಕೆಲವೊಮ್ಮೆ ಹೃದಯ ಸಂಬಂಧಿ ಸಮಸ್ಯೆಗಳಿಲ್ಲದಿದ್ದರೂ ಸಹ ಎದೆ ಒತ್ತಡ ಅಥವಾ ನೋವಿನ ಅನುಭವವಾಗಬಹುದು.
ಇದಲ್ಲದೆ, ಕಬ್ಬಿಣದ ಕೊರತೆಯಿಂದ ಚರ್ಮ ಬಿಳಿ ಬಣ್ಣಕ್ಕೆ ತಿರುಗಿ, ಹೊಳಪು ಕಡಿಮೆಯಾಗುವುದು ಸಹ ಸಾಮಾನ್ಯ. ಇದು ಅನೇಕರಿಗೆ ಗಮನಿಸದ ಲಕ್ಷಣವಾಗಿರುತ್ತದೆ. ದೇಹದಲ್ಲಿ ಆಮ್ಲಜನಕದ ಕೊರತೆಯಿಂದ ತಲೆತಿರುಗುವುದು, ತಲೆನೋವು ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ ಉಗುರುಗಳು ಸರಿಯಾಗಿ ಬೆಳೆಯುವುದಿಲ್ಲ ಅಥವಾ ಸ್ವಲ್ಪ ದೊಡ್ಡದಾದ ಕೂಡಲೇ ಮುರಿಯಬಹುದು. ಇಂತಹ ಸಮಸ್ಯೆಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ರಕ್ತಹೀನತೆಯನ್ನು ನಿವಾರಿಸಲು ಕೇವಲ ಔಷಧಿ ಸೇವನೆ ಮಾತ್ರ ಸಾಕಾಗುವುದಿಲ್ಲ. ಸರಿಯಾದ ಆಹಾರ ಪದ್ಧತಿಯೂ ಮುಖ್ಯವಾಗಿದೆ. ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಸೀಮೆಬದನೆ, ಮಾಂಶ ಮತ್ತು ವಿವಿಧ ದ್ವಿದಳ ಧಾನ್ಯಗಳು, ಬ್ರೊಕೊಲಿ, ಮೀನು ಮುಂತಾದ ಪೌಷ್ಟಿಕ ಆಹಾರಗಳನ್ನು ಸೇವಿಸುವುದು ಉತ್ತಮ. ಸರಿಯಾದ ಆಹಾರ ಸೇವನೆಯಿಂದ ಕಬ್ಬಿಣದ ಕೊರತೆಯನ್ನು ಕಡಿಮೆಮಾಡಿ ದೇಹವನ್ನು ಆರೋಗ್ಯಕರವಾಗಿಡಬಹುದು.

ನೋಡಿರಿ

