ಹುಲಿ ಬಿಟ್ಟು ಇಲಿ ಹಿಡಿದ ಬಾಂಗ್ಲಾ – ವಿಶ್ವಕಪ್-ಡೊಮೆಸ್ಟಿಕ್ ಒಂದೇನಾ?
BCBಯ ಅಂತ್ಯ ಕಾಲ ಆರಂಭ!

ಹುಲಿ ಬಿಟ್ಟು ಇಲಿ ಹಿಡಿದ ಬಾಂಗ್ಲಾ – ವಿಶ್ವಕಪ್-ಡೊಮೆಸ್ಟಿಕ್ ಒಂದೇನಾ?BCBಯ ಅಂತ್ಯ ಕಾಲ ಆರಂಭ!

ಬಿಸಿಸಿಐ ಮುಂದೆ ಬಿಲ್ಡಪ್ ಕೊಟ್ಟು ಐಸಿಸಿ ಎದುರು ಹೀರೋ ಆಗೋಕೆ ಹೋಗಿ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿರೋ ಬಾಂಗ್ಲಾದೇಶ ಈಗ ಅತಂತ್ರ ಸ್ಥಿತಿಯಲ್ಲಿದೆ. ಅಟ್​ಪ್ರಸೆಂಟ್ ಏನ್ ಮಾಡ್ಬೇಕು ಅಂತಾ ಗೊತ್ತಾಗ್ದೇ ಏನೇನೋ ಗಿಮಿಕ್ ಮಾಡ್ತಿದೆ. ವಿಶ್ವಕಪ್ ಟೈಮಲ್ಲಿ ಆಟಗಾರರನ್ನ ಎಂಗೇಜ್ ಮಾಡ್ಬೇಕು, ಛೇ ಐಸಿಸಿ ಟೂರ್ನಿ ಮಿಸ್ ಮಾಡ್ಕೊಂಡ್ವಿ ಅನ್ನಿಸಬಾರದು, ಅವ್ರ ಮೈಂಡ್ ಡೈವರ್ಟ್ ಮಾಡ್ಬೇಕು ಅಂತಾ ಹೊಸ ಪಂದ್ಯಾವಳಿಯನ್ನೇ ಘೋಷಣೆ ಮಾಡಿದೆ.

ಇದನ್ನೂ ಓದಿ : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್!‌ – ಇನ್ಮುಂದೆ ಈ ತಪ್ಪುಗಳನ್ನು ಮಾಡಿದ್ರೆ ಶಿಕ್ಷೆ ಫಿಕ್ಸ್!‌

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗೆ ಭಾರತದಲ್ಲಿ ಬಾಂಗ್ಲಾದೇಶದ ಆಟಗಾರರು ಬಿಂದಾಸ್ ಆಗಿ ಪ್ರಾಕ್ಟೀಸ್ ಶುರು ಮಾಡ್ಬೇಕಿತ್ತು. ಆದ್ರೆ ನಮಗೆ ಸೇಫ್ ಇಲ್ಲ ಭದ್ರತೆ ಇಲ್ಲ ಅದು ಇದು ಅಂತಾ ಕಥೆ ಹೊಡ್ಕೊಂಡು ವಾರಗಟ್ಲೇ ಐಸಿಸಿ ಮುಂದೆ ಡ್ರಾಮಾ ಮಾಡ್ಕೊಂಡು ಕೊನೆಗೆ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಅವ್ರ ಪ್ಲೇಸಲ್ಲಿ ಸ್ಕಾಟ್ಲೆಂಡ್ ಪ್ಲೇಯರ್ಸ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸೋ ಕ್ರಿಕೆಟ್ ಜಗತ್ತೇ ಟಿ-20 ವಿಶ್ವಕಪ್​ನಲ್ಲಿ ಬ್ಯುಸಿ ಇರೋ ಟೈಮಲ್ಲಿ ನಾವ್ಯಾಕೆ ಖಾಲಿ ಕೂತ್ಕೊಳ್ಳೋದು ಅಂತಾ ಹೊಸ ಪಂದ್ಯಾವಳಿಯನ್ನೇ ಘೋಷಿಸಿದ್ದಾರೆ.

ಒಡೊಮ್ಮೊ ಬಾಂಗ್ಲಾದೇಶ ಟಿ20 ಕಪ್ 2026 ಆರಂಭ!

ಟಿ-20 ವಿಶ್ವಕಪ್​ನಿಂದಲೇ ಹೊರ ಬಿದ್ದ ಬಾಂಗ್ಲಾ ಈಗ ಆಲ್ಟರ್​ನೇಟಿವ್ ಪ್ಲ್ಯಾನ್ ಮಾಡ್ಕೊಂಡಿದೆ. ಒಡೊಮ್ಮೊ ಬಾಂಗ್ಲಾದೇಶ ಟಿ20 ಕಪ್ 2026 ಎಂಬ ಹೆಸರಿನಲ್ಲಿ ಹೊಸ ದೇಶೀಯ ಸ್ಪರ್ಧೆಯನ್ನು ಆಯೋಜನೆ ಮಾಡಲು ಘೋಷಣೆ ಮಾಡಿದೆ. ಬಾಂಗ್ಲಾದಲ್ಲಿ ಅದಮ್ಯ ಎಂಬ ಅರ್ಥವನ್ನು ನೀಡುವ ಒಡೊಮ್ಮೊ ಫೆಬ್ರವರಿ 5 ರಿಂದ 9 ರವರೆಗೆ ನಡೆಯಲಿದೆ. ಅಲ್ಲಿನ ವೈಟ್-ಬಾಲ್ ಮಾದರಿಯ ಆಟಗಾರರನ್ನ ಒಗ್ಗೂಡಿಸಿ ಈ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಆಟಗಾರರನ್ನ ಮೂರು ತಂಡಗಳಾಗಿ ವಿಂಗಡಣೆ ಮಾಡಿದ್ದು, ಧುಮ್ಕೇತು ಇಲೆವೆನ್, ದರ್ಬಾರ್ ಇಲೆವೆನ್ ಮತ್ತು ಡುರೊಂಟೊ ಇಲೆವೆನ್ ಎಂಬ ಮೂರು ತಂಡಗಳನ್ನು ಘೋಷಿಸಲಾಗಿದೆ.

ಮೂರು ತಂಡಗಳ ನಡುವಿನ ಫೈಟ್ ನಲ್ಲಿ ಫೆ.9ಕ್ಕೆ ಫೈನಲ್!

ಇನ್ನು ಪಂದ್ಯಾವಳಿಯಲ್ಲಿ 3 ತಂಡಗಳು ಭಾಗಿಯಾಗಲಿವೆ. ಬಾಂಗ್ಲಾದೇಶ ಟಿ20ಐ ನಾಯಕ ಲಿಟ್ಟನ್ ಕುಮಾರ್ ದಾಸ್ ಧುಮ್ಕೇತು ಇಲೆವೆನ್ ತಂಡವನ್ನು ಲೀಡ್ ಮಾಡ್ತಾರೆ. ನಜ್ಮುಲ್ ಹೊಸೇನ್ ಶಾಂಟೊ ಅವರನ್ನು ದರ್ಬಾರ್ ಇಲೆವೆನ್ ತಂಡಕ್ಕೆ ನಾಯಕರನ್ನಾಗಿ ನೇಮಿಸಲಾಗಿದೆ ಮತ್ತು ಅಕ್ಬರ್ ಅಲಿ ಅವರನ್ನು ಡುರೊಂಟೊ ಇಲೆವೆನ್ ತಂಡಕ್ಕೆ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಟ್ರಾವೆಲ್ ಮಾಡಲು ಒಪ್ಪದ ಬಿಸಿಬಿ ಈ ಪಂದ್ಯಾವಳಿಯನ್ನ ಆಯೋಜಿಸಿದೆ. ODOMMO ಬಾಂಗ್ಲಾದೇಶ T20 ಕಪ್ ಅನ್ನು ಸಾಂಕೇತಿಕವಾಗಿ ಅಷ್ಟೇ ಅಲ್ದೇ ಸ್ಪರ್ಧಾತ್ಮಕ ಪಂದ್ಯಾವಳಿಯಾಗಿಯೂ ಆಯೋಜಿಸಲಿದೆ. ಮಂಡಳಿ ಪ್ರಕಾರ, ಸ್ಪರ್ಧೆಯಲ್ಲಿ ಮೂರು ತಂಡಗಳು ಭಾಗವಹಿಸಲಿದ್ದು, ತಲಾ 2.5 ಕೋಟಿ ರೂಪಾಯಿಗಳ ಬಹುಮಾನ ಮತ್ತು ಶುಲ್ಕವನ್ನು ನೀಡಲಾಗುತ್ತದೆ ಎಂದು ಮಂಡಳಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.  ಇನ್ನು ಈ ಸ್ಪರ್ಧೆಯು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸಲಿದ್ದು, ಗುಂಪು ಹಂತದ ಮೂರು ಪಂದ್ಯಗಳನ್ನು ಫೆಬ್ರವರಿ 5, 6 ಮತ್ತು 7 ರಂದು ನಿಗದಿಪಡಿಸಲಾಗಿದೆ, ಆದರೆ ಫೈನಲ್ ಫೆಬ್ರವರಿ 9 ರಂದು ನಡೆಯಲಿದೆ. ಹಾಗೇ ಅಭಿಮಾನಿಗಳ ಕ್ರೇಜ್ ಹೆಚ್ಚಿಸಲು ಕ್ರೀಡಾಂಗಣಗಳಿಗೆ ಕರೆತರಲು ಬಿಸಿಬಿ ಟಿಕೆಟ್ ಬೆಲೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಌಕ್ಚುಲಿ ಇಲ್ಲಿ ಬಾಂಗ್ಲಾ ಆಟಗಾರರು ಟಿ-20 ವಿಶ್ವಕಪ್ ಆಡೋ ಜೋಶ್​ನಲ್ಲಿದ್ರು. ಆದ್ರೆ ಬಿಸಿಬಿ ನಿರ್ಧಾರದಿಂದಾಗಿ ಸಹಜವಾಗಿಯೇ ಬೇಸರಗೊಂಡಿದ್ದಾರೆ. ಹೀಗಿದ್ರೂ ಪ್ಲೇಯರ್​ಗಳ ನಿರಾಸೆ ಹೋಗಲಾಡಿಸೋಕೆ ಪಂದ್ಯಾವಳಿಯನ್ನೇ ಸ್ಟಾರ್ಟ್ ಮಾಡಿದ್ದಾರೆ. ಆದ್ರೆ ಬಿಸಿಬಿಐ ಈ ನಿರ್ಧಾರ ಹೇಗೆ ವರ್ಕೌಟ್ ಆಗುತ್ತೆ ನೋಡ್ಬೇಕು.

Shantha Kumari