ಸಿಲಿಕಾನ್ ಸಿಟಿ ಸಿಕ್ಕಾಪಟ್ಟೆ ದುಬಾರಿ! – ಇನ್ಮುಂದೆ ಈ ಏರಿಯಾಗಳಲ್ಲಿ ಪೇ ಅಂಡ್ ಪಾರ್ಕಿಂಗ್!

ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಮಹತ್ವದ ಸುದ್ದಿಯಿದೆ. ಇನ್ಮುಂದೆ ಬೆಂಗಳೂರಿನ ಈ ಏರಿಯಾದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ ಶುಲ್ಕ ಪಾವತಿಸಬೇಕು. ಇದೀಗ ಪೇ ಆಂಡ್ ಪಾರ್ಕಿಂಗ್ ಆರಂಭಕ್ಕೆ ಟೆಂಡರ್ ಕರೆಯಲಾಗಿದೆ.
ಇದನ್ನೂ ಓದಿ: ಮಾರಿಕಾಂಬೆ ದೇವಿ ದರ್ಶನಕ್ಕೆ ತೆರಳಿದ್ದಾಗ ಕುಸಿದು ಬಿದ್ದ ಮಾಜಿ ಸಚಿವ! – ಕಾಗೋಡು ತಿಮ್ಮಪ್ಪ ಆಸ್ಪತ್ರೆಗೆ ದಾಖಲು!
ಶಾಪಿಂಗ್ ಹಬ್ ಆಗಿರುವ ಮಲ್ಲೇಶ್ವರಂನಲ್ಲಿ ಸಂಚಾರ ದಟ್ಟಣೆ ದಿನೇ ದಿನೆ ಹೆಚ್ಚಾಗ್ತಿದೆ. ರಸ್ತೆಬದಿ, ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಹೀಗಾಗಿ ಮಲ್ಲೇಶ್ವರದ ಏಳು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ಶುರು ಮಾಡಲು ಶೀಘ್ರದಲ್ಲೇ ಆರಂಭಿಸಲು ಟೆಂಡರ್ ಆಹ್ವಾನಿಸಿದೆ.
ಪ್ರತಿ ಗಂಟೆಗೆ ನಾಲ್ಕು ಚಕ್ರದ ವಾಹನಗಳಿಗೆ 30 ರೂಪಾಯಿ ದ್ವಿಚಕ್ರ ವಾಹನಗಳಿಗೆ 15 ರೂ. ದರವನ್ನು ನಿಗದಿ ಮಾಡಲಾಗಿದೆ. ಪೇ ಅಂಡ್ ಪಾರ್ಕಿಂಗ್ಗೆ ದಿನದ ಪಾಸ್ ಕೂಡ ವ್ಯವಸ್ಥೆ ಮಾಡುವುದಕ್ಕೂ ಪ್ಲ್ಯಾನ್ ಮಾಡಲಾಗುತ್ತಿದೆ.
ಏಳು ರಸ್ತೆಗಳು ಯಾವುದು?
ಸಂಪಿಗೆ ರಸ್ತೆ, ಮಲ್ಲೇಶ್ವರಂ 18ನೇ ರಸ್ತೆ, ಮಲ್ಲೇಶ್ವರಂ 15ನೇ ರಸ್ತೆ, ಮಲ್ಲೇಶ್ವರಂ 11ನೇ ರಸ್ತೆ, ಮಲ್ಲೇಶ್ವರಂ 8 ನೇ ರಸ್ತೆ, ಮಲ್ಲೇಶ್ವರಂ 4ನೇ ಮುಖ್ಯ ರಸ್ತೆ, ಮಲ್ಲೇಶ್ವರಂ 2ನೇ ಮುಖ್ಯ ರಸ್ತೆಯಲ್ಲಿ ಆರಂಭದಲ್ಲಿ ಜಾರಿಗೆ ಬರಲಿದೆ.

ನೋಡಿರಿ

